ಬಿಎಸ್ವೈ ಪ್ರಮಾಣ ವಚನ ಸ್ವೀಕರಿಸುವಾಗ ಮಹೇಶ್ ಕುಮಟಳ್ಳಿ ಒಬ್ಬ ಬಿಟ್ಟು ಉಳಿದ ತೃಪ್ತ ಶಾಸಕರಿಗೆ ಪ್ರಮಾಣ ವಚನ ನೀಡಲೇಬೇಕು. ಇಲ್ಲಾಂದ್ರೆ ಯಾರೂ ಯಡಿಯೂರಪ್ಪರನ್ನು ಸುಮ್ಮನ್ನೇ ಬಿಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮುಂಬೈನ ರೆನೈಸೆನ್ಸ್ ರೆಸಾರ್ಟ್ ನಲ್ಲಿ ತಂಗಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದ್ದರೂ ಸಹ ಅವರು ಸದನಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ "ಮಾತನಾಡಬೇಕಿದ್ದ ಮಹಾಶೂರರು ವಿಧಾನ ಸಭೆಯಲ್ಲಿ ನಾಪತ್ತೆ" ಎಂದು ವ್ಯಂಗ್ಯವಾಡಿತ್ತು.
ಮೈತ್ರಿ ಸರ್ಕಾರ ತನ್ನ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅಲ್ಲದೆ, ಮೈತ್ರಿ ಸರ್ಕಾರ ರಾಜ್ಯದ ಅಭಿವೃದ್ಧಿಯಲ್ಲಿ ವಿಫಲವಾಗಿದೆ ಎಂದು ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಅತೃಪ್ತ ಶಾಸಕರು ನೀಡಿರುವ ರಾಜೀನಾಮೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ. ರಾಜೀನಾಮೆ ಅಂಗೀಕಾರಕ್ಕೆ ಅದರದ್ದೇ ಆದ ನಿಯಮಗಳಿವೆ. ಅದರಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ವಿಧಾನಸೌಧಕ್ಕೆ ಆಗಮಿಸುವ ವೇಳೆಗೆ ಸಮಯ 6 ಗಂಟೆ ಮೀರಿದ್ದ ಹಿನ್ನೆಲೆಯಲ್ಲಿ ಬಸ್ ಇಳಿಯುತ್ತಿದ್ದಂತೆ ಶಾಸಕ ಬೈರತಿ ಬಸವರಾಜು ಸೇರಿದಂತೆ ಇತರ ಶಾಸಕರು ಸಮಯ ಮೀರಿದ್ದರಿಂದ ಓಡೋಡಿ ಸ್ಪೀಕರ್ ಕಚೇರಿ ತಲುಪಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ. ರಾಜಕಾರಣದಲ್ಲೇ ಇರಬೇಕು ಎಂಬ ಅನಿವಾರ್ಯತೆ ನಮಗಿಲ್ಲ. ಮನೆಯಲ್ಲಿ ಬೇಕಾದರೂ ಇರುತ್ತೇವೆ ಆದರೆ ರಾಜೀನಾಮೆ ವಾಪಸ್ ಪಡೆಯಲ್ಲ ಎಂದು ಅತೃಪ್ತ ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ.
ಬೆಳಿಗ್ಗೆಯಿಂದ ರಾಜೀನಾಮೆ ಸಲ್ಲಿಸಲು ವಿಧಾನಸಭೆಯ ಸ್ಪೀಕರ್ ಕಚೇರಿಯಲ್ಲಿ ಕಾದು ಕುಳಿತಿದ್ದ ಅತೃಪ್ತ ಶಾಸಕರು, ಸ್ಪೀಕರ್ ಕಚೇರಿಯಲ್ಲಿ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿ, ಸ್ವಿಕೃತಿ ಪಡೆದು ರಾಜಭವನದತ್ತ ತೆರಳಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.