ICC Award: ಫೆಬ್ರವರಿ ತಿಂಗಳಲ್ಲಿ ಮಿಂಚಿನ ಪ್ರದರ್ಶನ: ದಿಗ್ಗಜರನ್ನೇ ಹಿಂದಿಕ್ಕಿ ಐಸಿಸಿ ಪ್ರಶಸ್ತಿ ಗೆದ್ದ ಯಶಸ್ವಿ ಜೈಸ್ವಾಲ್

Yashasvi Jaiswal ICC Award: ಜೈಸ್ವಾಲ್ ಅವರಲ್ಲದೆ, ನ್ಯೂಜಿಲೆಂಡ್‌’ನ ಸ್ಟಾರ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಮತ್ತು ಶ್ರೀಲಂಕಾದ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕಾ ಅವರ ಹೆಸರನ್ನು ಐಸಿಸಿ ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ, ಆದರೆ ಯಶಸ್ವಿ ಇಬ್ಬರೂ ಆಟಗಾರರನ್ನು ಹಿಂದಿಕ್ಕುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Written by - Bhavishya Shetty | Last Updated : Mar 12, 2024, 05:25 PM IST
    • ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್
    • ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಐಸಿಸಿ ಪ್ರಶಸ್ತಿ ಪಡೆದಿದ್ದಾರೆ
    • ಫೆಬ್ರವರಿ ತಿಂಗಳಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಧಾರದ ಮೇಲೆ ಈ ಗೌರವ
ICC Award: ಫೆಬ್ರವರಿ ತಿಂಗಳಲ್ಲಿ ಮಿಂಚಿನ ಪ್ರದರ್ಶನ: ದಿಗ್ಗಜರನ್ನೇ ಹಿಂದಿಕ್ಕಿ ಐಸಿಸಿ ಪ್ರಶಸ್ತಿ ಗೆದ್ದ ಯಶಸ್ವಿ ಜೈಸ್ವಾಲ್ title=
Yashasvi Jaiswal

Yashasvi Jaiswal ICC Award: ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಐಸಿಸಿ ಪ್ರಶಸ್ತಿ ಪಡೆದಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಧಾರದ ಮೇಲೆ ಈ ಗೌರವ ನೀಡಲಾಗಿದೆ,

ಜೈಸ್ವಾಲ್ ಅವರಲ್ಲದೆ, ನ್ಯೂಜಿಲೆಂಡ್‌’ನ ಸ್ಟಾರ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಮತ್ತು ಶ್ರೀಲಂಕಾದ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕಾ ಅವರ ಹೆಸರನ್ನು ಐಸಿಸಿ ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ, ಆದರೆ ಯಶಸ್ವಿ ಇಬ್ಬರೂ ಆಟಗಾರರನ್ನು ಹಿಂದಿಕ್ಕುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ಈ ತರಕಾರಿ ಬೇಯಿಸಿದ ನೀರನ್ನು ಕೂದಲಿಗೆ ಹಚ್ಚಿ: 5 ದಿನದಲ್ಲಿ ಬಿಳಿಕೂದಲು ಬುಡದಿಂದಲೇ ಕಪ್ಪು ಬಣ್ಣಕ್ಕೆ ತಿರುಗುತ್ತದೆ!

ಯಶಸ್ವಿ ಜೈಸ್ವಾಲ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಆಡಿದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಎರಡು ದ್ವಿಶತಕ ಸೇರಿದಂತೆ, ಫೆಬ್ರವರಿ ತಿಂಗಳಲ್ಲಿ 112ರ ಸರಾಸರಿಯಲ್ಲಿ 560 ರನ್ ಗಳಿಸಿದ್ದಾರೆ. ಈ ಅದ್ಭುತ ಪ್ರದರ್ಶನದ ಮೇಲೆ ಯಶಸ್ವಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್’ಗೆ ಆಘಾತ… IPLಗೆ ಸೂರ್ಯಕುಮಾರ್ ಅಲಭ್ಯ! ಮಿಸ್ಟರ್ 360 ಹೊರಗುಳಿಯಲು ಕಾರಣ ಇದುವೇ!

ಐಸಿಸಿಯಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಯಶಸ್ವಿ ಜೈಸ್ವಾಲ್ ಮಾತನಾಡಿ, “ಈ ಪ್ರಶಸ್ತಿಯನ್ನು ಸ್ವೀಕರಿಸಿದ ನನಗೆ ತುಂಬಾ ಸಂತೋಷವಾಗಿದೆ.ಭವಿಷ್ಯದಲ್ಲಿ ನಾನು ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯಬೇಕು ಎಂದುಕೊಂಡಿದ್ದೇನೆ. ಇದು ನನ್ನ ಮೊದಲ ಐದು ಪಂದ್ಯಗಳ ಟೆಸ್ಟ್ ಸರಣಿ. ನನ್ನ ಸಹ ಆಟಗಾರರೊಂದಿಗೆ ಉತ್ತಮ ಅನುಭವವನ್ನು ಹೊಂದಿದ್ದೆ. ನಾನು ಅಭ್ಯಾಸದ ಅವಧಿಗಳಲ್ಲಿ ನನ್ನ ಕಠಿಣ ಪರಿಶ್ರಮವನ್ನು ಮುಂದುವರಿಸುತ್ತೇನೆ ಮತ್ತು ಹಿರಿಯರಿಂದ ಕಲಿಯಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News