ನವದೆಹಲಿ: ಸೌತಾಂಪ್ಟನ್ ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಕ್ರಿಕೆಟ್ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು 217 ರನ್ ಗಳಿಗೆ ತನ್ನ ಮೊದಲ ಇನಿಂಗ್ಸ್ ನಲ್ಲಿ ಸರ್ವಪತನ ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮೊದಲು ಕ್ಷೇತ್ರ ರಕ್ಷಣೆ ಆಯ್ದುಕೊಂಡಿದ್ದ ನ್ಯೂಜಿಲೆಂಡ್ (New Zealand) ತಂಡದ ಲೆಕ್ಕಾಚಾರಗಳೆಲ್ಲಾ ಈಗ ಕೈಹಿಡಿದಿವೆ. ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಅದು ಯಶಸ್ವಿಯಾಗಿದೆ.
ಇದನ್ನೂ ಓದಿ: WTC Final 2021: ಭಾರತಕ್ಕೆ ಕೊಹ್ಲಿ, ರಹಾನೆ ಆಸರೆ, ಎರಡನೇ ದಿನದಾಂತ್ಯಕ್ಕೆ 146/3
ನ್ಯೂಜಿಲೆಂಡ್ ತಂಡದ ಪರವಾಗಿ ಜೆಮಿಸನ್ ಐದು ವಿಕೆಟ್ ಗಳನ್ನು ಕಬಳಿಸಿದರೆ, ಬೌಲ್ಟ್ ಮತ್ತು ವ್ಯಾಗ್ನರ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.ಭಾರತ ತಂಡದ ಪರವಾಗಿ ನಾಯಕ ವಿರಾಟ್ ಕೊಹ್ಲಿ 44, ಹಾಗೂ ರಹಾನೆ 49 ಈ ಇಬ್ಬರು ಆಟಗಾರು ಹೊರತು ಪಡಿಸಿ ಉಳಿದವರು ಯಾರೂ ಕೂಡ 40 ಗಡಿದಾಟಲಿಲ್ಲ ಹೀಗಾಗಿ ತಂಡವು ಶೀಘ್ರಪತನವನ್ನು ಕಂಡಿತು.
#TeamIndia 🇮🇳 strike at the stroke of Stumps on Day 3️⃣
Ishant picks half-centurion Conway 👌🏻
New Zealand 🇳🇿 lose 2️⃣ wickets
Day 4️⃣ promises to be an exciting one tomorrow #WTC21
Scorecard 👉 https://t.co/CmrtWscFua pic.twitter.com/VkQdragnbr
— BCCI (@BCCI) June 20, 2021
ಇದನ್ನೂ ಓದಿ: IND VS NZ: ಭಾರೀ ಮಳೆಯ ನಂತರ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆಯಾಗಬಹುದೇ? ಕೋಚ್ ಹೇಳಿದ್ದೇನು
ಇನ್ನೊಂದೆಡೆಗೆ ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ತಂಡವು ಉತ್ತಮ ಆರಂಭವನ್ನೇ ಕಂಡಿದೆ.ಈಗ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸುವ ಮೂಲಕ ಸುಸ್ಥಿತಿಯಲ್ಲಿದೆ.ಆರಂಭಿಕ ಆಟಗಾರ ಟಾಮ್ ಲಾಥಂ 30 ಡೆವನ್ ಕಾನ್ವೆ 54 ರನ್ ಗಳನ್ನು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ಹಾಕಿದರು. ಈಗ ನ್ಯೂಜಿಲೆಂಡ್ ತಂಡವು ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 117 ರನ್ ಗಳಿಸಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.