Wrestlers Protest: 'ಗಂಗಾ ನದಿಯಲ್ಲಿ ಪದಕ ಹರಿಬಿಟ್ಟು, ಇಂಡಿಯಾ ಗೇಟ್ ಬಳಿ ಅನಿರ್ಧಿಷ್ಟಾವಧಿ ಉಪವಾಸ', ಕುಸ್ತಿಪಟುಗಳ ಘೋಷಣೆ

Wrestlers Protest: ಪ್ರತಿಭಟನಾ ನಿರತ ಕುಸ್ತಿಪಟುಗಳು ಇದೀಗ ಹರಿದ್ವಾರಕ್ಕೆ ತೆರಳಿ ತಾವು ಕುಸ್ತಿ ಕ್ರೀಡಾಕೂಟದಲ್ಲಿ ಗೆದ್ದ ಪದಕಗಳನ್ನು ಗಂಗೆಯಲ್ಲಿ  ಹರಿಬಿಡಲು ನಿರ್ಧರಿಸಿದ್ದಾರೆ. ಈ ಕುರಿತು ಖ್ಯಾತ ಕುಸ್ತಿಪಟು ಬಜರಂಗ್ ಪುನಿಯಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.  

Written by - Nitin Tabib | Last Updated : May 30, 2023, 02:52 PM IST
  • ಈ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಸುಮಾರು ಒಂದು ತಿಂಗಳ ಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದರು.
  • ಆದರೆ ಭಾನುವಾರ (ಮೇ 28) ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಂಗೀತಾ ಫೋಗಟ್, ಸಾಕ್ಷಿ ಮಲಿಕ್ ಮತ್ತು ಇತರ ಹಲವರನ್ನು ಮಹಿಳಾ ಮಹಾಪಂಚಾಯತ್‌ಗಾಗಿ
  • ಹೊಸ ಸಂಸತ್ ಭವನದ ಕಡೆಗೆ ಮೆರವಣಿಗೆ ಮಾಡಲು ಪ್ರಯತ್ನಿಸುತ್ತಿದ್ದಾಗ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಜಂತರ್ ಮಂತರ್‌ನಿಂದ ಪ್ರತಿಭಟನಾಕಾರರ ಸಾಮಾನುಗಳನ್ನು ತೆರೆವುಗೊಳಿಸಿದ್ದಾರೆ.
Wrestlers Protest: 'ಗಂಗಾ ನದಿಯಲ್ಲಿ ಪದಕ ಹರಿಬಿಟ್ಟು, ಇಂಡಿಯಾ ಗೇಟ್ ಬಳಿ ಅನಿರ್ಧಿಷ್ಟಾವಧಿ ಉಪವಾಸ', ಕುಸ್ತಿಪಟುಗಳ ಘೋಷಣೆ title=

Wrelstler To Stage Hunger Protest At India Gate: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ಅಂತ್ಯಗೊಂಡ ನಂತರ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಇದೀಗ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಪ್ರತಿಭಟನಾ ನಿರತ ಕುಸ್ತಿಪಟುಗಳು ಇದೀಗ ಹರಿದ್ವಾರಕ್ಕೆ ತೆರಳಿ ಕುಸ್ತಿ ಕ್ರೀಡಾಕೂಟಗಳಲ್ಲಿ ತಾವು ಗೆದ್ದ ಪದಕಗಳನ್ನು ಗಂಗೆಯಲ್ಲಿ ಹರಿಬಿಡಲು ಅವರು ನಿರ್ಧರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಖ್ಯಾತ ಕುಸ್ತಿಪಟು ಬಜರಂಗ್ ಪುನಿಯಾ, ಇಂದು ಸಂಜೆ 6 ಗಂಟೆಗೆ ಹರಿದ್ವಾರದ ಗಂಗಾ ನದಿಯಲ್ಲಿ ನಮ್ಮ ಪದಕಗಳನ್ನು ಹಾರಿಬಿಡಲಿದ್ದೇವೆ ಎಂದು ಹೇಳಿದ್ದಾರೆ. ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಹರಿಬಿಟ್ಟ ನಂತರ ಮತ್ತೊಮ್ಮೆ ಇಂಡಿಯಾ ಗೇಟ್‌ನಲ್ಲಿ ಕುಳಿತು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಕುಸ್ತಿಪಟುಗಳು, “ಈ ಪದಕಗಳು ನಮ್ಮ ಜೀವನ, ನಮ್ಮ ಆತ್ಮ. ಇಂದು ಅವುಗಳನ್ನು ನಾವು ಗಂಗಾ ನದಿಯಲ್ಲಿ ಹರಿಬಿಟ್ಟ ಬಳಿಕ ನಮ್ಮ ಬಳಿ ಬದುಕಲು ಯಾವುದೇ ಕಾರಣ ಉಳಿಯುವುದಿಲ್ಲ, ಆದ್ದರಿಂದ ನಾವು ಇಂಡಿಯಾ ಗೇಟ್‌ನಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ" ಎಂದು ಹೇಳಿದ್ದಾರೆ.

 

ಈ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಸುಮಾರು ಒಂದು ತಿಂಗಳ ಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಭಾನುವಾರ (ಮೇ 28) ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಂಗೀತಾ ಫೋಗಟ್, ಸಾಕ್ಷಿ ಮಲಿಕ್ ಮತ್ತು ಇತರ ಹಲವರನ್ನು ಮಹಿಳಾ ಮಹಾಪಂಚಾಯತ್‌ಗಾಗಿ ಹೊಸ ಸಂಸತ್ ಭವನದ ಕಡೆಗೆ ಮೆರವಣಿಗೆ ಮಾಡಲು ಪ್ರಯತ್ನಿಸುತ್ತಿದ್ದಾಗ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಜಂತರ್ ಮಂತರ್‌ನಿಂದ ಪ್ರತಿಭಟನಾಕಾರರ ಸಾಮಾನುಗಳನ್ನು ತೆರೆವುಗೊಳಿಸಿದ್ದಾರೆ.

ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡ ಕುಸ್ತಿಪಟು ಸಾಕ್ಷಿ ಮಲಿಕ್, “ನಾವು ಈ ಪದಕಗಳನ್ನು ಶುದ್ಧತೆಯಿಂದ ಗಳಿಸಿದ್ದೇವೆ. ಈ ಪದಕಗಳನ್ನು ಧರಿಸಿ, ವೇಗದ ಬಿಳಿ ವ್ಯವಸ್ಥೆ ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ ಮತ್ತು ನಂತರ ನಮ್ಮನ್ನು ಶೋಷಣೆಗೆ ಒಳಪಡಿಸುತ್ತದೆ.  ರಾಷ್ಟ್ರಪತಿ ಮತ್ತು ಪ್ರಧಾನಿಗೆ ಈ ಪದಕಗಳನ್ನು ನಾವು ಹಿಂತಿರುಗಿಸುವುದಿಲ್ಲ, ಏಕೆಂದರೆ ಅವರು ನಮ್ಮ ಬಗ್ಗೆ ಕಾಳಜಿ ವಹಿಸಲಿಲ್ಲ" ಎಂದು ಬರೆದುಕೊಂಡಿದ್ದಾರೆ. 

 

 

ಇದನ್ನೂ ಓದಿ- 'ಗುಂಡಿನೇಟು ತಿನ್ನಲು ಎಲ್ಲಿಗೆ ಬರಬೇಕು ಹೇಳಿ, ಪ್ರಮಾಣ ಮಾಡುತ್ತೇವೆ ಬೆನ್ನು ತೋರಿಸಲ್ಲ'

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಪ್ರತಿಭಟನಾನಿರತ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ-Delhi: 16 ವರ್ಷದ ಅಪ್ರಾಪ್ತೆಯನ್ನು ಕೊಚ್ಚಿ ಕೊಲೆಗೈದ ತಲೆತಿರುಕ, ಬುಲಂದ್ ಶಹರ್ ನಲ್ಲಿ ಆರೋಪಿ ಸಾಹಿಲ್ ಬಂಧನ

ಇದಕ್ಕೂ ಮುನ್ನ, ಮಂಗಳವಾರ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಜೂನ್ 1 ರಂದು ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ನಮ್ಮ ಸಭೆಯಲ್ಲಿ ಬಜರಂಗ್ ಕೂಡ ಭಾಗವಹಿಸಿದ್ದರು ಎಂದು ಎಸ್.ಕೆ.ಎಂ (ಸಂಯುಕ್ತ ಕಿಸಾನ್ ಮೋರ್ಚಾ) ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News