ಫೈನಲ್’ಗೂ ಮುನ್ನ ಮೊಹಮ್ಮದ್ ಶಮಿಗೆ ಭರ್ಜರಿ ಗಿಫ್ಟ್ ಕೊಟ್ಟ ಯೋಗಿ ಆದಿತ್ಯನಾಥ್! ಜೀವಮಾನದ ಬೆಸ್ಟ್ ಎಂದ ವೇಗಿ

World Cup 2023: ಮೊಹಮ್ಮದ್ ಶಮಿ ಅವರ ಹುಟ್ಟೂರಾದ ಅಮ್ರೋಹಾದ ಸಹಸ್‌ಪುರ ಅಲಿನಗರದಲ್ಲಿ ಮಿನಿ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಯೋಗಿ ಸರ್ಕಾರ ಘೋಷಿಸಿದೆ. ಈ ಘೋಷಣೆಯಿಂದ ಗ್ರಾಮದ ಜನರಲ್ಲಿ ಸಂತಸದ ವಾತಾವರಣ ಮೂಡಿದ್ದು, ಸಿಡಿಒ ಅಶ್ವನಿ ಕುಮಾರ್ ಮಿಶ್ರಾ ಮತ್ತು ಇತರ ಅಧಿಕಾರಿಗಳು ಜೋಯಾ ಡೆವಲಪ್‌ಮೆಂಟ್ ಬ್ಲಾಕ್‌’ನಲ್ಲಿರುವ ಶಮಿ ಹುಟ್ಟೂರಿಗೆ ಭೇಟಿ ನೀಡಿದ್ದಾರೆ.

Written by - Bhavishya Shetty | Last Updated : Nov 18, 2023, 03:15 PM IST
    • ಮೊಹಮ್ಮದ್ ಶಮಿಗೆ ಯೋಗಿ ಆದಿತ್ಯನಾಥ್ ಅವರು ಭರ್ಜರಿ ಉಡುಗೊರೆ ನೀಡಿದ್ದಾರೆ
    • 2023ರ ವಿಶ್ವಕಪ್‌’ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗ ಮೊಹಮ್ಮದ್ ಶಮಿ
    • ಮಿನಿ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಯೋಗಿ ಸರ್ಕಾರ ಘೋಷಿಸಿದೆ
ಫೈನಲ್’ಗೂ ಮುನ್ನ ಮೊಹಮ್ಮದ್ ಶಮಿಗೆ ಭರ್ಜರಿ ಗಿಫ್ಟ್ ಕೊಟ್ಟ ಯೋಗಿ ಆದಿತ್ಯನಾಥ್! ಜೀವಮಾನದ ಬೆಸ್ಟ್ ಎಂದ ವೇಗಿ title=
Yogi Adityanath Gift to Mohammad Shami

World Cup 2023: 2023ರ ವಿಶ್ವಕಪ್‌’ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌’ಗೂ ಮುನ್ನವೇ ಯೋಗಿ ಸರ್ಕಾರ ಮೊಹಮ್ಮದ್ ಶಮಿಗೆ ಉಡುಗೊರೆ ನೀಡಿದ್ದು, ಜೀವಮಾನದ ಬೆಸ್ಟ್ ಗಿಫ್ಟ್ ಆಗಿ ಇದು ಉಳಿಯಲಿದೆ.

ಇದನ್ನೂ ಓದಿ: IND vs AUS Final : ಭಾರತ ಈ ತಪ್ಪುಗಳನ್ನು ಮಾಡದಿದ್ದರೆ ಈ ಸಲ ವಿಶ್ವಕಪ್ ನಮ್ದೇ.. ಅವರಿಬ್ಬರನ್ನು ಔಟ್ ಮಾಡಿದರೆ ಸಾಕು!

ಮೊಹಮ್ಮದ್ ಶಮಿ ಅವರ ಹುಟ್ಟೂರಾದ ಅಮ್ರೋಹಾದ ಸಹಸ್‌ಪುರ ಅಲಿನಗರದಲ್ಲಿ ಮಿನಿ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಯೋಗಿ ಸರ್ಕಾರ ಘೋಷಿಸಿದೆ. ಈ ಘೋಷಣೆಯಿಂದ ಗ್ರಾಮದ ಜನರಲ್ಲಿ ಸಂತಸದ ವಾತಾವರಣ ಮೂಡಿದ್ದು, ಸಿಡಿಒ ಅಶ್ವನಿ ಕುಮಾರ್ ಮಿಶ್ರಾ ಮತ್ತು ಇತರ ಅಧಿಕಾರಿಗಳು ಜೋಯಾ ಡೆವಲಪ್‌ಮೆಂಟ್ ಬ್ಲಾಕ್‌’ನಲ್ಲಿರುವ ಶಮಿ ಹುಟ್ಟೂರಿಗೆ ಭೇಟಿ ನೀಡಿದ್ದಾರೆ.

ಕ್ರೀಡಾಂಗಣಕ್ಕೆ ಯಾವ ಸ್ಥಳ ಬೆಸ್ಟ್ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅಂದಹಾಗೆ ಶಮಿ ಅವರ ಕುಟುಂಬ ಇದೇ ಗ್ರಾಮದಲ್ಲಿಯೇ ವಾಸವಾಗಿದೆ.

ಇದನ್ನೂ ಓದಿ: IND vs AUS Final Weather Report: ಭಾರತ - ಆಸ್ಟ್ರೇಲಿಯಾ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಗೆಲುವು ಯಾರಿಗೆ?

ವಿಶ್ವಕಪ್‌’ನಲ್ಲಿ ಕಿಲ್ಲಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ:

ಮೊಹಮ್ಮದ್ ಶಮಿ 2023ರ ವಿಶ್ವಕಪ್‌’ನ 6 ಪಂದ್ಯಗಳನ್ನಾಡಿದ್ದು, 9.13 ಸರಾಸರಿಯಲ್ಲಿ 23 ವಿಕೆಟ್‌’ಗಳನ್ನು ಪಡೆದಿದ್ದಾರೆ, ಅದರಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌’ಗಳನ್ನು ಮೂರು ಬಾರಿ ಪಡೆದಿದ್ದಾರೆ. ಇವರ ಸ್ಟ್ರೈಕ್ ರೇಟ್ 10.9 ಆಗಿದೆ. ಪಂದ್ಯಾವಳಿಯಲ್ಲಿ ಈ ಎರಡು ವಿಷಯಗಳಲ್ಲಿ ಅವರು ಅತ್ಯುತ್ತಮವಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News