World Cup: ರೋಹಿತ್-ಕೊಹ್ಲಿಗೆ ಹೆದರುತ್ತಾರಂತೆ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ನರ್‌ಗಳು!

World Cup: ಐಸಿಸಿ ವಿಶ್ವಕಪ್ 2023ರ ಕುತೂಹಲಕಾರಿ ಪಂದ್ಯ ನಾಳೆ ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯ ವೀಕ್ಷಣೆಗೆ ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿದೆ. ಇದಕ್ಕೂ ಮೊದಲು, ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ನರ್‌ಗಳು ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳ ಬಗ್ಗೆ ಆತಂಕಗೊಂಡಿದ್ದಾರೆ. 

Written by - Yashaswini V | Last Updated : Oct 13, 2023, 09:05 AM IST
  • ಭಾರತ ಮತ್ತು ಪಾಕಿಸ್ತಾನ ಇದುವರೆಗೆ ಪರಸ್ಪರ 134 ಏಕದಿನ ಪಂದ್ಯಗಳನ್ನು ಆಡಿವೆ
  • ಇದರಲ್ಲಿ ಟೀಂ ಇಂಡಿಯಾ 56 ಏಕದಿನ ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ಭಾರತದ ವಿರುದ್ಧ 73 ಏಕದಿನ ಪಂದ್ಯಗಳನ್ನು ಗೆದ್ದಿದೆ.
  • ಕಳೆದ 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ 7 ಬಾರಿ ಪಾಕಿಸ್ತಾನವನ್ನು ಸೋಲಿಸಿದ್ದರೆ, ಪಾಕಿಸ್ತಾನ ಕೇವಲ 2 ಪಂದ್ಯಗಳನ್ನು ಗೆದ್ದಿದೆ.
World Cup: ರೋಹಿತ್-ಕೊಹ್ಲಿಗೆ ಹೆದರುತ್ತಾರಂತೆ  ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ನರ್‌ಗಳು! title=

World Cup: ಐಸಿಸಿ ವಿಶ್ವಕಪ್ 2023ರ ಅತ್ಯಂತ ಕುತೂಹಲಕಾರಿ ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ವೀಕ್ಷಣೆಗಾಗಿ ಇಡೀ ಜಗತ್ತೇ ಕಾತುರತೆಯಿಂದ ಕಾಯುತ್ತಿದೆ. ನಾಳೆ, ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು ಪಂದ್ಯ ಆರಂಭಕ್ಕೂ ಮೊದಲು ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ನರ್‌ಗಳು ಭಾರತದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಗ್ಗೆ ಆತಂಕಗೊಂಡಿದ್ದಾರೆ ಎನ್ನಲಾಗಿದೆ. 

ಅಕ್ಟೋಬರ್ 14 ರಂದು ಭಾರತ ವಿರುದ್ಧದ ಮಹತ್ವದ ವಿಶ್ವಕಪ್ ಪಂದ್ಯದ ಮೊದಲು ಗುರುವಾರ 'ಸ್ಪಾಟ್' ಬೌಲಿಂಗ್ ಅಭ್ಯಾಸ ಮಾಡಿದ ಪಾಕಿಸ್ತಾನದ ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್, ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ಮತ್ತು ತಾತ್ಕಾಲಿಕ ಲೆಗ್ ಸ್ಪಿನ್ನರ್ ಇಫ್ತಿಕರ್ ಅಹ್ಮದ್ ಅವರಿಗೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಅವರ ಬಗ್ಗೆ ಆತಂಕವಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- World Cup: ಪಾಕಿಸ್ತಾನದ ಕ್ರೀಡಾ ನಿರೂಪಕಿ ಝೈನಾಬ್ ಅಬ್ಬಾಸ್ ಇದ್ದಕ್ಕಿದ್ದಂತೆ ಭಾರತ ತೊರೆದಿದ್ದೇಕೆ

ರೋಹಿತ್-ಕೊಹ್ಲಿಗೆ ಹೆದರುತ್ತಾರ ಪಾಕ್ ಸ್ಪಿನ್ನರ್‌ಗಳು! 
ವಾಸ್ತವವಾಗಿ, ನಿನ್ನೆ (ಗುರುವಾರ, ಅಕ್ಟೋಬರ್ 12) ಪಾಕಿಸ್ತಾನದ ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್, ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ಮತ್ತು ತಾತ್ಕಾಲಿಕ ಲೆಗ್ ಸ್ಪಿನ್ನರ್ ಇಫ್ತಿಕರ್ ಅಹ್ಮದ್ ಮುಖ್ಯ ನೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡದೆ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಅವರ ಮೇಲ್ವಿಚಾರಣೆಯಲ್ಲಿ 'ಸ್ಪಾಟ್' ಬೌಲಿಂಗ್‌ನತ್ತ ಗಮನ ಹರಿಸಿದರು. 

ಪಾಕಿಸ್ತಾನದ ಬೌಲಿಂಗ್ ತರಬೇತುದಾರ ಮೊರ್ನೆ ಮೊರ್ಕೆಲ್ ಆರು ಮೀಟರ್ ಮತ್ತು ನಾಲ್ಕು ಮೀಟರ್ ವ್ಯಾಪ್ತಿಯ ಸುತ್ತಲೂ ಪ್ಲಾಸ್ಟಿಕ್ ಸ್ಟಂಪ್‌ಗಳನ್ನು ಗುರುತುಗಳಾಗಿ ಇರಿಸಿದರು. ಅವರು ಎರಡರ ನಡುವೆ ಕೆಂಪು ಪ್ಲಾಸ್ಟಿಕ್ ಕೋನ್ ಅನ್ನು ಇರಿಸಿ ಸರಿಯಾದ ಸ್ಥಳದಲ್ಲಿ ಚೆಂಡನ್ನು ಹೊಡೆಯಲು ತಮ್ಮ ಸ್ಪಿನ್ನರ್‌ಗಳಿಗೆ ಕೇಳಿದರು. ಈ ಮೂವರು ಸ್ಪಿನ್ನರ್‌ಗಳಲ್ಲಿ, ಶಾದಾಬ್ ಹೆಚ್ಚು ನಿಖರವಾಗಿ ಕಾಣುತ್ತಿದ್ದಾಗ ನವಾಜ್ ಮತ್ತು ಇಫ್ತಿಕರ್ ಬೌಲಿಂಗ್‌ನಲ್ಲಿ ಅತ್ಯಂತ ಶಾರ್ಟ್ ಪಿಚ್ ಅಥವಾ ಓವರ್ ಪಿಚ್ ಮಾಡಿದರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ-  Ind vs Pak ಪಂದ್ಯಕ್ಕಾಗಿ ಕಾತುರರಾಗಿರುವ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ನೀಡಿದ ರೈಲ್ವೇಸ್

ಗಮನಾರ್ಹವಾಗಿ, ಈ ಹಿಂದೆಯೂ ಈ ರೀತಿಯ ಅಭ್ಯಾಸ ಮಾಡಲಾಗುತ್ತಿತ್ತಾದರೂ ಪ್ರಸ್ತುತ ಅಂತಹ ಅಭ್ಯಾಸವು ಪ್ರವೃತ್ತಿಯಲ್ಲಿಲ್ಲ. ಆದಾಗ್ಯೂ, ಪಾಕ್ ಸ್ಪಿನ್ನರ್‌ಗಳ ಈ ಅಭ್ಯಾಸವು ಭಾರತೀಯ ಅನುಭವಿ ಬ್ಯಾಟ್ಸ್‌ಮನ್‌ಗಳ ಬಗ್ಗೆ ಅವರ ನಡುಕವನ್ನು ತೋರಿಸುತ್ತದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News