ವಾಂಖೆಡೆಯಲ್ಲಿ ಭಾರತದ ಬ್ಯಾಟಿಂಗ್ ಅಬ್ಬರ : ಕಿವೀಸ್‌ಗೆ 398 ರನ್‌ಗಳ ಬೃಹತ್‌ ಗುರಿ ನೀಡಿದ ಟೀಂ ಇಂಡಿಯಾ..!

Ind vs NZ Live : ನ್ಯೂಜಿಲೆಂಡ್ ವಿರುದ್ಧದ ಏಕದಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅದ್ಭುತ ಬ್ಯಾಟಿಂಗ್‌ ಪ್ರದರ್ಶನಕ್ಕೆ ವಾಂಖೆಡೆ ಸ್ಟೇಡಿಯಂ ತಲ್ಲಣಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ದುಕೊಂಡ ಭಾರತ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತು. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಶತಕ ಭಾರತಕ್ಕೆ ಬೃಹತ್ ಸ್ಕೋರ್ ನೀಡಿತು. 

Written by - Krishna N K | Last Updated : Nov 15, 2023, 06:26 PM IST
  • ನ್ಯೂಜಿಲೆಂಡ್ ವಿರುದ್ಧದ ಏಕದಿನ ಸೆಮಿಫೈನಲ್ ಪಂದ್ಯ
  • ಭಾರತ ಅದ್ಭುತ ಬ್ಯಾಟಿಂಗ್‌ ಪ್ರದರ್ಶನಕ್ಕೆ ವಾಂಖೆಡೆ ಸ್ಟೇಡಿಯಂ ತಲ್ಲಣ
  • ಭಾರತ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತು.
ವಾಂಖೆಡೆಯಲ್ಲಿ ಭಾರತದ ಬ್ಯಾಟಿಂಗ್ ಅಬ್ಬರ : ಕಿವೀಸ್‌ಗೆ 398 ರನ್‌ಗಳ ಬೃಹತ್‌ ಗುರಿ ನೀಡಿದ ಟೀಂ ಇಂಡಿಯಾ..! title=

Ind vs NZ live score : ಟಾಸ್ ಗೆದ್ದ ತಕ್ಷಣ ಭಾರತದ ಗುರಿ ಸ್ಪಷ್ಟವಾಗಿತ್ತು. ಎಂದಿನಂತೆ ಸ್ವತಃ ನಾಯಕ ರೋಹಿತ್ ಶರ್ಮಾ ಗ್ರೌಂಡ್‌ಗೆ ಇಳಿದು ಸಿಕ್ಸ್‌ರ್‌ಗಳ ಮಳೆ ಸುರಿಸಿ, ಆಟ ಈಗ ಶುರು ಅಂತ ಅಂತ ದೊಡ್ಡ ಮುನ್ಸೂಚನೆ ನೀಡಿದರು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 8.2 ಓವರ್‌ಗಳಲ್ಲಿ 71 ರನ್ ಕಲೆಹಾಕಿದರು. 

ರೋಹಿತ್ ಶರ್ಮಾ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರು. ರೋಹಿತ್ ಔಟಾದ ನಂತರ ಗಿಲ್ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ಆದರೆ ಅವರ ವೈಯಕ್ತಿಕ ಸ್ಕೋರ್ 77 ರನ್ ಆಗಿರುವಾಗ, ಗಿಲ್ ಗಾಯದಿಂದ ನಿರ್ಗಮಿಸಬೇಕಾಯಿತು. ನಂತರ ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅಬ್ಬರ ಶುರುವಾಯಿತು. ಇಬ್ಬರು ತಲಾ ಒಂದೊಂದು ಶತಕ ಬಾರಿಸಿದರು.

ಇದನ್ನೂ ಓದಿ:ಸೆಮಿ ಫೈನಲ್ ನಲ್ಲಿ ಟಾಸ್ ಗೆಲುವು ಎಷ್ಟು ಮುಖ್ಯ ? ಟೀಂ ಇಂಡಿಯಾ ನಾಯಕ ಹೇಳಿದ್ದೇನು ?

ಏಕದಿನ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 50ನೇ ಶತಕ ದಾಖಲಿಸಿದರು. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದರು. 113 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 117 ರನ್ ಗಳಿಸಿದರು. 

ಕೊಹ್ಲಿ ಔಟಾದ ಬಳಿಕ ಶ್ರೇಯಸ್ ಅಯ್ಯರ್ ಆರ್ಭಟಕ್ಕೆ ವಾಂಖೆಡೆ ನಡುಗಿತು. 70 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದ ಶ್ರೇಯಸ್ 105 ರನ್ ಗಳಿಸಿ ಔಟಾದರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 10 ಓವರ್‌ಗಳಲ್ಲಿ 100 ರನ್ ನೀಡಿ 3 ವಿಕೆಟ್ ಪಡೆದರು. ಟ್ರೆಂಡ್ ಬೌಲ್ಟ್ 10 ಓವರ್‌ಗಳಲ್ಲಿ 86 ರನ್ ನೀಡಿ 1 ವಿಕೆಟ್ ಪಡೆದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News