ಈ ಬಾರಿ ವಿಶ್ವಕಪ್ ಗೆಲ್ಲುತ್ತೀರಾ ಎಂಬ ಪ್ರಶ್ನೆಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?

Rohit Sharma statement on World Cup 2023: ದೇಶದಲ್ಲಿ ನಡೆಯಲಿರುವ ವಿಶ್ವಕಪ್‌’ ಟೂರ್ನಿಗೂ ಮುನ್ನ ನಡೆದ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

Written by - Bhavishya Shetty | Last Updated : Oct 4, 2023, 09:37 PM IST
    • ವಿಶ್ವಕಪ್‌’ ಟೂರ್ನಿಗೂ ಮುನ್ನ ನಡೆದ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮ
    • ನಾಯಕ ರೋಹಿತ್ ಶರ್ಮಾ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ
    • ಭಾರತ ಕ್ರಿಕೆಟ್ ತಂಡಕ್ಕೆ ಇದು ಗುರಿಯತ್ತ ಗಮನ ಹರಿಸುವ ಸಮ
ಈ ಬಾರಿ ವಿಶ್ವಕಪ್ ಗೆಲ್ಲುತ್ತೀರಾ ಎಂಬ ಪ್ರಶ್ನೆಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?  title=
ICC ODI World Cup 2023

Rohit Sharma statement on World Cup 2023: ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಐಸಿಸಿ ಏಕದಿನ ವಿಶ್ವಕಪ್‌’ನಲ್ಲಿ ಪವರ್‌ಫುಲ್ ಓಪನರ್ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ. ಈ ಟೂರ್ನಿಯಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ.

ದೇಶದಲ್ಲಿ ನಡೆಯಲಿರುವ ವಿಶ್ವಕಪ್‌’ ಟೂರ್ನಿಗೂ ಮುನ್ನ ನಡೆದ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ 7 ದಿನದಲ್ಲಿ ಹೊಟ್ಟೆಯ ಬೊಜ್ಜು ಕರಗಿ ತೂಕ ಇಳಿಯುತ್ತೆ!

ಭಾರತ ಕ್ರಿಕೆಟ್ ತಂಡಕ್ಕೆ ಇದು ಗುರಿಯತ್ತ ಗಮನ ಹರಿಸುವ ಸಮಯ ಎಂದೇ ಹೇಳಬಹುದು. ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವಲ್ಲಿ ಭಾರತ ತಂಡ ಯಶಸ್ವಿಯಾಗಲಿ ಎಂದು ಪ್ರತಿಯೊಬ್ಬ ಭಾರತೀಯನೂ ಆಶಿಸುತ್ತಿರುವುದು ಸುಳ್ಳಲ್ಲ. 2011ರಲ್ಲಿ ಭಾರತ ತನ್ನದೇ ನೆಲದಲ್ಲಿ ವಿಶ್ವಕಪ್ ಗೆದ್ದಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಐಸಿಸಿಯ 'ಕ್ಯಾಪ್ಟನ್ ಡೇ' ಕಾರ್ಯಕ್ರಮದಲ್ಲಿ ರೋಹಿತ್ ಮಾತನಾಡಿದ್ದು, “ಯಾವ ರೀತಿಯ ರಿಸ್ಕ್ ಇದೆ ಎಂದು ನನಗೆ ತಿಳಿದಿದೆ. ತಂಡದ ಭಾಗವಾಗಿರುವ ಆಟಗಾರಗೂ ಈ ಬಗ್ಗೆ ತಿಳಿದುಕೊಂಡಿದ್ದಾರೆ. ನಾವು ಎಲ್ಲವನ್ನೂ ಮರೆತು ತಂಡವಾಗಿ ಏನನ್ನು ಬಯಸುತ್ತೇವೋ ಅದರತ್ತ ಗಮನಹರಿಸುವ ಸಮಯ ಬಂದಿದೆ'' ಎಂದಿದ್ದಾರೆ.

“ನಿರೀಕ್ಷೆಯ ಹೊರೆಯಿಂದ ಮುಕ್ತಿ ಪಡೆಯುವಲ್ಲಿ ಭಾರತೀಯ ಆಟಗಾರರು ಯಶಸ್ವಿಯಾಗುತ್ತಾರೆ” ಎಂದು ರೋಹಿತ್ ಹೇಳಿದ್ದಾರೆ. “ನಾವು ನಿರೀಕ್ಷೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮೇಲೆ ನಿರೀಕ್ಷೆಗಳು ಇದ್ದೇ ಇರುತ್ತವೆ. ಇದೀಗ ಗುರಿಯ ಮೇಲೆ ಕೇಂದ್ರೀಕರಿಸುವ ಸಮಯವಾಗಿದೆ” ಎಂದಿದ್ದಾರೆ.

“ತವರಿನಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಒತ್ತಡದಿಂದ ಹೊರಬರುವುದು ಹೇಗೆ ಎಂದು ಎಲ್ಲಾ ಆಟಗಾರರಿಗೆ ತಿಳಿದಿದೆ. ಒತ್ತಡವು ಆಟಗಾರನನ್ನು ಎಂದಿಗೂ ಬೆನ್ನುಬಿಡುವುದಿಲ್ಲ. ಅದು ಯಾವಾಗಲೂ ಇರುತ್ತದೆ. ಆದ್ದರಿಂದ ಅದನ್ನು ಮರೆತು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ” ಎಂದು ರೋಹಿತ್ ಹೇಳಿದರು,

ಇದನ್ನೂ ಓದಿ: ಬೆಟ್ಟಿಂಗ್ ಕೇಸ್’ನಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಹೆಸರು! ವಿಚಾರಣೆಗೆ ಹಾಜರಾಗಲು ED ಸೂಚನೆ

“ನಾವು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ನಮ್ಮ ಅಭಿಯಾನವನ್ನು ಪ್ರಾರಂಭಿಸುತ್ತೇವೆ. ಈ ಟೂರ್ನಿಯಲ್ಲಿ ನಮ್ಮ ಪ್ರತಿಯೊಂದು ಪಂದ್ಯದ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ನೀವು ಪ್ರತಿ ಪಂದ್ಯದಲ್ಲೂ ನಿಮ್ಮ ಅತ್ಯುತ್ತಮವಾದುದನ್ನು ನೀಡಬೇಕಾಗುತ್ತದೆ” ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News