ವಿಶ್ವ ಕಪ್ ಮಿಸ್ಸಾದರೂ ವಿಶ್ವದ ಹೃದಯ ಗೆದ್ದ ಕಲಿಗಳು ! ವೆಲ್ ಪ್ಲೇಯ್ಡ್ ಬ್ಲೂ ಬಾಯ್ಸ್ !

ಫೈನಲ್ ಗೂ ಮುನ್ನ ಆಡಿದ ಹತ್ತು ಪಂದ್ಯಗಳಲ್ಲಿ ಟೀಂ ಇಂಡಿಯಾ ಅದ್ಭುತ  ಪ್ರದರ್ಶನ ನೀಡಿದೆ. ಆದರೆ ಫೈನಲ್ ನಲ್ಲಿ ಮುಗ್ಗರಿಸಿದೆ. ಆದರೇನಂತೆ, ಈ ಸಂಪೂರ್ಣ ಸರಣಿಯಲ್ಲಿ ಟೀಂ ಇಂಡಿಯಾಗೆ ಅನೇಕ ಅದ್ಭುತ ಕ್ಷಣಗಳಣು ಕಂಡಿದೆ.    

Written by - Ranjitha R K | Last Updated : Nov 21, 2023, 09:51 AM IST
  • ಭಾರತ ವಿಶ್ವಕಪ್ ಗೆಲ್ಲಲಿಲ್ಲ ನಿಜ.
  • ಟೂರ್ನಿಯುದ್ದಕ್ಕೂ ಬ್ಲೂ ಬಾಯ್ಸ್ ಸಾಧನೆ ಮೆರೆದಿದ್ದಾರೆ
  • ಸರಣಿಯಲ್ಲಿ ಟೀಂ ಇಂಡಿಯಾ ಅದ್ಭುತ ಕ್ಷಣಗಳು
ವಿಶ್ವ ಕಪ್ ಮಿಸ್ಸಾದರೂ ವಿಶ್ವದ ಹೃದಯ ಗೆದ್ದ ಕಲಿಗಳು ! ವೆಲ್ ಪ್ಲೇಯ್ಡ್ ಬ್ಲೂ ಬಾಯ್ಸ್ ! title=

ನವದೆಹಲಿ : ಭಾರತ ವಿಶ್ವಕಪ್ ಗೆಲ್ಲಲಿಲ್ಲ ನಿಜ. ಆದರೆ ಟೂರ್ನಿಯುದ್ದಕ್ಕೂ ಬ್ಲೂ ಬಾಯ್ಸ್  ಮೆರೆದ ಸಾಧನೆಯನ್ನು ಕೂಡಾ ಯಾರೂ ಮರೆಯುವಂತಿಲ್ಲ. ನಿಜಕ್ಕೂ ವೆಲ್ ಪ್ಲೇಯ್ಡ್ ಬ್ಲೂ ಬಾಯ್ಸ್ .. ಟೀಂ ಇಂಡಿಯಾ ವಿಶ್ವಕಪ್ ಅಭಿಯಾನದಲ್ಲಿ ಆಡಿಕೊಂಡು ಬಂದ ರೀತಿಯನ್ನು ಇಡೀ ವಿಶ್ವವೇ ನೋಡಿದೆ, ಕೊಂಡಾಡಿದೆ. ಬಹುಶಃ ಸ್ವತಃ ಆಸ್ಟ್ರೇಲಿಯಾ ಕೂಡಾ ಟೀಂ ಇಂಡಿಯಾವನ್ನು ಸುಲಭವಾಗಿ ಸೋಲಿಸಲು ಸಾಧ್ಯವಾಗುತ್ತದೆ ಎಂದು ಊಹಿಸಿರಲಿಕ್ಕಿಲ್ಲ. ಫೈನಲ್ ಗೂ ಮುನ್ನ ಆಡಿದ ಹತ್ತು ಪಂದ್ಯಗಳಲ್ಲಿ ಟೀಂ ಇಂಡಿಯಾ ಅದ್ಭುತ  ಪ್ರದರ್ಶನ ನೀಡಿದೆ. ಆದರೆ ಫೈನಲ್ ನಲ್ಲಿ ಮುಗ್ಗರಿಸಿದೆ. ಆದರೇನಂತೆ, ಈ ಸಂಪೂರ್ಣ ಸರಣಿಯಲ್ಲಿ ಟೀಂ ಇಂಡಿಯಾ ಅನೇಕ ಅದ್ಭುತ ಕ್ಷಣಗಳನ್ನು  ಕಂಡಿದೆ.  

1. ವಿರಾಟ್-ಕೆಎಲ್ ಜೊತೆಯಾಟ ( ಆಸ್ಟ್ರೇಲಿಯಾ ವಿರುದ್ಧದ ಲೀಗ್ ಪಂದ್ಯ) :
ವಿಶ್ವಕಪ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಿತ್ತು.  ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. 200 ರನ್‌ಗಳ ಸಣ್ಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ, ಕೇವಲ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಭಾರತದ ಇನ್ನಿಂಗ್ಸ್ ಅನ್ನು ಉತ್ತಮವಾಗಿ ನಿಭಾಯಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.  ರಾಹುಲ್ 97 ರನ್ ಗಳಿಸಿ ಇಲ್ಲಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

ಇದನ್ನೂ ಓದಿ : ಸೋಲಿನ ಮಧ್ಯೆ ಶ್ರೇಷ್ಠ ದಾಖಲೆ ಬರೆದ ಕೊಹ್ಲಿ-ಶಮಿ: 48 ವರ್ಷಗಳ ಇತಿಹಾಸದಲ್ಲಿ ಯಾವೊಬ್ಬ ಆಟಗಾರನೂ ಮಾಡಿರದ ಸಾಧನೆಯಿದು

2. ಪಾಕಿಸ್ತಾನ ವಿರುದ್ಧ ಭಾರತ ಪಂದ್ಯ- (ಅಹಮದಾಬಾದ್) :
ಭಾರತ ವಿಶ್ವಕಪ್‌ನ 12 ನೇ ಪಂದ್ಯದಲ್ಲಿ ಮತ್ತು ತನ್ನ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಟೂರ್ನಿಯಲ್ಲಿ ಭಾರತ ಸತತ ಮೂರನೇ ಗೆಲುವು ಸಾಧಿಸಿತು. ಇಲ್ಲಿವರೆಗೆ ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಸತತ ಎಂಟನೇ ಗೆಲುವು ದಾಖಲಿಸಿದ್ದರಿಂದ ಈ ಗೆಲುವು ವಿಶೇಷವಾಗಿತ್ತು. 

3. ರೋಹಿತ್ ಶರ್ಮಾ ಶತಕ - ( ಅಫ್ಘಾನಿಸ್ತಾನ ವಿರುದ್ಧ) :
ಭಾರತದ ನಾಯಕ ರೋಹಿತ್ ಶರ್ಮಾ, ತಮ್ಮ ಬಿರುಸಿನ ಶತಕದಿಂದ ಅಫ್ಘಾನಿಸ್ತಾನ ವಿರುದ್ಧ 8 ವಿಕೆಟ್‌ಗಳಿಂದ ಭಾರತ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಓಪನಿಂಗ್ ಗೆ ಬಂದ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ನಲ್ಲಿ ಭಾರತ ಪರ ಅತಿವೇಗದ ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು. ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದು 63 ಎಸೆತಗಳಲ್ಲಿ ಶತಕ ಪೂರೈಸಿ ಇತಿಹಾಸ ನಿರ್ಮಿಸಿದರು. ಭಾರತ ತಂಡದ ನಾಯಕ 84 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 131 ರನ್ ಗಳಿಸಿದರು.

ಇದನ್ನೂ ಓದಿ : “ರಾಹುಲ್ ಹಾಗೂ ಕೊಹ್ಲಿ…”- ವಿಶ್ವಕಪ್ ಫೈನಲ್’ನಲ್ಲಿ ಭಾರತದ ಹೀನಾಯ ಸೋಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ದೂಷಿಸಿದ್ದು ಯಾರನ್ನು?

4. ಈ ವಿಶ್ವಕಪ್‌ನಲ್ಲಿ ವಿರಾಟ್‌ ಮೊದಲ ಶತಕ- ( ಬಾಂಗ್ಲಾದೇಶ ವಿರುದ್ಧ) :
ವಿಶ್ವಕಪ್ 2023 ರ 17 ನೇ ಪಂದ್ಯದಲ್ಲಿ, ಕೊಹ್ಲಿ 97 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಎಂಟು ವರ್ಷಗಳ ನಂತರ ಕೊಹ್ಲಿ ವಿಶ್ವಕಪ್‌ನಲ್ಲಿ ಶತಕ ಬಾರಿಸಿದರು. 2015 ವಿಶ್ವಕಪ್ ನಿಂದ ಕೊಹ್ಲಿ ಶತಕ ಬಾರಿಸಿರಲಿಲ್ಲ. 

5. ಶಮಿ ಎಂಟ್ರಿ : 
ಮೊದಲ ನಾಲ್ಕು ಪಂದ್ಯಗಳಲ್ಲಿ ತಂಡದಿಂದ ಹೊರಗೆ ಉಳಿದಿದ್ದ  ಮೊಹಮ್ಮದ್ ಶಮಿ, ಧರ್ಮಶಾಲಾದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ತನ್ನ ಸಾಮರ್ಥ್ಯ ತೋರಿಸಿ ಬಿಟ್ಟರು. ಈ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಟೀಂ ಇಂಡಿಯಾ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದ್ದರು. ಕೊಹ್ಲಿ 95 ರನ್ ಗಳಿಸಿದರೆ ಶಮಿ 5 ವಿಕೆಟ್ ಪಡೆದರು.

6. ಇಂಗ್ಲೆಂಡ್ ವಿರುದ್ಧ ದೊಡ್ಡ ಗೆಲುವು  : 
230 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 34.5 ಓವರ್‌ಗಳಲ್ಲಿ 129 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಆರನೇ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿಯೂ ಶಮಿ 4 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ ಟೂರ್ನಿಯುದ್ದಕ್ಕೂ ಮಿಂಚಿದ್ದ ಟೀಂ ಇಂಡಿಯಾ ಫೈನಲ್’ನಲ್ಲಿ ಸೋಲಲು ಕಾರಣವಾಗಿದ್ದು ಇವರು… ಈ ಅಂಶಗಳು!!

7.55 ರನ್‌ಗಳಿಗೆ  ಶ್ರೀಲಂಕಾ ಆಲೌಟ್ : 
ವಿಶ್ವಕಪ್ 2023 ರ 33 ನೇ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸಿತು. ಈ ಗೆಲುವಿನ ಮೂಲಕ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಸತತ ಏಳನೇ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡವಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತ್ತು.ಇದಕ್ಕೆ ಉತ್ತರವಾಗಿ ಭಾರತ  ನೀಡಿದ 358 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವನ್ನು ಕೇವಲ 55 ರನ್ ಗಳಿಗೆ ಆಲೌಟ್ ಮಾಡಿತು. 

8. ಹುಟ್ಟುಹಬ್ಬದಂದು ಕೊಹ್ಲಿ 49ನೇ ಶತಕ  : 
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಐದು ವಿಕೆಟ್ ಕಳೆದುಕೊಂಡು 326 ರನ್ ಗಳಿಸಿತ್ತು. 327 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 83 ರನ್‌ಗಳಿಗೆ  ಆಲ್ ಔಟ್ ಆಯಿತು. ಈ ಪಂದ್ಯದಲ್ಲಿ ಭಾರತ 243 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಬರ್ತ್‌ಡೇ ಬಾಯ್‌ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಬಾರಿಸಿದರು. 

9. ಅಯ್ಯರ್‌ ಬಿರುಗಾಳಿ : 
ದೀಪಾವಳಿಯ ದಿನದಂದು ಭಾರತ ತಂಡವು 2023 ರ ವಿಶ್ವಕಪ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ 160 ರನ್‌ಗಳ ಜಯ ದಾಖಲಿಸಿತ್ತು. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಶತಕಗಳ ನೆರವಿನಿಂದ ಟೀಂ ಇಂಡಿಯಾ 410 ರನ್ ಗಳಿಸಿತು. ಇದರಲ್ಲಿ ಅಯ್ಯರ್ ಬಿರುಸಿನ ಶತಕ ಗಳಿಸಿದ್ದರು. 

ಇದನ್ನೂ ಓದಿ : ವಿಶ್ವಕಪ್ ಸೋಲಿನ ಬಳಿಕ ಬಿಕ್ಕಿಬಿಕ್ಕಿ ಅತ್ತ ರೋಹಿತ್ ಶರ್ಮಾ! ತಲೆ ಬಾಗಿಸಿ ಮೈದಾನದಿಂದ ಹೊರಬಂದ ಕ್ಯಾಪ್ಟನ್ ವಿಡಿಯೋ

10. ವಾಂಖೆಡೆಯಲ್ಲಿ ಸಚಿನ್ ಎದುರು ಕೊಹ್ಲಿ 50ನೇ ಶತಕ : 
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 106 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 50ನೇ ಏಕದಿನ ಶತಕ ಪೂರೈಸಿದರು. ಈ ಮೂಲಕ ವಿರಾಟ್, ಸಚಿನ್ ದಾಖಲೆ ಮುರಿದರು. ಈ ಇನ್ನಿಂಗ್ಸ್‌ನಲ್ಲಿ ವಿರಾಟ್ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ  ಕೂಡಾ ಬರೆದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News