ರೋಹಿತ್-ಕೊಹ್ಲಿಗೆ ವಿಶ್ರಾಂತಿ-ಬದಲಿಯಾಗಿ ಈ ಗೇಮ್ ಚೇಂಜರ್ ಎಂಟ್ರಿ! ನೆದರ್ಲ್ಯಾಂಡ್ ಪಂದ್ಯಕ್ಕೆ ಹೀಗಿರಲಿದೆ ಟೀಂ ಇಂಡಿಯಾದ ಪ್ಲೇಯಿಂಗ್ 11

India vs Netherlands World Cup 2023 Playing 11 Prediction: ರೋಹಿತ್ ಶರ್ಮಾ ನೇತೃತ್ವದ ತಂಡ ಗೆದ್ದರೂ ಅಥವಾ ಸೋತರೂ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ನೆದರ್ಲೆಂಡ್ಸ್‌ ತಂಡಕ್ಕೆ ಈ ಪಂದ್ಯದ ಗೆಲುವು ಬಹಳ ಮುಖ್ಯವಾಗಿದೆ.

Written by - Bhavishya Shetty | Last Updated : Nov 11, 2023, 04:06 PM IST
    • ಟೀಂ ಇಂಡಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಬೇಕಾಗಿದೆ
    • ಬ್ಯಾಟಿಂಗ್’ನಲ್ಲಿ ಬದಲಾವಣೆಯಾದರೆ ಇಶಾನ್ ಕಿಶನ್ ಆಯ್ಕೆಯಾಗುವ ಸಾಧ್ಯತೆ
    • ತಂಡದ ನಾಯಕತ್ವ ರಾಹುಲ್ ಹೆಗಲೇರಲಿದೆ
ರೋಹಿತ್-ಕೊಹ್ಲಿಗೆ ವಿಶ್ರಾಂತಿ-ಬದಲಿಯಾಗಿ ಈ ಗೇಮ್ ಚೇಂಜರ್ ಎಂಟ್ರಿ! ನೆದರ್ಲ್ಯಾಂಡ್ ಪಂದ್ಯಕ್ಕೆ ಹೀಗಿರಲಿದೆ ಟೀಂ ಇಂಡಿಯಾದ ಪ್ಲೇಯಿಂಗ್ 11  title=
Team India Predicted playing 11

India vs Netherlands World Cup 2023 Playing 11 Prediction: ವಿಶ್ವಕಪ್ 2023ರ ಸೆಮಿಫೈನಲ್’ಗೂ ಮುನ್ನ ಟೀಂ ಇಂಡಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಬೇಕಾಗಿದೆ. ಈ ಪಂದ್ಯ ನವೆಂಬರ್ 12 ರಂದು ಅಂದರೆ ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಅತಿ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ? ಈತನ ಆಸ್ತಿ ಮೌಲ್ಯ ಸುಮಾರು 20,000 ಕೋಟಿಗಿಂತಲೂ ಹೆಚ್ಚು…

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡ ಗೆದ್ದರೂ ಅಥವಾ ಸೋತರೂ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ನೆದರ್ಲೆಂಡ್ಸ್‌ ತಂಡಕ್ಕೆ ಈ ಪಂದ್ಯದ ಗೆಲುವು ಬಹಳ ಮುಖ್ಯವಾಗಿದೆ.

ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಟೀಂ ಇಂಡಿಯಾದ ಆಡುವ 11ರ ಬಳಗದಲ್ಲಿ ಈ ಬಾರಿಯಾದರೂ ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನ ಸಿಗುತ್ತದೆಯೋ ಎಂದು ಕಾದುನೋಡಬೇಕಿದೆ.

ಒಂದು ವೇಳೆ ಬ್ಯಾಟಿಂಗ್’ನಲ್ಲಿ ಬದಲಾವಣೆಯಾದರೆ ಇಶಾನ್ ಕಿಶನ್ ಆಯ್ಕೆಯಾಗುವ ಸಾಧ್ಯತೆ ಇದೆ. ಇನ್ನು ವೇಗಿಗಳ ಸ್ಥಾನ ಬದಲಾವಣೆಯಾದರೆ ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರಲ್ಲಿ ಒಬ್ಬರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಕುಲದೀಪ್ ಯಾದವ್ ಅವರಿಗೆ ವಿಶ್ರಾಂತಿ ನೀಡಿದರೆ ರವಿಚಂದ್ರನ್ ಅಶ್ವಿನ್ ಕಣಕ್ಕಿಳಿಯುವುದು ಫಿಕ್ಸ್.

ಇದನ್ನೂ ಓದಿ: ಚಿನ್ನ ಪ್ರಿಯರೇ ಆಭರಣ ಕೊಳ್ಳಲು ಇದುವೇ ಬೆಸ್ಟ್ ಟೈಂ… ಇಂದು ಎಷ್ಟಾಗಿದೆ ಗೊತ್ತಾ 10 ಗ್ರಾಂ ಬಂಗಾರದ ಬೆಲೆ?

ಸೆಮಿಫೈನಲ್‌’ನಂತಹ ಮಹತ್ವದ ಪಂದ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಟೀಂ ಇಂಡಿಯಾದಲ್ಲಿ ಕೊಂಚ ಬದಲಾವಣೆ ತರುವ ಸಾಧ್ಯತೆಯೂ ಇದೆ. ಅಂದರೆ ರೋಹಿತ್ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ, ಮುಂದಿನ ಪಂದ್ಯಕ್ಕೆ ಮತ್ತಷ್ಟು ಫಿಟ್ ಆಗಲು ಸಮಯ ನೀಡುವ ಸಂಭವವಿದೆ. ಆದರೆ ರೋಹಿತ್ ಈ ಪಂದ್ಯದಿಂದ ಹೊರಗುಳಿದರೆ ತಂಡದ ನಾಯಕತ್ವ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ರಾಹುಲ್ ಹೆಗಲೇರಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News