ಕೊಹ್ಲಿ ಕರಿಯರ್ ಇನ್ನು ......! ಕಿಂಗ್ ಬಗ್ಗೆ ಭವಿಷ್ಯ ನುಡಿದ ಸೌರವ್ ಗಂಗೂಲಿ

virat Kohli :ವಿರಾಟ್ ಕೊಹ್ಲಿ ತಮ್ಮ 50 ನೇ ODI ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಅವರ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ. 

Written by - Ranjitha R K | Last Updated : Nov 16, 2023, 10:23 AM IST
  • ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 50ನೇ ಶತಕ
  • ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಕಿಂಗ್
  • ಕಿಂಗ್ ಕೊಹ್ಲಿ ಬಗ್ಗೆ ಗಂಗೂಲಿ ಹೇಳಿದ್ದೇನು ?
ಕೊಹ್ಲಿ ಕರಿಯರ್ ಇನ್ನು ......! ಕಿಂಗ್ ಬಗ್ಗೆ ಭವಿಷ್ಯ ನುಡಿದ ಸೌರವ್ ಗಂಗೂಲಿ title=

virat Kohli : ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 50ನೇ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಇದಾದ ನಂತರ ಕೊಹ್ಲಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಅಲ್ಲದೆ ಕ್ರಿಕೆಟ್ ಗೆ ಮತ್ತೊಬ್ಬ ದೇವರು ಸಿಕ್ಕಾಯಿತು ಎನ್ನುತ್ತಿದ್ದಾರೆ ಅಭಿಮಾನಿಗಳು. ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 50 ನೇ ODI ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಅವರ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ. ಭಾರತೀಯ ಶ್ರೇಷ್ಠ ಆಟಗಾರನ ದಾಖಲೆಯನ್ನು ಮತ್ತೊಬ್ಬ ಭಾರತೀಯನೇ ಸರಿಗಟ್ಟಿದ್ದಾನೆ ಎನ್ನುವುದು ಇಲ್ಲಿ ಮತ್ತೊಂದು ಹೆಮ್ಮೆಯ ವಿಷಯ.  

'ಕೊಹ್ಲಿ ವೃತ್ತಿಜೀವನ ಇನ್ನೂ ಮುಗಿದಿಲ್ಲ' : 
ಈ ಮಧ್ಯೆ ವಿರಾಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇನ್ನೂ ಹಲವು ಸಾಧನೆಗಳನ್ನು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. 'ವಿರಾಟ್ ಕೊಹ್ಲಿ ಈ ಸಾಧನೆಯನ್ನು ತಲುಪಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಅವರ ವೃತ್ತಿ ಜೀವನ ಇನ್ನೂ ಮುಗಿದಿಲ್ಲ. ಇದೊಂದು ಅದ್ಭುತ ಸಾಧನೆ. ಈ ಸಮಯದಲ್ಲಿ ಭಾರತ ನಂಬಲಾಗದ ಕ್ರಿಕೆಟ್ ಆಡುತ್ತಿದೆ. ಅದು ರೋಹಿತ್ ಶರ್ಮಾ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಅಥವಾ ಯಾವುದೇ ಬೌಲರ್ ಆಗಿರಲಿ ಸಂಪೂರ್ಣ ತಂಡವಾಗಿ ಆಡುತ್ತಿದೆ. ಈ ತಂಡವು ಪ್ರಚಂಡ ಪ್ರತಿಭೆಯನ್ನು ಹೊಂದಿದೆ ಎಂದು ಹೆಮ್ಮೆ ಪಟ್ಟಿದ್ದಾರೆ. 

ಇದನ್ನೂ ಓದಿ : ವಿರಾಟ್‌ ಸಾಧನೆಗೆ ʼಕ್ರಿಕೆಟ್‌ ದೇವರʼ ಶುಭ ಸಂದೇಶ..! ಕೊಹ್ಲಿ ಹೊಗಳಿದ ಸಚಿನ್‌

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ :  
ಫುಟ್‌ಬಾಲ್‌ನಲ್ಲಿ ಡೇವಿಡ್ ಬೆಕ್‌ಹ್ಯಾಮ್ ಅವರ ಸ್ಥಾನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗೆ ಸಮಾನವಾಗಿದೆ. ಭಾರತದ ಸ್ಟಾರ್ ಕ್ರಿಕೆಟಿಗರು ಹೊಸ ಸಾಧನೆಯನ್ನು ಮಾಡುತ್ತಿರುವುದನ್ನು ಕಂಡು ಇಂಗ್ಲೆಂಡ್ ಫುಟ್‌ಬಾಲ್ ತಾರೆ  ಸಂತಸ ವ್ಯಕ್ತಪಡಿಸಿದ್ದಾರೆ. ಬುಧವಾರ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ 50 ನೇ ಶತಕವನ್ನು ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಾಗ, ಬೆಕ್‌ಹ್ಯಾಮ್ ಕೂಡಾ ವಾಂಖೆಡೆ ಸ್ಟೇಡಿಯಂನಲ್ಲಿದ್ದರು. ವಿರಾಟ್ ಕೊಹ್ಲಿಯ ಈ ಅದ್ಭುತ ಇನ್ನಿಂಗ್ಸ್ ಅನ್ನು ಹತ್ತಿರದಿಂದ ವೀಕ್ಷಿಸಿದ ಬೆಕ್‌ಹ್ಯಾಮ್, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಂತೋಷವಾಗಿದೆ ಎಂದು ಹೇಳಿದ್ದಾರೆ.

ವಿರಾಟ್ ಬ್ಯಾಟಿಂಗ್ ಅದ್ಭುತ : 
ನಾನು ಇಂದು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸ್ವಲ್ಪ ಸಮಯ ಕಳೆದಿದ್ದೇನೆ ಮತ್ತು ಈ ಕ್ರೀಡಾಂಗಣದಲ್ಲಿ ಅವರು ಏನು ಸಾಧಿಸಿದ್ದಾರೆಂದು ನನಗೆ  ಗೊತ್ತು. ಅವರು ತಮ್ಮ ದೇಶಕ್ಕಾಗಿ,  ಈ ಆಟದಲ್ಲಿ ಏನು ಸಾಧನೆ ಮಾಡಿದ್ದಾರೆನ್ನುವುದು ಗೊತ್ತಿದೆ. ಆದರೆ ಇಂದು ವಿರಾಟ್ ಬ್ಯಾಟಿಂಗ್ ನೋಡುವುದು ನಿಜಕ್ಕೂ ನಂಬಲಸಾಧ್ಯವಾಗಿತ್ತು ಎಂದು ಬೆಕ್‌ಹ್ಯಾಮ್ ಬಣ್ಣಿಸಿದ್ದಾರೆ. 

ಇದನ್ನೂ ಓದಿ : ಶ್ರೇಷ್ಠ ದಾಖಲೆ ಬರೆದ ಶಮಿಗೆ ಪ್ರಧಾನಿ ಮೋದಿಯ ವಿಶೇಷ ಸಂದೇಶ ! ಏನಿತ್ತು ಆ ಸಂದೇಶದಲ್ಲಿ ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News