“ರೋಹಿತ್’ಗೆ ಒತ್ತಾಯವಾಗಿ ನಾಯಕತ್ವ ನೀಡಲಾಗಿದೆ, ಇಲ್ಲದಿದ್ದರೆ…”-ವಿಶ್ವಕಪ್ ಮಧ್ಯೆ ಕ್ಯಾಪ್ಟನ್ಸಿ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದು ಹೀಗೆ…

Sourav Ganguly on Captaincy Controversy: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾ ನಾಯಕನಾಗಿದ್ದ ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿರಲಿಲ್ಲ ಎಂಬ ಮಾತುಗಳು ಸಹ ಕೇಳಿಬಂದವು. ಇದೀಗ ಸುಮಾರು ಎರಡು ವರ್ಷಗಳ ನಂತರ ಬಿಸಿಸಿಐನ ಮಾಜಿ ಅಧ್ಯಕ್ಷರೇ ಸಂಪೂರ್ಣ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

Written by - Bhavishya Shetty | Last Updated : Nov 10, 2023, 08:00 PM IST
    • ವಿಶ್ವಕಪ್ ಮಧ್ಯೆ ಕ್ಯಾಪ್ಟನ್ಸಿ ಬಗ್ಗೆ ಹೇಳಿಕೆ ನೀಡಿದ ಸೌರವ್ ಗಂಗೂಲಿ
    • ಕೊಲ್ಕತ್ತಾದ ಮಾಧ್ಯಮವೊಂದರ ಜೊತೆ ಮಾತನಾಡಿದ ದಾದಾ
    • ಸಂಪೂರ್ಣ ರಹಸ್ಯವನ್ನು ಬಹಿರಂಗಪಡಿಸಿದ ಬಿಸಿಸಿಐನ ಮಾಜಿ ಅಧ್ಯಕ್ಷ
“ರೋಹಿತ್’ಗೆ ಒತ್ತಾಯವಾಗಿ ನಾಯಕತ್ವ ನೀಡಲಾಗಿದೆ, ಇಲ್ಲದಿದ್ದರೆ…”-ವಿಶ್ವಕಪ್ ಮಧ್ಯೆ ಕ್ಯಾಪ್ಟನ್ಸಿ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದು ಹೀಗೆ… title=
Sourav Ganguly

Sourav Ganguly on Captaincy Controversy: 2021ರ ಟಿ 20 ವಿಶ್ವಕಪ್‌’ನಲ್ಲಿ ಪಾಕಿಸ್ತಾನದ ಸೋಲು, ನಂತರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾದ ಕೆಟ್ಟ ಸ್ಥಿತಿ, ಈ ಎಲ್ಲಾ ವಿವಾದಗಳ ನಂತರ, ಟೀಮ್ ಇಂಡಿಯಾದೊಳಗಿನ ವಾತಾವರಣದಲ್ಲಿ ಪ್ರಶ್ನೆಗಳು ಏಳಲಾರಂಭಿಸಿದವು. ಅದರ ಜೊತೆಗೆ ನಾಯಕತ್ವದ ವಿವಾದ ಭುಗಿಲೆದ್ದಿತು, ಇದೇ ಸಂದರ್ಭದಲ್ಲಿ ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾ ನಾಯಕನಾಗಿದ್ದ ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿರಲಿಲ್ಲ ಎಂಬ ಮಾತುಗಳು ಸಹ ಕೇಳಿಬಂದವು. ಇದೀಗ ಸುಮಾರು ಎರಡು ವರ್ಷಗಳ ನಂತರ ಬಿಸಿಸಿಐನ ಮಾಜಿ ಅಧ್ಯಕ್ಷರೇ ಸಂಪೂರ್ಣ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ದೀಪಾವಳಿ ದಿನವೇ ಮಹಾಲಕ್ಷ್ಮಿ ಪರ್ವ ಶುರು: 2024ರಲ್ಲಿ ಈ 5 ರಾಶಿಯ ಜನರಿಗೆ ಲಕ್ಷಾಧಿಪತಿ ಯೋಗ-ಸಂಪತ್ತಿನ ಜೊತೆ ಸುಂದರ ಜೀವನ ಕರುಣಿಸುವಳು ಸಿರಿದೇವಿ

ಕೊಲ್ಕತ್ತಾದ ಮಾಧ್ಯಮವೊಂದರ ಜೊತೆ ಮಾತನಾಡಿದ ದಾದಾ ಅವರು ಸಂಪೂರ್ಣ ಸತ್ಯವನ್ನು ಹೇಳಿದ್ದಾರೆ. “ರೋಹಿತ್ ಶರ್ಮಾ ಅವರಿಗೆ ಆಸಕ್ತಿ ಇರಲಿಲ್ಲ. ಆದರೆ ವಿಷಯಗಳು ಅಂತಹ ಹಂತವನ್ನು ತಲುಪಿದ್ದವು, ನಾನು ಅವನನ್ನು ಓಕೆ ಎಂದು ಹೇಳಲು ಒತ್ತಾಯಿಸಿದೆ. ನೀನು ಓಕೆ ಎಂದು ಹೇಳದಿದ್ದರೂ ಸಹ ನಾನು ಘೋಷಿಸುತ್ತೇನೆ. ಏಕೆಂದರೆ ಅವನೊಬ್ಬ ಅದ್ಭುತ ನಾಯಕ. ಇನ್ನು ವಿರಾಟ್ ಕೊಹ್ಲಿ ನಾಯಕತ್ವವನ್ನು ತೊರೆದಾಗ, ಅವರು ಟೀಮ್ ಇಂಡಿಯಾವನ್ನು ಮುನ್ನಡೆಸುವ ಅತ್ಯುತ್ತಮ ಆಯ್ಕೆಯಾಗಿದ್ದರು. ಆದರೆ ಆ ಸಂದರ್ಭದಲ್ಲಿ ನಾನು ನೋಡಿದ ಸಂಗತಿಯಿಂದ ನನಗೆ ಆಶ್ಚರ್ಯವಾಗಲಿಲ್ಲ” ಎಂದಿದ್ದಾರೆ.

ಅಸಲಿ ವಿಷಯ ಏನು?

ವಿರಾಟ್ ಕೊಹ್ಲಿ ಮೊದಲಿಗೆ ಐಪಿಎಲ್ ತಂಡ ಆರ್‌’ಸಿಬಿ, ಆ ಬಳಿಕ ಟಿ20 ಅಂತರರಾಷ್ಟ್ರೀಯ ತಂಡದ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದ್ದರು. ಇದಾದ ಬಳಿಕ ಆ ಜವಾಬ್ದಾರಿಯನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸಲಾಯಿತು. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಈ ಕುರಿತು ವಿವಾದ ಉಂಟಾಗಿದ್ದು, ಕೊಹ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟವಾಗಿ ಬಂದು ಯಾರೂ ತನ್ನನ್ನು ಏನನ್ನೂ ಕೇಳಲಿಲ್ಲ ಎಂದು ಹೇಳಿದ್ದರು. ಆದರೆ ವಿರಾಟ್ ಟಿ20 ನಾಯಕತ್ವ ತೊರೆದಾಗ ಅವರಿಗೆ ವಿವರಿಸಿ ವಿಷಯವನ್ನು ತಿಳಿಸಲಾಗಿತ್ತು ಎಂದು ಗಂಗೂಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇಲ್ಲಿಂದಲೇ ಈ ವಿವಾದ ಶುರುವಾಗಿತ್ತು. ಆಗ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕರನ್ನಾಗಿಯೂ ಘೋಷಿಸಲಾಯಿತು. ಆದರೆ, ಗಾಯದ ಸಮಸ್ಯೆಯಿಂದ ರೋಹಿತ್ ಈ ಪ್ರವಾಸಕ್ಕೆ ತೆರಳಲಿಲ್ಲ ಮತ್ತು ರಾಹುಲ್ ಜವಾಬ್ದಾರಿ ವಹಿಸಿಕೊಂಡರು.

ಆದರೆ ಟೆಸ್ಟ್ ಸರಣಿಯ ನಂತರ ವಿರಾಟ್ ಟೆಸ್ಟ್ ನಾಯಕತ್ವವನ್ನೂ ಸಹ ತೊರೆದರು. ಇದೇ ಅವಧಿಯಲ್ಲಿ ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿಯೂ ಆರಂಭವಾಯಿತು. ಇದಾದ ನಂತರ, ವಿರಾಟ್‌ ಅವರ ಕೆಲವು ಹೇಳಿಕೆಗಳು ದ್ವಂದ್ವವನ್ನು ಸೃಷ್ಟಿಸಿದವು.

ಇದನ್ನೂ ಓದಿ: ಶೀಘ್ರದಲ್ಲೇ ಶುಭ್ಮನ್ ಗಿಲ್-ಸಾರಾ ತೆಂಡೂಲ್ಕರ್ ಮದುವೆ: ಸೀಕ್ರೆಟ್ ರಿವೀಲ್ ಮಾಡಿದ ಕ್ರಿಕೆಟಿಗ!

ಟಿ20 ತಂಡದ ನಾಯಕತ್ವವನ್ನು ತೊರೆದ ಬಳಿಕ ಅವರು ಎಲ್ಲಾ ಮೂರು ಸ್ವರೂಪಗಳ ನಾಯಕತ್ವವನ್ನು ಕಳೆದುಕೊಂಡರು. ಅಲ್ಲಿಂದ ಇಲ್ಲಿಯವರೆಗೆ ರೋಹಿತ್ ಶರ್ಮಾ ಅವರನ್ನು ತಂಡದ ನಿಯಮಿತ ನಾಯಕರನ್ನಾಗಿ ಮಾಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News