ವಾಂಖೆಡೆ ಪಿಚ್, ಇಂದಿನ ಹವಾಮಾನ ಎಲ್ಲವೂ ಮುಖ್ಯ ! ಟಾಸ್ ಗೆದ್ದರೆ ರೋಹಿತ್ ಆಯ್ಕೆ ಮಾಡುವುದು ಇದನ್ನೇ !

Ind v/s Nz :ವಾಂಖೆಡೆ ಮೈದಾನದಲ್ಲಿ ಆಟಗಾರರ ಆಟದ ಜೊತೆಗೆ ಇನ್ನೂ ಅನೇಕ ಅಂಶಗಳು ಮಹತ್ವ ಪಡೆದುಕೊಳ್ಳುತ್ತವೆ. ಈ ಎಲ್ಲಾ ಅಂಶಗಳು ಯಾವ ತಂಡದ ಪರವಾಗಿ ಇರುತ್ತವೆಯೋ ಗೆಲುವು ಅವರದ್ದೇ.

Written by - Ranjitha R K | Last Updated : Nov 15, 2023, 11:37 AM IST
  • ವಿಶ್ವಕಪ್ ಸೆಮಿಫೈನಲ್ ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
  • ವಿಶ್ವಕಪ್ ಹಿಂದಿನ ಇತಿಹಾಸ ಭಾರತದ ಅಭಿಮಾನಿಗಳನ್ನು ಕಾಡುತ್ತಿದೆ.
  • 2019 ರಲ್ಲಿ ಕೂಡಾ ಭಾರತ -ನ್ಯೂಜಿಲ್ಯಾಂಡ್ ಸೆಮಿಫೈನಲ್ ನಲ್ಲಿ ಮುಖಾಮುಖಿ
ವಾಂಖೆಡೆ ಪಿಚ್, ಇಂದಿನ ಹವಾಮಾನ ಎಲ್ಲವೂ ಮುಖ್ಯ ! ಟಾಸ್ ಗೆದ್ದರೆ ರೋಹಿತ್ ಆಯ್ಕೆ ಮಾಡುವುದು ಇದನ್ನೇ ! title=

Ind v/s Nz : ವಿಶ್ವಕಪ್ ಸೆಮಿಫೈನಲ್ ಇಂದು  ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಸೆಮಿ ಫೈನಲ್ ಭಾರತ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ನಡೆಯಲಿದೆ. ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಆದರೂ ವಿಶ್ವಕಪ್ ಹಿಂದಿನ ಇತಿಹಾಸ ಭಾರತದ ಅಭಿಮಾನಿಗಳನ್ನು ಕಾಡುತ್ತಿದೆ.  2019 ರಲ್ಲಿ ಕೂಡಾ ಭಾರತ ಮತ್ತು ನ್ಯೂಜಿಲ್ಯಾಂಡ್ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 18 ರನ್ ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಅಲ್ಲದೆ, 2011 ರ ಬಳಿಕ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದ್ದೇ ಇಲ್ಲ. ಇನ್ನು ಇಂದಿನ ಪಂದ್ಯಕ್ಕಾಗಿ ಎರಡೂ ತಂಡಗಳು ಎಲ್ಲೆ ಮೀರಿ ಶ್ರಮಿಸುತ್ತಿವೆ. ಎರಡೂ ತಂಡಗಳು ಗೆಲುವಿನ ಮೇಲೆಯೇ ತಮ್ಮ ಗಮನ ಕೇಂದ್ರಿಕರಿಸಿವೆ. ಕಳೆದ ಎರಡು ವಿಶ್ವಕಪ್‌ಗಳಲ್ಲಿ ನ್ಯೂಜಿಲ್ಯಾಂಡ್ ಫೈನಲ್‌ ತಲುಪಿತ್ತು ಎನ್ನುವುದು ಕೂಡಾ ಇಲ್ಲಿ ಗಮನಿಸಬೇಕಾದ ಅಂಶ. 

ವಿಶ್ವಕಪ್ ಮೊದಲ ಸೆಮಿ ಫೈನಲ್ ಭಾರತ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ಇನ್ನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ಫೈನಲ್‌ಗೆ ಲಗ್ಗೆ ಇಡಲಿದೆ.  ವಾಂಖೆಡೆ ಮೈದಾನದಲ್ಲಿ ಆಟಗಾರರ ಆಟದ ಜೊತೆಗೆ ಇನ್ನೂ ಅನೇಕ ಅಂಶಗಳು ಮಹತ್ವ ಪಡೆದುಕೊಳ್ಳುತ್ತವೆ. ಈ ಎಲ್ಲಾ ಅಂಶಗಳು ಯಾವ ತಂಡದ ಪರವಾಗಿ ಇರುತ್ತವೆಯೋ ಗೆಲುವು ಅವರದ್ದೇ.

ಇದನ್ನೂ ಓದಿ : ಸೆಮಿಫೈನಲ್’ಗೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಪ್ರಕಟಿಸಿದ ರೋಹಿತ್-ದ್ರಾವಿಡ್: ಈ ಆಟಗಾರನಿಗೆ ಮತ್ತೆ ಅವಕಾಶ

ರೋಹಿತ್  ಶರ್ಮಾ ಆಯ್ಕೆ ಯಾವುದು ? :
ಹೌದು, ಇಂದಿನ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಲೀಗ್ ಹಂತದಲ್ಲಿ ಮೊದಲ 5 ಪಂದ್ಯಗಳನ್ನು ಭಾರತ ಚೇಸ್ ಮಾಡಿ ಗೆದ್ದಿದ್ದರೆ, ಕೊನೆಯ ನಾಲ್ಕು ಪಂದ್ಯಗಳನ್ನು  ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿತ್ತು. ಹಾಗಿದ್ದರೆ ಇಂದಿನ ಪಂದ್ಯದಲ್ಲಿ ಭಾರತ  ಟಾಸ್ ಗೆದ್ದರೆ, ರೋಹಿತ್ ಶರ್ಮಾ ಆಯ್ಕೆ ಬ್ಯಾಟಿಂಗೋ ಅಥವಾ ಫೀಲ್ಡಿಂಗೋ? ಎನ್ನುವುದು ಸದ್ಯಕ್ಕೆ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.  

ವಾಂಖೆಡೆ ಪಿಚ್‌ ಏನು ಹೇಳುತ್ತದೆ ? : 
ಮೊದಲೇ ಹೇಳಿದ ಹಾಗೆ ವಾಂಖೆಡೆಯಲ್ಲಿ ಗೆಲ್ಲಬೇಕಾದರೆ ಕೆಲವೊಂದು ಅಂಶಗಳ ಬಗ್ಗೆ ಗಮನ ಹರಿಸಬೇಕು. ಮೊದಲನೆಯದಾಗಿ  ವಾಂಖೆಡೆ ಪಿಚ್‌ನಲ್ಲಿ ಚೇಸಿಂಗ್ ಅಷ್ಟು ಸುಲಭವಲ್ಲ. ಇಲ್ಲಿ ಚೇಸ್ ಮಾಡುವುದು ಬಹು ದೊಡ್ಡ ಸವಾಲೇ ಸರಿ. ಅದೂ ಕೂಡಾ ಸೆಮಿಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿ ದೊಡ್ಡ ಮಟ್ಟದ ಗುರಿಯನ್ನು ಎದುರಾಳಿಗೆ ನೀಡಿದರೆ ಮಾತ್ರ ಎದುರಾಳಿ ತಂಡ ಒತ್ತಡಕ್ಕೆ ಸಿಲುಕಬಹುದು. 

ಇದನ್ನೂ ಓದಿ : IND vs NZ Weather Update: ಭಾರತ - ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ! ಹವಾಮಾನ ವರದಿ ಏನು ಹೇಳುತ್ತೆ?

ಬೌಲರ್ ಗಳಿಗೂ ಆಗಬಹುದು ಸಮಸ್ಯೆ : 
ಇನ್ನು ಹವಾಮಾನ ಕೂಡಾ ಇಲ್ಲಿ ಬಹಳ ಮುಖ್ಯ. ಈ ಪಂದ್ಯಕ್ಕೆ ಮಂಜಿನ ಸಮಸ್ಯೆ ಎದುರಾಗುವ ಸಾಧ್ಯತೆ ಕೂಡಾ ಇದೆ. ಮೊದಲು ಬ್ಯಾಟಿಂಗ್ ಮಾಡಿದರೆ, ಬೌಲಿಂಗ್ ಮಾಡುವಾಗ ಬೌಲರ್‌ಗಳಿಗೆ ಮಂಜಿನ ಸಮಸ್ಯೆ ಎದುರಾಗಬಹುದು. ಇದೇ ವಾಂಖೆಡೆ ಪಿಚ್‌ನಲ್ಲಿಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ಧೂಳೆಬ್ಬಿಸಿದ್ದು ಎನ್ನುವುದನ್ನು ನೆನಪಿಡಬೇಕು. 

ಇಂದು ಯಾರಿಗೆ ವಿಜಯಮಾಲೆ ? : 
2011ರ ನಂತರದ ವಿಶ್ವಕಪ್ ನಲ್ಲಿ ಭಾರತ ಪ್ರತಿ ಬಾರಿ ಸೆಮಿಫೈನಲ್ ನಲ್ಲಿ ಚೇಸ್ ಮಾಡಲು ಹೋಗಿ ಸೋಲು ಕಂಡಿದೆ.  2015ರಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲುಂಡಿದ್ದರೆ, 2019ರಲ್ಲಿ ಇದೇ ನ್ಯೂಜಿಲ್ಯಾಂಡ್ ವಿರುದ್ದ ಸೋಲಿನ ಕಹಿ ಅನುಭವಿಸಿತ್ತು. ಹಾಗಾಗಿ ಈ ಬಾರಿ ಭಾರತ ಟಾಸ್ ಗೆದ್ದರೆ  ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡುತ್ತಾರೆ ಎಂದೇ ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News