ಟೀಂ ಇಂಡಿಯಾ ಬೆಂಕಿಯಾಟಕ್ಕೆ ವಿಲವಿಲ ಒದ್ದಾಡಿದ ಲಂಕಾ: 302 ರನ್’ಗಳ ಭರ್ಜರಿ ಜಯ ಸಾಧಿಸಿ ಸೆಮೀಸ್’ಗೆ ಭಾರತ ಲಗ್ಗೆ

IND vs SL, World Cup 2023: ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲ ಟೀಂ ಇಂಡಿಯಾವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತು. ಆದರೆ ಭಾರತದ ಬ್ಯಾಟ್ಸ್’ಮನ್’ಗಳು ಅಬ್ಬರಿಸಿದ್ದೇ ಅಬ್ಬರಿಸಿದ್ದು… 50 ಓವರ್’ಗಳ ಪಂದ್ಯದಲ್ಲಿ ಬರೋಬ್ಬರಿ 357 ರನ್ ಕಲೆ ಹಾಕಿದ ಟೀಂ ಇಂಡಿಯಾ ಲಂಕಾ ಬೌಲರ್’ಗಳ ಬೆವರಿಳಿಸಿತು.

Written by - Bhavishya Shetty | Last Updated : Nov 2, 2023, 08:36 PM IST
    • ಭಾರತದ ಬ್ಯಾಟ್ಸ್’ಮನ್’ಗಳು ಅಬ್ಬರಿಸಿದ್ದೇ ಅಬ್ಬರಿಸಿದ್ದು…
    • ಗೆಲುವಿನ ಮೂಲಕ ಟೀಂ ಇಂಡಿಯಾ ಡೈರೆಕ್ಟ್ ಸೆಮಿಫೈನಲ್ ಪ್ರವೇಶ
    • ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತು ಬೆಂಕಿಯಾಟ ಮುಂದುವರೆಸಿದ ಭಾರತೀಯ ಬೌಲರ್’ಗಳು
ಟೀಂ ಇಂಡಿಯಾ ಬೆಂಕಿಯಾಟಕ್ಕೆ ವಿಲವಿಲ ಒದ್ದಾಡಿದ ಲಂಕಾ: 302 ರನ್’ಗಳ ಭರ್ಜರಿ ಜಯ ಸಾಧಿಸಿ ಸೆಮೀಸ್’ಗೆ ಭಾರತ ಲಗ್ಗೆ title=
india vs sri lanka

IND vs SL, World Cup 2023: ಟೀಂ ಇಂಡಿಯಾ ವಿಶ್ವಕಪ್’ನಲ್ಲಿ ಅಜೇಯ ಓಟ ಮುಂದುವರೆಸಿದೆ. ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದು, ಟೀಂ ಇಂಡಿಯಾ ಹಿಂದೆಂದೂ ಸಂಭವಿಸರದಷ್ಟು ರನ್ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಟೀಂ ಇಂಡಿಯಾ ಡೈರೆಕ್ಟ್ ಸೆಮಿಫೈನಲ್ ಪ್ರವೇಶ ಪಡೆದಿದೆ.

ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧದ ಪಂದ್ಯಕ್ಕೆ ಕಪ್ಪುಪಟ್ಟಿ ಧರಿಸಿ ಬಂದ ಶ್ರೀಲಂಕಾ ಪ್ಲೇಯರ್ಸ್! ಕಾರಣ...

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲ ಟೀಂ ಇಂಡಿಯಾವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತು. ಆದರೆ ಭಾರತದ ಬ್ಯಾಟ್ಸ್’ಮನ್’ಗಳು ಅಬ್ಬರಿಸಿದ್ದೇ ಅಬ್ಬರಿಸಿದ್ದು… 50 ಓವರ್’ಗಳ ಪಂದ್ಯದಲ್ಲಿ ಬರೋಬ್ಬರಿ 357 ರನ್ ಕಲೆ ಹಾಕಿದ ಟೀಂ ಇಂಡಿಯಾ ಲಂಕಾ ಬೌಲರ್’ಗಳ ಬೆವರಿಳಿಸಿತು.

ಆದರೆ ಲಂಕಾ ಗುರಿ ಬೆನ್ನತ್ತಲು ಹೊರಡುವಷ್ಟರಲ್ಲಿ ಬ್ಯಾಕ್ ಟು ಬ್ಯಾಕ್ ಹೊಡೆತ ಅನುಭವಿಸಿತು. 4 ಆಟಗಾರರು ಡಕೌಟ್ ಆಗಿದ್ದಲ್ಲದೆ, ತಂಡವನ್ನು ಭಾರತೀಯ ಬೌಲರ್’ಗಳ ಕಪಿಮುಷ್ಟಿಯಿಂದ ಬಿಡಿಸಲಾಗದೆ ವಿಲವಿಲ ಒದ್ದಾಡಿದ್ದರು, ಅಂತಿಮವಾಗಿ ಲಂಕಾ ತಂಡ ಕೇವಲ 19.4 ಓವರ್’ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 55 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮೂಲಕ ಟೀಂ ಇಂಡಿಯಾ ಭರ್ಜರಿಯಾಗಿ ಸೆಮಿ ಫೈನಲ್ ಪ್ರವೇಶಿಸಿದೆ.  

ಬ್ಯಾಟರ್’ಗಳ ಮೋಡಿ:

ಇನ್ನು ಈ ಪಂದ್ಯದಲ್ಲಿ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಕೇವಲ  4 ರನ್ ಗಳಿಸಿ ಔಟ್ ಆದರು. ಆ ಬಳಿಕ ತಂಡಕ್ಕೆ ಆಧಾರವಾಗಿ ನಿಂತ ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಕ್ರಮವಾಗಿ 88 ರನ್ ಮತ್ತು 92 ರನ್ ಕಲೆಹಾಕಿದರು. ಈ ಬಳಿಕ ಶ್ರೇಯಸ್ ಅಯ್ಯರ್ 82 ರನ್, ಕೆ ಎಲ್ ರಾಹುಲ್ 21, ಸೂರ್ಯಕುಮಾರ್ ಯಾದವ್ 12, ರವೀಂದ್ರ ಜಡೇಜಾ 35, ಮೊಹಮ್ಮದ್ ಶಮಿ 4, ಜಸ್ಪ್ರೀತ್ ಬುಮ್ರಾ 1 ರನ್ ಗಳಿಸಿ ಅಜೇಯರಾಗಿ ಉಳಿದರು.

ಇದನ್ನೂ ಓದಿ: ಜಸ್ಟ್ 12 ರನ್’ನಿಂದ ಮಿಸ್ ಆಯ್ತು ವಿರಾಟ್ 49ನೇ ಶತಕ; ಆದ್ರೂ ಜಗತ್ತಿನ 5 ವಿಶ್ವದಾಖಲೆಗಳು ಬ್ರೇಕ್

ಇನ್ನೊಂದೆಡೆ ಲಂಕಾ ದಹನ ಮಾಡಲು ಮುಂದಾದ ಭಾರತೀಯ ಬೌಲರ್’ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತು ಬೆಂಕಿಯಾಟ ಮುಂದುವರೆಸಿದರು. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮೂರು ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 5, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ 1 ತಲಾ ವಿಕೆಟ್ ಪಡೆದಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News