ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಬೇಕಾದರೆ ಭಾರತ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

How many matches India need to win to enter World Cup Semi Finals: ಐಸಿಸಿ ಏಕದಿನ ವಿಶ್ವಕಪ್‌ 2023 ಆರಂಭಗೊಂಡಿದ್ದು, ದಿನೇ ದಿನೇ ಕ್ರೇಜ್‌ ಹೆಚ್ಚಾಗುತ್ತಿದೆ. ಏಕದಿನ ಮಾದರಿಯಲ್ಲಿ ಈ ಬಾರಿ ಟೂರ್ನಿ ನಡೆಯುತ್ತಿದ್ದು, 10 ತಂಡಗಳು ಕಾದಾಡುತ್ತಿವೆ.

Written by - Bhavishya Shetty | Last Updated : Oct 11, 2023, 02:55 PM IST
    • ಐಸಿಸಿ ಏಕದಿನ ವಿಶ್ವಕಪ್‌ 2023 ಆರಂಭ
    • ಸೆಮಿಫೈನಲ್ ಪ್ರವೇಶಿಸಬೇಕಾದರೆ ಟೂರ್ನಿಯಲ್ಲಿ ಎಷ್ಟು ಪಂದ್ಯ ಗೆಲ್ಲಬೇಕು?
    • ಬದಲಾಗಿ ಎಲ್ಲಾ ತಂಡಗಳೂ ಎಲ್ಲಾ ತಂಡಗಳ ವಿರುದ್ಧ ಪಂದ್ಯವನ್ನಾಡಲಿದೆ.
ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಬೇಕಾದರೆ ಭಾರತ ತಂಡ ಎಷ್ಟು ಪಂದ್ಯ ಗೆಲ್ಲಬೇಕು?  title=
World Cup 2023

World Cup 2023: ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದ ವಿಶ್ವಕಪ್ ಅದಾಗಲೇ ಪ್ರಾರಂಭವಾಗಿ, ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡುತ್ತಿದೆ. ಇನ್ನು ಈ ವರದಿಯಲ್ಲಿ ನಾವಿಂದು ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕಾದರೆ, ಟೂರ್ನಿಯಲ್ಲಿ ಎಷ್ಟು ಪಂದ್ಯ ಗೆಲ್ಲಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಇಂದು ನನಸಾಗುವುದೇ ವಿರಾಟ್ ಕನಸು! ಸಚಿನ್  ಹೆಸರಿನಲ್ಲಿರುವ ಈ ದಾಖಲೆ ಮುರಿಯುತ್ತಾರಾ ಕೊಹ್ಲಿ ? 

ಐಸಿಸಿ ಏಕದಿನ ವಿಶ್ವಕಪ್‌ 2023 ಆರಂಭಗೊಂಡಿದ್ದು, ದಿನೇ ದಿನೇ ಕ್ರೇಜ್‌ ಹೆಚ್ಚಾಗುತ್ತಿದೆ. ಏಕದಿನ ಮಾದರಿಯಲ್ಲಿ ಈ ಬಾರಿ ಟೂರ್ನಿ ನಡೆಯುತ್ತಿದ್ದು, 10 ತಂಡಗಳು ಕಾದಾಡುತ್ತಿವೆ.

ಈ ಬಾರಿ ವಿಶ್ವಕಪ್‌ ವಿಶ್ವಕಪ್‌’ನಲ್ಲಿ 2 ಗುಂಪುಗಳಾಗಿ ವಿಂಗಡಿಸಲಾಗಿಲ್ಲ. ಬದಲಾಗಿ ಎಲ್ಲಾ ತಂಡಗಳೂ ಎಲ್ಲಾ ತಂಡಗಳ ವಿರುದ್ಧ ಪಂದ್ಯವನ್ನಾಡಲಿದೆ. ಇದೇ ಕಾರಣದಿಂದ ಸೆಮಿ ಫೈನಲ್ ತಲುಪಲು ಭಾರತಕ್ಕೆ ಎಷ್ಟು ಪಂದ್ಯಗಳ ಗೆಲುವಿನ ಅಗತ್ಯತೆ ಇದೆ ಎಂದು ನಾವಿಂದು ತಿಳಿಸಲಿದ್ದೇವೆ.

ಈ ವರ್ಷದ ವಿಶ್ವಕಪ್‌ ಟೂರ್ನಿಯಲ್ಲಿ ಪ್ರತಿ ತಂಡವೂ ಸಹ 9 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಲೀಗ್‌ ಹಂತದಲ್ಲಿ ಬರೋಬ್ಬರಿ 45 ಪಂದ್ಯ ನಡೆಯಲಿದೆ. ಅಂತಿಮವಾಗಿ ಪಾಯಿಂಟ್ ಟೇಬಲ್’ನಲ್ಲಿ ಟಾಪ್‌ 4ರಲ್ಲಿ ಇರುವ 4 ತಂಡಗಳು ಮಾತ್ರ ಸೆಮಿಫೈನಲ್ ತಲುಪಲಿದೆ. ಬಳಿಕ ಫೈನಲ್‌’ಗಾಗಿ 1 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳು ಕಾದಾಡಿದರೆ, 2 ಮತ್ತು 3ನೇ ಸ್ಥಾನದಲ್ಲಿರುವ ತಂಡಗಳು ಸೆಣಸಾಡಲಿದೆ. ಇಲ್ಲಿ ಗೆದ್ದ 2 ತಂಡಗಳು ಫೈನಲ್‌ ಪ್ರವೇಶಿಸಲಿದೆ.

ಇದನ್ನೂ ಓದಿ: ಇನ್ನೆರಡು ವಾರದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ: ಈ 3 ರಾಶಿಯವರಿಗೆ ಧನಸಂಪತ್ತಿನ ಹೊನಲು, ಕೀರ್ತಿ ಜೊತೆ ಆಯಸ್ಸು ವೃದ್ಧಿ

ವಿಶ್ವಕಪ್‌ 2023ರಲ್ಲಿ ಪ್ರತಿ ತಂಡವು 9 ಪಂದ್ಯವನ್ನು ಆಡುತ್ತದೆ. ಈ ವೇಳೆ 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯವನ್ನಾದರು ಗೆದ್ದರೆ ಆ ತಂಡ ಸೆಮಿಫೈನಲ್‌ ಹಂತಕ್ಕೆ ತಲುಪುತ್ತದೆ. ಆದರೆ 7 ಪಂದ್ಯವನ್ನು 4ಕ್ಕಿಂತ ಹೆಚ್ಚು ತಂಡಗಳು ಸಮಾನವಾಗಿ ಗೆದ್ದಿದ್ದರೆ ಆಗ ನೆಟ್ ರನ್‌ ರೇಟ್ ಆಧಾರವನ್ನಾಗಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News