“ಆತ ಚೆನ್ನಾಗಿ ಆಡಿದ್ರೆ ನಮ್ಗೆ ದುಡ್ಡು ಸಿಗುತ್ತೆ..”- ಗಂಡನೇ ಬೇಡ ಅಂದಿದ್ದ ಶಮಿ ಪತ್ನಿ ಆತನ ಸಂಪಾದನೆ ಬಗ್ಗೆ ಹೇಳಿದ್ದು ಹೀಗೆ..

Hasin Jahan Statement About mohammed shami: ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ಶಮಿ ಆಡಿದ 4 ಪಂದ್ಯಗಳಲ್ಲಿ ಇಲ್ಲಿಯವರೆಗೆ 16 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

Written by - Bhavishya Shetty | Last Updated : Nov 8, 2023, 08:58 PM IST
    • 2023ರ ವಿಶ್ವಕಪ್‌’ನಲ್ಲಿ ಮಿಂಚುತ್ತಿರುವ ಮೊಹಮ್ಮದ್ ಶಮಿ
    • ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ಶಮಿ
    • ಈ ನಡುವೆ ಶಮಿ ಪತ್ನಿ ಹಸಿನ್ ಜಹಾನ್ ಹೇಳಿಕೆ ಬೆಳಕಿಗೆ…
“ಆತ ಚೆನ್ನಾಗಿ ಆಡಿದ್ರೆ ನಮ್ಗೆ ದುಡ್ಡು ಸಿಗುತ್ತೆ..”- ಗಂಡನೇ ಬೇಡ ಅಂದಿದ್ದ ಶಮಿ ಪತ್ನಿ ಆತನ ಸಂಪಾದನೆ ಬಗ್ಗೆ ಹೇಳಿದ್ದು ಹೀಗೆ.. title=
mohammed shami-Hasin Jahan

ODI World Cup 2023: ಮೊಹಮ್ಮದ್ ಶಮಿ 2023ರ ವಿಶ್ವಕಪ್‌’ನಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಮೊದಲ ಕೆಲವು ಪಂದ್ಯಗಳ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯದ ಶಮಿ, ಆ ಬಳಿಕ ಅಂದರೆ ಹಾರ್ದಿಕ್ ಪಾಂಡ್ಯ ಗಾಯದ ಹಿನ್ನೆಲೆಯಲ್ಲಿ ಹೊರಬಿದ್ದ ಬಳಿಕ ಅವಕಾಶ ಪಡೆದಿದ್ದರು.

ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ಶಮಿ ಆಡಿದ 4 ಪಂದ್ಯಗಳಲ್ಲಿ ಇಲ್ಲಿಯವರೆಗೆ 16 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿದೆ ಈ ತಂಡ! ಕೊನೆಯ ಪಂದ್ಯ ಆಡದೆಯೇ ಹೊರಬೀಳುವ ಸಾಧ್ಯತೆ

ಈ ನಡುವೆ ಶಮಿ ಪತ್ನಿ ಹಸಿನ್ ಜಹಾನ್ ಹೇಳಿಕೆಯೊಂದು ಬೆಳಕಿಗೆ ಬಂದಿದೆ. “ನಾನು ಕ್ರಿಕೆಟ್ ಅಭಿಮಾನಿಯಲ್ಲ ಹಾಗಾಗಿ ನೋಡಲು ಇಷ್ಟಪಡುವುದಿಲ್ಲ. ಜೊತೆಗೆ ಟೂರ್ನಿಯಲ್ಲಿ ಯಾರು ಎಷ್ಟು ವಿಕೆಟ್‌ ಕಬಳಿಸಿದ್ದಾರೆ ಎಂದೂ ಸಹ ನನಗೆ ತಿಳಿದಿಲ್ಲ” ಎಂದಿದ್ದಾರೆ.

ನ್ಯೂಸ್ ನೇಷನ್’ನಲ್ಲಿ ಶಮಿ ಕುರಿತು ಮಾತನಾಡಿದ ಪತ್ನಿ ಹಸಿನ್, “ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಕೆಟ್ ಪಡೆಯುತ್ತಿದ್ದಾರೆ. ಆತ ಚೆನ್ನಾಗಿ ಆಡಿದರೆ ನಾವು ಉಳಿಯುತ್ತೇವೆ.  ಚೆನ್ನಾಗಿ ಗಳಿಸುತ್ತೇವೆ ಮತ್ತು ನಮ್ಮ ಭವಿಷ್ಯವು ಸುರಕ್ಷಿತವಾಗಿರುತ್ತದೆ” ಎಂದು ಟೀಂ ಇಂಡಿಯಾ ಗೆಲುವಿಗೆ ಶುಭ ಹಾರೈಸಿದ್ದಾರೆ.

ಮೊಹಮ್ಮದ್ ಶಮಿ ಮತ್ತು ಅವರ ಪತ್ನಿ ಹಸಿನ್ ಜಹಾನ್ ಪ್ರಸ್ತುತ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 2018ರಲ್ಲಿ ಯಾವುದೋ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಈ ಅವಧಿಯಲ್ಲಿ ಜಹಾನ್ ಶಮಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದರಲ್ಲಿ ಕೌಟುಂಬಿಕ ಹಿಂಸಾಚಾರ, ಮ್ಯಾಚ್ ಫಿಕ್ಸಿಂಗ್ ಮುಂತಾದ ಕೆಲವು ಪ್ರಮುಖ ಆರೋಪಗಳೂ ಸೇರಿವೆ.

ಇದನ್ನೂ ಓದಿ: “ನಾಚಿಕೆಯಾಗಬೇಕು… ನಾನ್ ಸೆನ್ಸ್”- ಮೊಹಮ್ಮದ್ ಶಮಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದು ಯಾರಿಗೆ ಗೊತ್ತಾ?

ವಿಶ್ವಕಪ್‌’ನಲ್ಲಿ ಭಾರತದ ಸ್ಥಾನ:

2023ರ ವಿಶ್ವಕಪ್‌’ನಲ್ಲಿ ಭಾರತ ತಂಡ ವಿಜಯರಥದಲ್ಲಿ ಸವಾರಿ ಮಾಡುತ್ತಿದೆ. ಬ್ಲೂ ಬಾಯ್ಸ್ ಇದುವರೆಗೆ ಟೂರ್ನಿಯಲ್ಲಿ ಒಟ್ಟು ಎಂಟು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಸೆಮಿಫೈನಲ್’ಗೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಅಂಕಪಟ್ಟಿಯಲ್ಲಿ ರೋಹಿತ್ ಪಡೆ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News