ರೋಹಿತ್ ಶತಕದ ಗೀಳಿಲ್ಲದ ನಿಸ್ವಾರ್ಥ ನಾಯಕ, ಆದರೆ ಕೊಹ್ಲಿ…! ವಿರಾಟ್ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನು?

Gautam Gambhir on Rohit Sharma: ರೋಹಿತ್ ಶರ್ಮಾ ತಮ್ಮ ODI ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 257 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು 31 ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಹೆಸರಿನಲ್ಲಿ 54 ಅರ್ಧಶತಕಗಳಿವೆ. ಅಂದಹಾಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೂರು ದ್ವಿಶತಕ ಬಾರಿಸಿದ ಏಕೈಕ ಆಟಗಾರ ರೋಹಿತ್ ಶರ್ಮಾ.

Written by - Bhavishya Shetty | Last Updated : Oct 30, 2023, 06:57 PM IST
    • ರೋಹಿತ್ ಶರ್ಮಾ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿಕೆ
    • ಮೂರು ದ್ವಿಶತಕ ಬಾರಿಸಿದ ಏಕೈಕ ಆಟಗಾರ ರೋಹಿತ್ ಶರ್ಮಾ
    • “ರೋಹಿತ್ ಶರ್ಮಾ ಶತಕದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ”
ರೋಹಿತ್ ಶತಕದ ಗೀಳಿಲ್ಲದ ನಿಸ್ವಾರ್ಥ ನಾಯಕ, ಆದರೆ ಕೊಹ್ಲಿ…! ವಿರಾಟ್ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನು?  title=
Gautam Gambhir

Gautam Gambhir on Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿಕೆಯೊಂದನ್ನು ನೀಡಿದ್ದಾರೆ. “ರೋಹಿತ್ ಶರ್ಮಾ ಬೇಕಿದ್ದರೆ 40-45 ಶತಕಗಳನ್ನು ಗಳಿಸಿದ್ದರು. ಆದರೆ ಅವರು ತನಗಾಗಿ ಆಡುತ್ತಿಲ್ಲ, ತಂಡಕ್ಕಾಗಿ ಆಡುತ್ತಾರೆ” ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಈ ಜನರಿಗೆ ಸಿಗಲ್ಲ ಉಚಿತ ಪಡಿತರ, ಸರ್ಕಾರದ ಮಹತ್ವದ ಘೋಷಣೆ!

ರೋಹಿತ್ ಶರ್ಮಾ ತಮ್ಮ ODI ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 257 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು 31 ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಹೆಸರಿನಲ್ಲಿ 54 ಅರ್ಧಶತಕಗಳಿವೆ. ಅಂದಹಾಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೂರು ದ್ವಿಶತಕ ಬಾರಿಸಿದ ಏಕೈಕ ಆಟಗಾರ ರೋಹಿತ್ ಶರ್ಮಾ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಅವಕಾಶವಿದ್ದರೂ ಸಹ ತಂಡಕ್ಕಾಗಿ ಆಟವಾಡಿ ಔಟ್ ಆಗಿದ್ದರು. ಮೊದಲು ಬ್ಯಾಟಿಂಗ್’ಗೆ ಬಂದ ಭಾರತ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿತ್ತು. ಕೇವಲ 40 ರನ್’ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ನಾಲ್ಕನೇ ವಿಕೆಟ್‌’ಗೆ 91 ರನ್‌ಗಳ ಅತ್ಯುತ್ತಮ ಜೊತೆಯಾಟ ನಡೆಸಿದರು. ಆದರೆ, ಈ ಜೋಡಿ ದೊಡ್ಡ ಸ್ಕೋರ್‌’ಗೆ ಟೀಂ ಇಂಡಿಯಾವನ್ನು ಮುನ್ನಡೆಸಲಿದೆ ಎಂದು ಅನಿಸಿದಾಗ ಕೆಎಲ್ ರಾಹುಲ್ 39 ರನ್ ಗಳಿಸಿ ಔಟಾದರು. ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ 87 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

“ರೋಹಿತ್ ಶರ್ಮಾ ಶತಕದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ”

ಸ್ಟಾರ್ ಸ್ಪೋರ್ಟ್ ಜೊತೆ ಮಾತನಾಡಿದ ಗೌತಮ್ ಗಂಭೀರ್, “ರೋಹಿತ್ ಶರ್ಮಾ ತಮ್ಮ ಶತಕದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.  ಬೇಕಿದ್ದರೆ 40-45 ಶತಕಗಳನ್ನು ಗಳಿಸಿದ್ದರು. ಆದರೆ ಅವರು ತನಗಾಗಿ ಆಡುತ್ತಿಲ್ಲ, ತಂಡಕ್ಕಾಗಿ ಆಡುತ್ತಾರೆ” ಎಂದು ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಶತಕದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ. ಏಕೆಂದರೆ ಬಾಂಗ್ಲಾ ಮತ್ತು ನ್ಯೂಜಿಲೆಂಡ್ ತಂಡದ ವಿರುದ್ಧ ಶತಕ ಸಿಡಿಸಲು ಕೊಹ್ಲಿ ಪ್ರಯತ್ನಿಸಿದ್ದರು.

ಇದನ್ನೂ ಓದಿ: ಮಹಿಳೆಯ ದೇಹದ ಈ ಭಾಗ ಅಗಲವಾಗಿ ದುಂಡಾಗಿದ್ದರೆ ಅವರಷ್ಟು ಲಕ್ಕಿ ಮತ್ತೊಬ್ಬರಿಲ್ಲ..!

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 2 ರನ್ ಬೇಕಿತ್ತು. ಆದರೆ ಕೊಹ್ಲಿ ಶತಕಕ್ಕೆ 3 ರನ್ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ಹಲವು ಎಸೆತಗಳನ್ನು ವ್ಯರ್ಥ ಮಾಡಿದ್ದರು. ಇನ್ನೊಂದೆಡೆ ಕೀವೀಸ್ ವಿರುದ್ಧವೂ 95 ರನ್ ಗಳಿಸಿದ್ದ ಕೊಹ್ಲಿ ಶತಕ ಸಿಡಿಸಲು ಯತ್ನಿಸಿ ಔಟಾಗಿದ್ದರು. ಇದೇ ಕಾರಣದಿಂದ ಗೌತಮ್ ಗಂಭೀರ್, ಕೊಹ್ಲಿ ವಿರುದ್ಧ ಟೀಕಾ ಪ್ರಹಾರ ಮಾಡಿದಂತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News