ವಿಶ್ವಕಪ್’ನಲ್ಲಿ ಟೀಂ ಇಂಡಿಯಾಗೆ ಸೋಲುಣಿಸಲು ಡಬ್ಬಾ ಐಡಿಯಾ ಕೊಟ್ಟ ಪಾಕ್ ಕ್ರಿಕೆಟಿಗ! ಏನದು ಗೊತ್ತಾ?

Shoaib Malik on Team India: ಕೋಲ್ಕತ್ತಾದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿತು. ಇದರ ನಂತರ, ಬೌಲರ್‌’ಗಳು ಅದ್ಭುತ ಪ್ರದರ್ಶನ ನೀಡಿ ಪ್ರೋಟೀಸ್ ತಂಡವನ್ನು ಕೇವಲ 83 ರನ್‌’ಗಳಿಗೆ ಕಟ್ಟಿಹಾಕಿತು.

Written by - Bhavishya Shetty | Last Updated : Nov 11, 2023, 05:35 PM IST
    • ಭಾರತ ತಂಡ 2023ರ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ
    • ಪಾಕಿಸ್ತಾನದ ಕ್ರೀಡಾ ವಾಹಿನಿಯ ಕಾಯ್ರಕ್ರಮದಲ್ಲಿ ಮಾತನಾಡಿದ ಶೋಯೆಬ್ ಮಲಿಕ್
    • ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಿರುದ್ಧ ವಾಗ್ದಾಳಿ
ವಿಶ್ವಕಪ್’ನಲ್ಲಿ ಟೀಂ ಇಂಡಿಯಾಗೆ ಸೋಲುಣಿಸಲು ಡಬ್ಬಾ ಐಡಿಯಾ ಕೊಟ್ಟ ಪಾಕ್ ಕ್ರಿಕೆಟಿಗ! ಏನದು ಗೊತ್ತಾ? title=
Shoaib Malik Statement About Team India

Shoaib Malik on Team India: ವಿಶ್ವಕಪ್ 2023ರಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್‌’ನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ 243 ರನ್‌’ಗಳ ಜಯ ಸಾಧಿಸಿತು. ಈ ಮೂಲಕ ಸತತ ಎಂಟನೇ ಗೆಲುವು ದಾಖಲಿಸಿದೆ.

ಇದನ್ನೂ ಓದಿ: “ಮನಸ್ಸು ಹಗುರಾಗಿದೆ ಸರ್…”- ಕಿಚ್ಚನ ಚಪ್ಪಾಳೆ ಪಡೆದ ಡ್ರೋಣ್ ಪ್ರತಾಪ್ ಸುದೀಪ್ ಜೊತೆ ಮನಬಿಚ್ಚಿ ಹೇಳಿದ್ದು ಹೀಗೆ...

ಈ ಗೆಲುವಿನೊಂದಿಗೆ ಭಾರತ ತಂಡ 2023ರ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೋಲ್ಕತ್ತಾದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿತು. ಇದರ ನಂತರ, ಬೌಲರ್‌’ಗಳು ಅದ್ಭುತ ಪ್ರದರ್ಶನ ನೀಡಿ ಪ್ರೋಟೀಸ್ ತಂಡವನ್ನು ಕೇವಲ 83 ರನ್‌’ಗಳಿಗೆ ಕಟ್ಟಿಹಾಕಿತು.

ಶೋಯೆಬ್ ಮಲಿಕ್ ಹೇಳಿಕೆ:

ಭಾರತದ ದಾಖಲೆಯ ಗೆಲುವಿನ ಬಳಿಕ ಪಾಕಿಸ್ತಾನದ ಕ್ರೀಡಾ ವಾಹಿನಿಯ ಡಿಸ್ಕಶನ್ ಕಾಯ್ರಕ್ರಮದಲ್ಲಿ ಮಾತನಾಡಿದ ಶೋಯೆಬ್ ಮಲಿಕ್, ವಿಶ್ವಕಪ್‌’ನಲ್ಲಿ ಭಾರತದ ಗೆಲುವಿಗೆ ಹೇಗೆ ಬ್ರೇಕ್ ಹಾಕಬೇಕು ಎಂಬುದನ್ನು ಸಹ ಹೇಳಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ವಾಸಿಂ ಅಕ್ರಮ್, ಮೊಯೀನ್ ಖಾನ್, ಮಿಸ್ಬಾ ಉಲ್ ಹಕ್ ಕೂಡ ಇದ್ದರು.

“ಸದ್ಯ ಭಾರತ ತಂಡ ಅಮೋಘ ಫಾರ್ಮ್‌ನಲ್ಲಿದ್ದು, ಅದನ್ನು ಸೋಲಿಸುವುದು ಯಾವುದೇ ತಂಡಕ್ಕೆ ಸುಲಭದ ಮಾತಲ್ಲ. ಹಾಗಾಗಿ ಟಿವಿ ಆಫ್ ಮಾಡಿ” ಎಂದು ಶೋಯೆಬ್ ಮಲಿಕ್ ಹೇಳಿದ್ದಾರೆ. ಈ ಮಾತನ್ನು ಕೇಳಿ ಅಲ್ಲಿದ್ದ ಎಲ್ಲರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ 8 ಪಂದ್ಯಗಳಲ್ಲಿ ಗೆದ್ದು ಭಾರತವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರ ಜೊತೆಗೆ ಸೆಮಿಫೈನಲ್‌ ಪ್ರವೇಶಿಸಿದೆ. ಅತ್ತ ಪಾಕಿಸ್ತಾನ ತಂಡವು ಟೂರ್ನಿಯುದ್ದಕ್ಕೂ ನಿರಾಶಾದಾಯಕ ಪ್ರದರ್ಶನ ನೀಡಿ, ನಾಕೌಟ್‌ ಹಂತ ಪ್ರವೇಶಿಸಲು ವಿಫಲವಾಗಿದೆ. ಹೀಗಾಗಿ ತಮ್ಮದೇ ದೇಶದ ಹಿರಿಯ ಆಟಗಾರರಿಂದ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಇದೀಗ ಪಾಕ್‌ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಕೂಡಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದ ಅತಿ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ? ಈತನ ಆಸ್ತಿ ಮೌಲ್ಯ ಸುಮಾರು 20,000 ಕೋಟಿಗಿಂತಲೂ ಹೆಚ್ಚು…

ಮತ್ತೊಂದು ಸಂಭಾಷಣೆಯಲ್ಲಿ ಮಾತನಾಡಿದ ಶೋಯೆಬ್ ಮಲಿಕ್, “ಟೂರ್ನಿರಲ್ಲಿ ಟೀಂ ಇಂಡಿಯಾ ತೆಗೆದುಕೊಂಡ ನಿರ್ಧಾರಗಳು ಅತ್ಯುತ್ತಮವಾಗಿದ್ದು. ಆಲ್‌ ರೌಂಡರ್‌ ಹಾರ್ದಿಕ್ ಪಾಂಡ್ಯ ಗಾಯಗೊಂಡು ತಂಡದಿಂದ ಹೊರಬಂದಾಗಲು ಅವರ ಬಳಿ ಪ್ಲಾನ್ ಬಿ ಸಿದ್ಧವಾಗಿತ್ತು. ಇಂತಹ ವಿಷಯಗಳನ್ನೆಲ್ಲಾ ಭಾರತವನ್ನು ನೋಡಿ ಪಿಸಿಬಿ ಅನುಸರಿಸಬೇಕು” ಎಂದು ಸಲಹೆ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News