ODI World Cup 2023 : ವಿಶ್ವಕಪ್ 2023 ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿ ಪೆವೆಲಿಯನ್ ದಾರಿ ಹಿಡಿದಿದ್ದಾರೆ. ರೋಹಿತ್ ಶರ್ಮಾ ಔಟಾಗುತ್ತಿದ್ದಂತೆಯೇ ಪತ್ನಿ ರಿತಿಕಾಗೆ ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ನಾಯಕ ಪೆವಿಲಿಯನ್ ನತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ರಿತಿಕಾ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು. ಇದೀಗ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರೋಹಿತ್ ಶರ್ಮಾ ಬೌಲ್ಡ್ ಆದ ತಕ್ಷಣ ಪತ್ನಿ ರಿತಿಕಾ ಶಾಕಿಂಗ್ ರಿಯಾಕ್ಷನ್ :
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ 2023 ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಕುಸಾಲ್ ಮೆಂಡಿಸ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಭಾರತ ಇನ್ನಿಂಗ್ಸ್ನ ಮೊದಲ ಓವರ್ನ ಎರಡನೇ ಎಸೆತದಲ್ಲಿ ಶ್ರೀಲಂಕಾ ವೇಗಿ ದಿಲ್ಶನ್ ಮಧುಶಂಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿ ಔಟಾದರು.
ಇದನ್ನೂ ಓದಿ : Rohit Sharma : ವಾಂಖೆಡೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ತಮ್ಮ ಪ್ರತಿಕ್ರಿಯೆಯಿಂದ ಸಂಚಲನ ಮೂಡಿಸಿದ ರಿತಿಕಾ :
ರೋಹಿತ್ ಶರ್ಮಾ 2 ಎಸೆತಗಳನ್ನು ಎದುರಿಸಿ ಕೇವಲ 4 ರನ್ಗಳ ವೈಯಕ್ತಿಕ ಸ್ಕೋರ್ನಲ್ಲಿ ಔಟಾದ ನಂತರ ಪೆವಿಲಿಯನ್ಗೆ ಮರಳಿದರು. ರೋಹಿತ್ ಶರ್ಮಾ ಔಟಾಗುವಾಗ ಅವರ ಪತ್ನಿ ರಿತಿಕಾ ಕೂಡಾ ಸ್ಟೇಡಿಯಂನಲ್ಲಿದ್ದರು. ರೋಹಿತ್ ಶರ್ಮಾ ಕಳಪೆ ಪ್ರದರ್ಶನ ನೋಡಿ ರಿತಿಕಾ ತೀರಾ ನಿರಾಶೆಯ ಪ್ರತಿಕ್ರಿಯೆಯನ್ನು ನೀಡಿದರು.
Great disappointment for Mumbaikars n crowd that happiness of seeing Rohit Sharma batting was so short lived just a ball..boundary n bowled by Madhushanka 💥💥 Not an issue Virat is there to compensate 😎😎#INDvSL #INDvsSL #SLvsIND #Wankhede #RohitSharma𓃵 #Mumbai #ShahRukhKhan pic.twitter.com/98MA3pGsJG
— DaebakAnkita💃 (@DaebakankitaF) November 2, 2023
2023 ರ ವಿಶ್ವಕಪ್ನಲ್ಲಿ ಸತತ 6 ಪಂದ್ಯಗಳನ್ನು ಗೆದ್ದ ನಂತರ ಟೀಮ್ ಇಂಡಿಯಾ ಈಗ 12 ಅಂಕಗಳನ್ನು ಪಡೆದುಕೊಂಡಿದೆ. 2023ರ ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಲು ಟೀಮ್ ಇಂಡಿಯಾಗೆ ಇನ್ನು ಕೇವಲ 1 ಪಂದ್ಯ ಗೆಲ್ಲುವ ಅಗತ್ಯವಿದೆ. ಇಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಗೆದ್ದರೆ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ.
ಇದನ್ನೂ ಓದಿ : ವಿಶ್ವಕಪ್ ಪಂದ್ಯದಲ್ಲಿ ಪಾಂಡ್ಯ ಆಡುತ್ತಾರೋ ಇಲ್ಲವೋ? ನಾಯಕ ರೋಹಿತ್ ಶರ್ಮಾ ಕೊಟ್ಟ ಅಪ್ಡೇಟ್ ಹೀಗಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.