AB de Villiers Statement on Heinrich Klaasen: ಪ್ರಸ್ತುತ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಟೂರ್ನಿ ಸಖತ್ ಕ್ರೇಜ್ ಹುಟ್ಟುಹಾಕಿದೆ, ಇನ್ನೇನು ಅಂತಿಮ ಹಂತದತ್ತ ಹೆಜ್ಜೆಯಿಟ್ಟರುವ ವಿಶ್ವಕಪ್ ನವೆಂಬರ್ 19ರಂದು ಕೊನೆಗೊಳ್ಳಲಿದೆ, ಇನ್ನು ಈಗಾಗಲೇ ಮೂರು ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಅವುಗಳೆಂದರೆ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ. ನಾಲ್ಕನೇ ತಂಡವಾಗಿ ನ್ಯೂಜಿಲೆಂಡ್ ಬಹುತೇಕ ಎಂಟ್ರಿಪಡೆದಿದೆ.
ಇದನ್ನೂ ಓದಿ: ಮಳೆಯಿಂದಾಗಿ ಸೆಮಿಫೈನಲ್ ಪಂದ್ಯ ರದ್ದಾದ್ರೆ ಫೈನಲ್’ಗೆ ಪ್ರವೇಶ ಪಡೆಯುವ ತಂಡ ಯಾವುದು ಗೊತ್ತಾ?
ಈ ನಡುವೆ ದಕ್ಷಿಣ ಆಫ್ರಿಕಾ ತಂಡದ ದಿಗ್ಗಜ ಮಿ,360 ಖ್ಯಾತಿಯ ಎಬಿ ಡಿವಿಲಿಯರ್ಸ್, ಹೆನ್ರಿಚ್ ಕ್ಲಾಸೆನ್ ಅವರನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ಆಟಗಾರ ಎಂದು ಹೆಸರಿಸಿದ್ದಾರೆ.
ಡಿವಿಲಿಯರ್ಸ್ ಪ್ರಕಾರ, ಮಧ್ಯಮ ಕ್ರಮಾಂಕದಲ್ಲಿ ಕ್ಲಾಸೆನ್ ತರುವಂತಹ ಹುಮ್ಮಸ್ಸು ಬೇರೊಬ್ಬ ಆಟಗಾರ ನೀಡುವುದಿಲ್ಲ. ಆತ ಮೈದಾನಕ್ಕೆ ಕಾಲಿಟ್ಟರೆ ಕೇವಲ 45 ನಿಮಿಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುತ್ತಾನೆ.
"ಹೆನ್ರಿಚ್ ಕ್ಲಾಸೆನ್ ಬಂದು 45 ನಿಮಿಷಗಳ ಕಾಲ ಬ್ಯಾಟ್ ಮಾಡಿದರೆ, ಆ ಆಟ ಮುಗಿಯಿತು ಎಂದೇ ಅರ್ಥ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸ್ಫೋಟಕ ಆಟಗಾರನೀತ. ಖಂಡಿತವಾಗಿಯೂ ಈತನೇ ಪ್ರಸ್ತುತ ವಿಶ್ವದ ಅತ್ಯಂತ ಪ್ರಭಾವಶಾಲಿ ಆಟಗಾರ” ಎಂದಿದ್ದಾರೆ.
ಇದನ್ನೂ ಓದಿ: ವರ್ಷಗಳ ಬಳಿಕ ಮತ್ತೆ ತಂಡದ ಸಾರಥ್ಯ ವಹಿಸಲಿದ್ದಾರೆ ಈ ಆಟಗಾರ ! IPL ಮೂಲಕ ಸ್ಟಾರ್ ಬ್ಯಾಟ್ಸ್ ಮ್ಯಾನ್ ಕಂ ಬ್ಯಾಕ್
ಅಂಕಿಅಂಶಗಳನ್ನು ನೋಡುವುದಾದರೆ, ಹೆನ್ರಿಚ್ ಕ್ಲಾಸೆನ್ ವಿಶ್ವಕಪ್ 2023ರಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಎರಡನೇ ಅತಿ ಹೆಚ್ಚು ಸ್ಟ್ರೈಕ್ ರೇಟ್’ನೊಂದಿಗೆ ಬ್ಯಾಟ್ ಬೀಸಿರುವ ಇವರು 8 ಇನ್ನಿಂಗ್ಸ್’ಗಳಲ್ಲಿ 316 ರನ್’ಗಳನ್ನು ಕಲೆ ಹಾಕಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.