WI vs IND: 29ನೇ ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

WI vs IND 2nd Test Match: ಟ್ರಿನಿಡಾಡ್‌ನ ಪೋರ್ಟ್‌ ಆಫ್‌ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ ಮೈದಾನದಲ್ಲಿ 2ನೇ ದಿನವಾದ ಶುಕ್ರವಾರ 87 ರನ್‌ಗಳಿಂದ ಆಟ ಮುಂದುವರಿಸಿದ  ಕೊಹ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ​

Written by - Puttaraj K Alur | Last Updated : Jul 21, 2023, 08:39 PM IST
  • ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯಿಂದ ಹೊಸ ಇತಿಹಾಸ
  • ಟೆಸ್ಟ್ ಪಂದ್ಯದಲ್ಲಿ 29ನೇ ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ರನ್ ಮೆಷಿನ್
  • 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 76ನೇ ಅಂತಾರಾಷ್ಟ್ರೀಯ ಶತಕ ಸಾಧನೆ
 WI vs IND: 29ನೇ ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ! title=
29ನೇ ಶತಕ ಸಿಡಿಸಿದ ಕೊಹ್ಲಿ!

ಪೋರ್ಟ್‌ ಆಫ್‌ ಸ್ಪೇನ್‌: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ 2ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಹೊಸ ಇತಿಹಾಸ ಬರೆದಿದ್ದು, ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಹೌದು, 500ನೇ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ಕಿಂಗ್ ಕೊಹ್ಲಿ 29ನೇ ಟೆಸ್ಟ್ ಶತಕ ಬಾರಿಸಿದ್ದಾರೆ.   

ಟ್ರಿನಿಡಾಡ್‌ನ ಪೋರ್ಟ್‌ ಆಫ್‌ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ ಮೈದಾನದಲ್ಲಿ 2ನೇ ದಿನವಾದ ಶುಕ್ರವಾರ 87 ರನ್‌ಗಳಿಂದ ಆಟ ಮುಂದುವರಿಸಿದ  ಕೊಹ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಡಾನ್‌ ಬ್ರಾಡ್ಮನ್ ಶತಕಗಳ ದಾಖಲೆಯನ್ನು ಸರಿಗಟ್ಟಿದರು.

ಇದನ್ನೂ ಓದಿ: ಬುಮ್ರಾ, ಶಮಿಗಿಂತಲೂ ಅಪಾಯಕಾರಿ ಬೌಲರ್ ಟೀಂ ಇಂಡಿಯಾಗೆ ಎಂಟ್ರಿ ! ಬಡತನದಲ್ಲೇ ಬೆಳೆದು ಬಂದ ಪ್ರತಿಭೆ

ಮೊದಲ ಇನ್ನಿಂಗ್ಸ್‌ನ 91ನೇ ಓವರ್‌ನಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸಿದರು. ಶಾನನ್‌ ಗ್ಯಾಬ್ರಿಯಲ್‌ ಅವರ ಈ ಓವರ್‍ನ 2ನೇ ಎಸೆತವನ್ನು ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿ ಬೌಂಡರಿಗಟ್ಟುವ ಮೂಲಕ  ಕೊಹ್ಲಿ 29ನೇ ಶತಕ ಬಾರಿಸಿ ಮೈದಾನದಲ್ಲಿ ಸಂಭ್ರಮಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಕೊಹ್ಲಿಯ 76ನೇ ಶತಕವಾಗಿದೆ. ಕೊಹ್ಲಿ ಅವರ ಈ ಸಾಧನೆಗೆ ಟೀ ಇಂಡಿಯಾ ಆಟಗಾರರು ಸೇರಿದಂತೆ ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಪ್ರಸ್ತುತ ಟೀಂ ಇಂಡಿಯಾ 95 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 334 ರನ್‌ ಬಾರಿಸಿದೆ. 196 ಎಸೆತಗಳಲ್ಲಿ ಕೊಹ್ಲಿ 11 ಬೌಂಡರಿ ಸಹಿತ 117 ರನ್‌ ಬಾರಿಸಿ ಆಡುತ್ತಿದ್ದಾರೆ. ಇವರಿಗೆ 115 ಎಸೆತಗಳಲ್ಲಿ 4 ಬೌಂಡರಿ ಸಹಿತ 52 ರನ್‌ ಬಾರಿಸಿರುವ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡುತ್ತಿದ್ದಾರೆ. ಇನ್ನುಳಿದಂತೆ ಯಶಸ್ವಿ ಜೈಸ್ವಾಲ್ (57), ನಾಯಕ ರೋಹಿತ್ ಶರ್ಮಾ (80) ರನ್ ಗಳಿಸಿ ಔಟಾಗಿದ್ದರು. ವೆಸ್ಟ್ ಇಂಡೀಸ್ ಪರ ಕೆಮರ್ ರೋಚ್,ಶಾನನ್ ಗೇಬ್ರಿಯಲ್, ಜೋಮೆಲ್ ವಾರಿಕನ್ ಮತ್ತು ಜೇಸನ್ ಹೋಲ್ಡರ್ ತಲಾ ಒಂದೊಂದು ವಿಕೆಟ್ ಗಳಿಸಿದ್ದಾರೆ.

ಇದನ್ನೂ ಓದಿ: ಧರ್ಮದ ಹೇಳಿದಂತೆ ಬದುಕಲು 18ರ ಹರೆಯದಲ್ಲೇ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟರ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News