World Cup: ಮನೆಯಲ್ಲೇ ಕುಳಿತು ವಿಶ್ವಕಪ್ ವೀಕ್ಷಿಸಿ ಎಂದ ವಿರಾಟ್ ಕೊಹ್ಲಿ, ಕಾರಣ ಏನ್ ಗೊತ್ತಾ!

World Cup Virat Kohli: ವಿಶ್ವಕಪ್ ಟಿಕೆಟ್‌ಗಾಗಿ ತಮ್ಮನ್ನು ಸಂಪರ್ಕಿಸುವವರಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ? 

Written by - Yashaswini V | Last Updated : Oct 4, 2023, 02:27 PM IST
  • ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಉಣಿಸುವ ಐ‌ಸಿ‌ಸಿ ವಿಶ್ವಕಪ್ 2023 ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
  • ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಸಾವಿರಾರು ಪ್ರೇಕ್ಷಕರ ನಡುವೆ ತಾನೂ ಕುಳಿತು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಯಸುತ್ತಾನೆ.
  • ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಟಿಕೆಟ್ ಪಡೆಯಲು ಅಭಿಮಾನಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಾರೆ.
World Cup: ಮನೆಯಲ್ಲೇ ಕುಳಿತು ವಿಶ್ವಕಪ್ ವೀಕ್ಷಿಸಿ ಎಂದ ವಿರಾಟ್ ಕೊಹ್ಲಿ, ಕಾರಣ ಏನ್ ಗೊತ್ತಾ!  title=

World Cup Virat Kohli: ಕ್ರಿಕೆಟ್ ಹಬ್ಬ ವಿಶ್ವಕಪ್ ಗಾಗಿ ಇಡೀ ವಿಶ್ವವೆ ಕಾದು ಕುಳಿತಿದೆ. ಕ್ರಿಕೆಟ್ ಕೇವಲ ಒಂದು ಆಟವಲ್ಲ, ಕೊನೆ ಕ್ಷಣದವರೆಗೂ ಮನರಂಜನೆ ಜೊತೆ ಜೊತೆಗೆ ಅಭಿಮಾನಿಗಳಲ್ಲಿ ಪಂದ್ಯ ಏನಾಗುತ್ತೋ ಎಂಬ ಕಾತುರವನ್ನು ಕಾಪಾಡಿಕೊಳ್ಳುವ ಕ್ರೀಡೆ. ಕ್ರಿಕೆಟ್ ಪಂದ್ಯ ವೀಕ್ಷಣೆಯೇ ಒಂದು ಆನಂದ. ಅದರಲ್ಲಿ, ಯಾರಿಗೆ ತಾನೇ ಕ್ರಿಕೆಟ್ ಅನ್ನು ನೇರವಾಗಿ ಆನಂದಿಸುವ ಬಯಕೆ ಇರುವುದಿಲ್ಲ ಹೇಳಿ. 

ವಿಶ್ವಕಪ್ ಪಂದ್ಯ ವೀಕ್ಷಣೆಗಾಗಿ ಟಿಕೆಟ್‌ಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಸುದ್ದಿಯೊಂದರ ಪ್ರಕಾರ, ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳ ಬೆಲೆ ಕಾಳಸಂತೆಯಲ್ಲಿ 56 ಲಕ್ಷ ರೂ.ಗೆ ತಲುಪಿತ್ತು. ಇನ್ನು ಹಲವು ಪಂದ್ಯಗಳ ಟಿಕೆಟ್ ದರ 18ರಿಂದ 22 ಲಕ್ಷ ರೂ.ಗೆ ತಲುಪಿವೆ ಎಂತಲೂ ಹೇಳಲಾಗುತ್ತಿದೆ.  ಆದರೆ, ಈ ಮಧ್ಯೆ, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮನೆಯಲ್ಲಿ ಕುಳಿತು ವಿಶ್ವಕಪ್ ನೋಡಿ ಎಂದು ಹೇಳಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಹೀಗೆ ಹೇಳಿದ್ದಾದರೂ ಏಕೆ ಗೊತ್ತಾ? 

ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಉಣಿಸುವ ಐ‌ಸಿ‌ಸಿ ವಿಶ್ವಕಪ್ 2023 ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಸಾವಿರಾರು ಪ್ರೇಕ್ಷಕರ ನಡುವೆ ತಾನೂ ಕುಳಿತು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಯಸುತ್ತಾನೆ. ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಟಿಕೆಟ್ ಪಡೆಯಲು ಅಭಿಮಾನಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಆದರೆ 2023ರ ಐಸಿಸಿ ವಿಶ್ವಕಪ್‌ಗೆ ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ. 

ಇದನ್ನೂ ಓದಿ- ಪಾಕಿಸ್ತಾನದ ಕಳಪೆ ಫೀಲ್ಡಿಂಗ್‌ ಆಟಗಾರರ ಕಾಲೆಳೆದ ಶಿಖರ್ ಧವನ್.! ವಿಡಿಯೋ ವೈರಲ್‌

ಕ್ರಿಕೆಟ್ ಅಭಿಮಾನಿಗಳು ತಮ್ಮ ಸಂಪರ್ಕಗಳನ್ನು ಬಳಸಿ ನೇರವಾಗಿ ಕ್ರಿಕೆಟ್ ವೀಕ್ಷಣೆಗೆ ಟಿಕೆಟ್ ಪಡೆಯಲು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಕೆಲವರು ಕ್ರಿಕೆಟ್ ಆಟಗಾರರಿಂದಲೂ ಟಿಕೆಟ್ ಪಡೆಯಲು ಬಯಸುವುದು ಸರ್ವೇ ಸಾಮಾನ್ಯ. ಅಂತಹವರಿಗೆ ಸಾಮಾಜಿಕ ಜಾಲತಾಣದ ಮೂಲಕ ವಿರಾಟ್ ಕೊಹ್ಲಿ ಸಂದೇಶವೊಂದನ್ನು ರವಾನಿಸಿದ್ದಾರೆ. 

ಇದನ್ನೂ ಓದಿ- World Cup 2023 : ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಪ್ಲೇಯಿಂಗ್ 11 ಪ್ರಕಟ ! ಈ ಆಟಗಾರರನ್ನು ಹೊರಗಿಟ್ಟ ರೋಹಿತ್ ಶರ್ಮಾ

ಭಾರತ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟಿಕೆಟ್‌ಗಾಗಿ ತಮ್ಮನ್ನು ಸಂಪರ್ಕಿಸಲು ಬಯಸುವ ಎಲ್ಲರಿಗೂ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂದೇಶವೊಂದನ್ನು ರವಾನಿಸಿದ್ದು 'ವಿಶ್ವಕಪ್ ಬರಲಿದೆ, ಇಡೀ ಪಂದ್ಯಾವಳಿಯಲ್ಲಿ ಟಿಕೆಟ್‌ಗಾಗಿ ನನ್ನನ್ನು ವಿನಂತಿಸಬೇಡಿ ಎಂದು ನನ್ನ ಎಲ್ಲಾ ಸ್ನೇಹಿತರು ಮತ್ತು ಪರಿಚಯಸ್ಥರಲ್ಲಿ ನಾನು ವಿನಮ್ರವಾಗಿ ವನಾಂಟಿಸಿದ್ದು, ಟಿಕೆಟ್ ಸಿಗದಿದ್ದರೆ ದಯವಿಟ್ಟು ನಿಮ್ಮ ಮನೆಯಿಂದಲೇ ಪಂದ್ಯವನ್ನು ಆನಂದಿಸಿ' ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News