Video : ಪತ್ನಿಗೆ ಥ್ಯಾಂಕ್ಸ್ ಹೇಳಿ, ಕಣ್ಣೀರಿಟ್ಟು ಟೆನಿಸ್‌ ಲೋಕಕ್ಕೆ ವಿದಾಯ ಹೇಳಿದ ಫೆಡರರ್!

ಟೆನಿಸ್‌ ಸ್ಟಾರ್ ಆಟಗಾರ ಮತ್ತು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ಇಂದು ತಮ್ಮ 19 ವರ್ಷಗಳ ಕ್ರೀಡಾ ವೃತ್ತಿಜೀವನಕ್ಕೆ ನಿವೃತ್ತಿ ಗುಡ್ ಬೈ ಹೇಳಿದ್ದಾರೆ.

Written by - Channabasava A Kashinakunti | Last Updated : Sep 24, 2022, 02:53 PM IST
  • ಟೆನಿಸ್‌ ಸ್ಟಾರ್ ಆಟಗಾರ ಮತ್ತು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್
  • ಇಂದು ತಮ್ಮ 19 ವರ್ಷಗಳ ಕ್ರೀಡಾ ವೃತ್ತಿಜೀವನಕ್ಕೆ ನಿವೃತ್ತಿ ಗುಡ್ ಬೈ
  • ಇಂದು ಅವರು ತಮ್ಮ ಆಟಕ್ಕೆ ಪತ್ನಿಗೆ ಥ್ಯಾಂಕ್ಸ್ ಹೇಳಿ ಭಾವನಾತ್ಮಕ ವಿದಾಯ ಹೇಳಿದರು.
Video : ಪತ್ನಿಗೆ ಥ್ಯಾಂಕ್ಸ್ ಹೇಳಿ, ಕಣ್ಣೀರಿಟ್ಟು ಟೆನಿಸ್‌ ಲೋಕಕ್ಕೆ ವಿದಾಯ ಹೇಳಿದ ಫೆಡರರ್! title=

Roger Federer farewell : ಟೆನಿಸ್‌ ಸ್ಟಾರ್ ಆಟಗಾರ ಮತ್ತು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ಇಂದು ತಮ್ಮ 19 ವರ್ಷಗಳ ಕ್ರೀಡಾ ವೃತ್ತಿಜೀವನಕ್ಕೆ ನಿವೃತ್ತಿ ಗುಡ್ ಬೈ ಹೇಳಿದ್ದಾರೆ. ಆದ್ರೆ, ನಿವೃತ್ತಿಯ ಕೊನೆಯ ಪಂದ್ಯ ಆಡಿ ಫೆಡರರ್ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಮತ್ತೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

 ಇಂದು ಲೇವರ್‌ಕಪ್‌ನಲ್ಲಿ ನಡೆದ ಡಬಲ್ಸ್‌ನಲ್ಲಿ ಸೋಲುವ ಮೂಲಕ ಸ್ವಿಟ್ಜರ್ಲ್ಯಾಂಡ್‌ ಟೆನಿಸ್‌ ಸ್ಟಾರ್ ಆಟಗಾರ ಫೆಡರರ್ ವಿದಾಯ ಹೇಳಿದ್ದಾರೆ. 

ಇದನ್ನೂ ಓದಿ : India Women vs England Women 3rd ODI : ಇಂದು Ind vs Eng ಮಹಿಳಾ, 3ನೇ ODI : ಎಲ್ಲಿ ಮತ್ತು ಯಾವಾಗ?

ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ ಅವರು 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿದ್ದಾರೆ. ಇಂದು ಅವರು ತಮ್ಮ ಆಟಕ್ಕೆ ಪತ್ನಿಗೆ ಥ್ಯಾಂಕ್ಸ್ ಹೇಳಿ ಭಾವನಾತ್ಮಕ ವಿದಾಯ ಹೇಳಿದರು.

ಇಂದು ನಡೆದ ಕೊನೆಯ ಪಂದ್ಯವನ್ನು ಲೇವರ್ ಕಪ್ ಪುರುಷರ ಡಬಲ್ಸ್ ಪಂದ್ಯದಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಅವರೊಂದಿಗೆ ಆಡಿದರು. ಇಬ್ಬರು ಯುರೋಪಿಯನ್ ಆಟಗಾರರು ಮೊದಲ ಸುತ್ತಿನಲ್ಲಿ ಗೆದ್ದರು. ಆದರೆ ಅಮೆರಿಕನ್ನರು 4-6, 7-6 (7/2), 11-9 ರಿಂದ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು.

ನಂತರ ಈ ಮಾತನಾಡಿದ ರೋಜರ್ ಫೆಡರರ್, ಈ ದಿನ ನನಗೆ ಅದ್ಭುತವಾಗಿದೆ. ನನಗೆ ಯಾವುದೇ ದುಃಖವಿಲ್ಲ. ನಾನು ಸಂತೋಷವಾಗಿದ್ದೇನೆ ಎಂದು ನಮ್ಮ ಬಾಯ್ಸ್ ಗೆ ಹೇಳಿದ್ದೇನೆ. ಈ ಕ್ಷಣದಲ್ಲಿ ಇಲ್ಲಿ ನಿಂತಿರುವುದು ತುಂಬಾ ಖುಷಿಕೊಡುತ್ತಿದೆ. ಎಲ್ಲಾ ಪಂದ್ಯಗಳಲ್ಲಿ ಸಂತೋಷದ ಸಂದರ್ಭ ಎದುರಾಗಿದೆ. ನಮ್ಮ ಹುಡುಗರು, ಫ್ಯಾನ್ಸ್, ಕುಟುಂಬಸ್ಥರು, ಸ್ನೇಹಿತರು ಎಲ್ಲರೂ ನನ್ನೊಂದಿಗಿದ್ದಾರೆ. ಹೀಗಾಗಿ ನಾನು ಯಾವತ್ತೂ ಹೆಚ್ಚು ಒತ್ತಡ ಅನುಭವಿಸಿಲ್ಲ. ನಾನು ಇಷ್ಟು ಸಾಧನೆ ಮಾಡಿದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು  ಕಣ್ಣೀರಿಟ್ಟರು.

Roger Federer and Rafael Nadal both let their emotions show after their final competitive match on the same court.

ಫೆಡರರ್ ಒಟ್ಟು 8 ವಿಂಬಲ್ಡನ್ ಟ್ರೋಫಿ ಸೇರಿದಂತೆ ಒಟ್ಟಾರೆ 103 ಪ್ರಶಸ್ತಿಗಳು ಮತ್ತು 130 ಮಿಲಿಯನ್‌ ಡಾಲರ್‌ಗಿಂತಲೂ ಹೆಚ್ಚು ಬಹುಮಾನದ ಮೊತ್ತವನ್ನು ಪಡೆದಿದ್ದಾರೆ.

ಫೆಡರರ್ ಪುರುಷರ ಸಿಂಗಲ್ಸ್ ಟೆನಿಸ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಇನ್ನೂ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅಲ್ಲದೆ, ಫೆಡರರ್ ತಮ್ಮ ವೃತ್ತಿಜೀವನದ 1381 ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಸೇರಿವೆ.

Roger Federer is hoisted high by members of Team Europe and Team World as they celebrate him and his achievements after his final competitive tennis match.

ಇದನ್ನೂ ಓದಿ : Rohit Sharma: ಆಸ್ಟ್ರೇಲಿಯಾ ವಿರುದ್ಧ ಗೆದ್ದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News