Nitish Kumar Reddy: ನಿತೀಶ್ ಕುಮಾರ್ ರೆಡ್ಡಿ... ಈ ಹೆಸರು ಕೇಳಿದ್ರೆ ಇದೀಗ ಬಾಂಗ್ಲಾ ಬೌಲರ್‌ಗಳು ಕನಸಿನಲ್ಲೂ ಬೆಚ್ಚಿಬೀಳುವಂತಾಗಿದೆ. ಇದಕ್ಕೆ ಕಾರಣ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ 2ನೇ ಟಿ-20 ಪಂದ್ಯದಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ. ಹೌದು, 2ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಿತೀಶ್ ಆಟಕ್ಕೆ ಇಡೀಗ ಬಾಂಗ್ಲಾದೇಶ ತಂಡವೇ ದಂಗಾಗಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 34 ಎಸೆತಗಳಲ್ಲಿ 74 ರನ್ ಗಳಿಸಿದ ನಿತೀಶ್ ರೆಡ್ಡಿ ಅಕ್ಷರಶಹಃ ಬಾಂಗ್ಲಾ ಬೌಲರ್‌ಗಳ ಬೇವರಿಳಿಸಿದರು. ನಿತೀಶ್ ಅವರ ಈ ಇನ್ನಿಂಗ್ಸ್‌ನಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳು ಸೇರಿದ್ದವು.
ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಸಂಜು ಸ್ಯಾಮ್ಸನ್(10) ಮತ್ತು ಅಭಿಷೇಕ್ ಶರ್ಮಾ(15) ಕೇವಲ 25 ರನ್ಗಳಿಗೆ ಪೆವಿಲಿಯನ್ ಸೇರಿದರು. ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ ಸಹ 8 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಹೀಗಾಗಿ ಟೀಂ ಇಂಡಿಯಾ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ್ದರಿಂದ 100 ರನ್ ಕಲೆಹಾಕುವುದು ಕಷ್ಟಕರವಾಗಿತ್ತು.
Maiden T20I Half-Century for Nitish Kumar Reddy 🔥🔥
Watch him hit two consecutive sixes off Rishad Hossain's bowling!
Live - https://t.co/Otw9CpO67y…… #INDvBAN@IDFCFIRSTBank pic.twitter.com/jmq5Yt711n
— BCCI (@BCCI) October 9, 2024
ಇದನ್ನೂ ಓದಿ: ಒಂದೇ ಏಟಿಗೆ ಮೂವರು ದಿಗ್ಗಜ್ಜರ ದಾಖಲೆ ಉಡೀಸ್ ! ಬಹು ದೊಡ್ಡ ಸಾಧನೆಯತ್ತ ಅರ್ಷದೀಪ್ ಸಿಂಗ್
Delight in Delhi! 🥳#TeamIndia register a 86-run win in the 2nd T20I and seal the series 2⃣-0⃣
Scorecard - https://t.co/Otw9CpO67y#INDvBAN | @IDFCFIRSTBank pic.twitter.com/KfPHxoSZE4
— BCCI (@BCCI) October 9, 2024
ಬಳಿಕ ಜೊತೆಯಾದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹಾಗೂ ರಿಂಕು ಸಿಂಗ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ದಿಕ್ಕನೇ ಬದಲಿಸಿದರು. ಅದರಲ್ಲೂ 2ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಿತೀಶ್ ಆಟಕ್ಕೆ ಬಾಂಗ್ಲಾದೇಶ ತಂಡವೇ ಸುಸ್ತಾಯಿತು. ಆರಂಭದಲ್ಲಿ ಈ ಜೋಡಿ ನಿದಾಗತಿಯ ಆಟವಾಡಿದರು. ನಂತರ ಸ್ಫೋಟಕ ಆಟ ಶುರು ಹಚ್ಚಿಕೊಂಡ ಈ ಜೋಡಿ ಬಾಂಗ್ಲಾ ಬೌಲರ್‌ಗಳಿಗೆ ಬೇವರಿಳಿಸಿದರು. ನಿತೀಶ್ ಕುಮಾರ್ ರೆಡ್ಡಿ 74 ರನ್ ಗಳಿಸಿದರೆ, ರಿಂಕು ಸಿಂಗ್ 53 ರನ್ ಗಳಿಸಿದರು. ನಂತರ ಬಂದ ಹಾರ್ದಿಕ್ ಪಾಂಡ್ಯ 32 ಹಾಗೂ ರಿಯಾನ್ ಪರಾಗ 15 ರನ್ ಗಳಿಸಿದರು.
ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 221 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾದೇಶ ತಂಡವು ಟೀಂ ಇಂಡಿಯಾದ ಬೌಲಿಂಗ್ ದಾಳಿಗೆ ಸಿಲುಕಿ ನಲುಗಿತು. 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 135 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ: T20ಯಲ್ಲಿ ಭಾರತವನ್ನು ಪುಡಿ ಪುಡಿ ಮಾಡುತ್ತೇವೆ! ಟೀಂ ಇಂಡಿಯಾಗೆ ಮತ್ತೆ ಬೆದರಿಕೆ ಹಾಕಿದ ಬಾಂಗ್ಲಾ ನಾಯಕ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.