ಪುತ್ರನ ಜನನದ ನಂತರ ವಿರಾಟ್ ಕೊಹ್ಲಿಯ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ !

Virat in London Viral Photo : ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದು ವೈರಲ್ ಆಗಿದೆ.ಈ ಪೋಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ.

Written by - Ranjitha R K | Last Updated : Feb 21, 2024, 11:58 AM IST
  • ಫೆಬ್ರವರಿ 15 ರಂದು ಗಂಡು ಮಗುವಿಗೆ ಜನ್ಮ ನೀಡಿದ ಅನುಷ್ಕಾ
  • ಜನಿಸಿದ ಮಗುವಿಗೆ ಅಕಾಯ್ ಎಂದು ಕೂಡಾ ಹೆಸರಿಸಲಾಗಿದೆ.
  • ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದು ವೈರಲ್
ಪುತ್ರನ ಜನನದ ನಂತರ ವಿರಾಟ್ ಕೊಹ್ಲಿಯ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ ! title=

Virat in London Viral Photo : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಎರಡನೇ  ಮಗುವನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 15 ರಂದು ಅನುಷ್ಕಾ ಗಂಡು ಮಗುವಿಗೆ ತಾಯಿಯಾಗಿರುವ ಸುದ್ದಿಯನ್ನು  ಈ ದಂಪತಿ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ. ಜನಿಸಿದ ಮಗುವಿಗೆ ಅಕಾಯ್ ಎಂದು ಕೂಡಾ ಹೆಸರಿಸಲಾಗಿದೆ.   ದಂಪತಿ ಈ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾ ಪೂರವೇ ಹರಿದು ಬರುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದು ವೈರಲ್ ಆಗಿದೆ.ಈ ಪೋಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ.

ವೈರಲ್ ಆಗುತ್ತಿರುವ ಕೊಹ್ಲಿ ಫೋಟೋ : 
ವಿರಾಟ್-ಅನುಷ್ಕಾ ತಮ್ಮ ಮಗನ ಜನನದ ಸುದ್ದಿಯನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಇದೀಗ ವಿರಾಟ್ ಕೊಹ್ಲಿಯ ಫೋಟೋವೊಂದು ವೈರಲ್ ಆಗಿದೆ.ವಾಸ್ತವವಾಗಿ, ಅನುಷ್ಕಾ ಶರ್ಮಾ ಲಂಡನ್ ಆಸ್ಪತ್ರೆಯಲ್ಲಿ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಈ ಮೊದಲು ಕೂಡಾ ಹಬ್ಬಿತ್ತು. ಈಗ ವೈರಲ್ ಆಗುತ್ತಿರುವ ವಿರಾಟ್‌ನ ಈ ಫೋಟೋ ಕೂಡಾ ಲಂಡನ್ ನದ್ದೇ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ವಿರಾಟ್ ಸಂಜೆ ಲಂಡನ್ ಬೀದಿಗಳಲ್ಲಿ ತಿರುಗಾಡುತ್ತಿರುವುದನ್ನು ಕಾಣಬಹುದು.  ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬರು ಅವರ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

 

ಇದನ್ನೂ ಓದಿ : Virat-Anushka baby: ಗಂಡು ಮಗುವಿಗೆ ಪೋಷಕರಾದ ವಿರುಷ್ಕಾ… 2ನೇ ಕಂದಮ್ಮನಿಗೆ ಹೀಗೆಂದು ಹೆಸರಿಟ್ಟ ವಿರಾಟ್-ಅನುಷ್ಕಾ

ಪುತ್ರನ ಹೆಸರು ಅಕಾಯ್ :
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗ ಅಕಾಯ್‌ನ ಜನನದ ಬಗ್ಗೆ ಮಾಹಿತಿ ನೀಡಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಫೆಬ್ರವರಿ 15 ರಂದು ನಾವು ನಮ್ಮ ಮಗ ಮತ್ತು ವಮಿಕಾ ಸಹೋದರನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ಹೇಳಲು ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ನಮ್ಮ ಜೀವನದ ಈ ಸುಂದರ ಕ್ಷಣಗಳಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ನಾವು ಬಯಸುವುದಾಗಿಯೂ ಹೇಳಿದ್ದಾರೆ. ಇದೇ ಪೋಸ್ಟ್ ನಲ್ಲಿ ತಮ್ಮ ಮಗನ ಹೆಸರು ಅಕಾಯ್ ಎನ್ನುವುದನ್ನು ಕೂಡಾ ಘೋಷಿಸಿದ್ದಾರೆ. 

ಇಂಗ್ಲೆಂಡ್ ಸರಣಿಯಲ್ಲಿ ಆಡುತ್ತಿಲ್ಲ ಕೊಹ್ಲಿ :
ಭಾರತದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ವೈಯಕ್ತಿಕ ಕಾರಣ ನೀಡಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಬಿಸಿಸಿಐ ಕೂಡಾ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದೆ. ಯಾವುದೇ ಕಾರಣವಿಲ್ಲದೆ ಕೊಹ್ಲಿ ರಜೆ ಕೇಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡಾ ಹೇಳಿಕೆ ನೀಡಿದ್ದರು. ಆದರೆ, ಎರಡನೇ ಮಗುವಿನ ಜನನದಿಂದಾಗಿ ಅವರು ಟೆಸ್ಟ್ ಸರಣಿಯ ಭಾಗವಾಗಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. 

ಇದನ್ನೂ ಓದಿ : ರಶ್ಮಿಕಾ, ಸಾರಾ ಬಳಿಕ ವಿರಾಟ್ ಕೊಹ್ಲಿ ಬೆನ್ನೇರಿದ ಡೀಪ್-ಫೇಕ್ ಪೆಡಂಭೂತ! ಬೆಟ್ಟಿಂಗ್ ಪ್ರಚಾರದ ವಿಡಿಯೋ ವೈರಲ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News