ವಿರಾಟ್ ಕೊಹ್ಲಿ ಟೆಸ್ಟ್ ಪ್ರೀತಿ 'ಟೆಸ್ಟ್ ಕ್ರಿಕೆಟ್' ನ್ನು ಜೀವಂತವಾಗಿಟ್ಟಿದೆ-ಗ್ರೇಮ್ ಸ್ಮಿತ್

ಟ್ವೆಂಟಿ ಕ್ರಿಕೆಟ್ ಬಂದ ಮೇಲೆ ಟೆಸ್ಟ್ ಕ್ರಿಕೆಟ್ ಮೇಲಿನ ಮಹತ್ವದ ಕಡಿಮೆಯಾಗುತ್ತಿದೆ ಆದರೆ ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ಟೆಸ್ಟ್ ಆಟದ ಮೇಲೆ ತೋರಿಸುತ್ತಿರುವ ಪ್ರೀತಿ ಅದನ್ನು ಜೀವಂತವಾಗಿರಿಸಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ  ನಾಯಕ  ಗ್ರೆಮ್ ಸ್ಮಿತ್ ಅಭಿಪ್ರಾಯ ಪಟ್ಟಿದ್ದಾರೆ.

Last Updated : Nov 3, 2018, 02:28 PM IST
ವಿರಾಟ್ ಕೊಹ್ಲಿ ಟೆಸ್ಟ್ ಪ್ರೀತಿ 'ಟೆಸ್ಟ್ ಕ್ರಿಕೆಟ್' ನ್ನು ಜೀವಂತವಾಗಿಟ್ಟಿದೆ-ಗ್ರೇಮ್ ಸ್ಮಿತ್ title=

ನವದೆಹಲಿ: ಟ್ವೆಂಟಿ ಕ್ರಿಕೆಟ್ ಬಂದ ಮೇಲೆ ಟೆಸ್ಟ್ ಕ್ರಿಕೆಟ್ ಮೇಲಿನ ಮಹತ್ವದ ಕಡಿಮೆಯಾಗುತ್ತಿದೆ ಆದರೆ ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ಟೆಸ್ಟ್ ಆಟದ ಮೇಲೆ ತೋರಿಸುತ್ತಿರುವ ಪ್ರೀತಿ ಅದನ್ನು ಜೀವಂತವಾಗಿರಿಸಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ  ನಾಯಕ  ಗ್ರೆಮ್ ಸ್ಮಿತ್ ಅಭಿಪ್ರಾಯ ಪಟ್ಟಿದ್ದಾರೆ.

ಜಗನ್ಮೋಹನ್ ದಾಲ್ಮಿಯಾ ವಾರ್ಷಿಕ ಕಂಕ್ಲೇವ್ ನಲ್ಲಿ ಭಾಗವಹಿಸಿ ಮಾತನಾಡಿದ ಮಾತನಾಡಿದ ಸ್ಮಿತ್ " ಜಾಗತೀಕ ಕ್ರಿಕೆಟ್ ಸೂಪರ್ ಸ್ಟಾರ್ ಗಳ ಕೊರತೆಯನ್ನು ಹೊಂದಿದೆ.ಹೆಚ್ಚೆಂದರೆ ಒಬ್ಬರು ಅಥವಾ ಇಬ್ಬರು ಇಂಗ್ಲೆಂಡ್ ನಲ್ಲಿರಬಹುದು ,ಅಂತಹ ಆಟಗಾರರಲ್ಲಿ ವಿರಾಟ್ ಕೂಡ ಹೌದು, ಅವರು ಟೆಸ್ಟ್ ಕ್ರಿಕೆಟ್ ಮೇಲೆ ತೋರಿಸುತ್ತಿರುವ ಪ್ರೀತಿ ಮತ್ತು ಅದಕ್ಕೆ ಅನುಗುಣವಾಗಿ ಅವರು ಪ್ರದರ್ಶನ ನೀಡುತ್ತಿರುವುದು ಐಪಿಎಲ್ ಮತ್ತು ಟ್ವೆಂಟಿ ಕ್ರಿಕೆಟ್ ನ್ನು ಹೆಚ್ಚು ಪ್ರೀತಿಸುತ್ತಿರುವ ದೇಶದಲ್ಲಿ ಟೆಸ್ಟ್ ಕ್ರಿಕೆಟ್ ನ್ನು ಪ್ರಚಲಿತವಾಗಿರುವಂತೆ ಮಾಡಿದೆ ಎಂದು \ ತಿಳಿಸಿದರು.

ಎಲ್ಲಿಯವರೆಗೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನ್ನು ಪ್ರೊಮೋಟ್ ಮಾಡುತ್ತಾರೋ ಅಲ್ಲಿಯವರೆಗೋ  ನಮಗೆ ಟೆಸ್ಟ್ ಪಂದ್ಯವನ್ನು ಪ್ರಚಲಿತವಾಗಿಡಬಹುದು ಎಂದು ಸ್ಮಿತ್ ತಿಳಿಸಿದರು. ಇತ್ತೀಚಿಗೆ ವಿರಾಟ್ ಕೊಹ್ಲಿ ಎಲ್ಲ ವಿಭಾಗದ ಪಂದ್ಯಗಳಲ್ಲಿ ಅದ್ಬುತ ಪ್ರದರ್ಶನ ನೀಡಿದ್ದರು.ಅದರಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಟೂರ್ನಿಯಿರಬಹುದು ಅಥವಾ ಇತ್ತೀಚಿಗೆ ನಡೆದ ವೆಸ್ಟ್ ಇಂಡೀಸ್ ಸರಣಿ ಇರಬಹುದು ಹೀಗೆ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ.

  

Trending News