ದೆಹಲಿ ತಂಡದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ; 12 ವರ್ಷಗಳ ನಂತರ ರಣಜಿ ಟ್ರೋಫಿ ಆಡುತ್ತಾರಾ?

Ranji Trophy 2024/25: ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಇದೀಗ ಎರಡನೇ ಟೆಸ್ಟ್ ಸೆಪ್ಟೆಂಬರ್ 27ರಿಂದ ಕಾನ್ಪುರದಲ್ಲಿ ಆರಂಭವಾಗಲಿದೆ. ಈ ಮಧ್ಯೆ ಕೊಹ್ಲಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ.

Written by - Puttaraj K Alur | Last Updated : Sep 25, 2024, 10:16 AM IST
  • ರಣಜಿ ಟ್ರೋಫಿಗೆ ದೆಹಲಿ ತಂಡವು ಸಂಭಾವ್ಯ ಆಟಗಾರರ ಹೆಸರು ಪ್ರಕಟಿಸಿದೆ
  • ಈ ಆಟಗಾರರಲ್ಲಿ ವಿರಾಟ್ ಕೊಹ್ಲಿ ಮತ್ತು ರಿಷಬ್‌ಪಂತ್ ಹೆಸರುಗಳೂ ಸೇರಿದೆ
  • ರಣಜಿ ಟ್ರೋಫಿ 2024-25 ಅಕ್ಟೋಬರ್ 11ರಿಂದ ಪ್ರಾರಂಭವಾಗುತ್ತದೆ
ದೆಹಲಿ ತಂಡದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ; 12 ವರ್ಷಗಳ ನಂತರ ರಣಜಿ ಟ್ರೋಫಿ ಆಡುತ್ತಾರಾ? title=
ರಣಜಿ ಆಡುತ್ತಾರಾ ಕೊಹ್ಲಿ?

Ranji Trophy 2024/25: 2024-25ರ ರಣಜಿ ಟ್ರೋಫಿಗೆ ದೆಹಲಿ ತಂಡವು ಸಂಭಾವ್ಯ ಆಟಗಾರರ ಹೆಸರನ್ನು ಪ್ರಕಟಿಸಿದೆ. ಈ ಆಟಗಾರರಲ್ಲಿ ವಿರಾಟ್ ಕೊಹ್ಲಿ ಹೆಸರೂ ಸೇರಿದೆ. 2018ರ ನಂತರ ಇದೇ ಮೊದಲ ಬಾರಿಗೆ ದೆಹಲಿಯ ಸಂಭಾವ್ಯ ರಣಜಿ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆದಿದ್ದಾರೆ. 2012-13ರ ಋತುವಿನಲ್ಲಿ ಕೊಹ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಆಡಿದ್ದರು. ಆ ಋತುವಿನಲ್ಲಿ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕೊಹ್ಲಿ ರಣಜಿ ಟ್ರೋಫಿಯಲ್ಲಿ ಭಾಗವಹಿಸಿದ್ದರು. ಇದೀಗ ಮತ್ತೊಮ್ಮೆ ಭಾರತದ ಮಾಜಿ ನಾಯಕ ಹಾಗೂ ಬ್ಯಾಟ್ಸ್‌ಮನ್ ಕೊಹ್ಲಿ ದೆಹಲಿಯ ರಣಜಿ ಟ್ರೋಫಿ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಜೊತೆ ಬ್ಯುಸಿಯಾಗಿರುವುದರಿಂದ ಕೊಹ್ಲಿ ರಣಜಿ ಟ್ರೋಫಿಯಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ದೆಹಲಿಯ ಸಂಭಾವ್ಯ ತಂಡದಲ್ಲಿ ಪಂತ್ ಮತ್ತು ಕೊಹ್ಲಿ!  

ವಾಸ್ತವವಾಗಿ ರಣಜಿ ಟ್ರೋಫಿ 2024-25 ಟೂರ್ನಿ ನಡೆಯುವ ವೇಳೆ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಆಡುತ್ತಿರುತ್ತಾರೆ. ಇದಾದ ಬಳಿಕ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಣಜಿ ಟ್ರೋಫಿಗೆ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಸೇರ್ಪಡೆಯಾಗಿರುವುದು ಕೊಂಚ ಅಚ್ಚರಿ ಮೂಡಿಸಿದೆ. ರಣಜಿ ಟ್ರೋಫಿಯ ಸಂಭಾವ್ಯ ಆಟಗಾರರಲ್ಲಿ ಕೊಹ್ಲಿ ಮಾತ್ರವಲ್ಲ, ರಿಷಬ್ ಪಂತ್ ಕೂಡ ಸೇರ್ಪಡೆಗೊಂಡಿದ್ದಾರೆ. ರಿಷಬ್ ಪಂತ್ ಇತ್ತೀಚೆಗೆ ಡೆಲ್ಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಉದ್ಘಾಟನಾ ಪಂದ್ಯವನ್ನು ಓಲ್ಡ್ ಡೆಲ್ಲಿ-6ಗಾಗಿ ಆಡುತ್ತಿದ್ದರು.
ರಣಜಿ ಟ್ರೋಫಿ 2024-25 ಅಕ್ಟೋಬರ್ 11ರಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: 17 ಸೀಸನ್‌ ಮುಗಿದರೂ ಈ ಒಂದು ಕಾರಣಕ್ಕೆ ಇನ್ನೂ ಆರ್‌ಸಿಬಿಯಲ್ಲೇ ಆಡುತ್ತಿದ್ದೇನೆ... ಸತ್ಯ ಬಹಿರಂಗಪಡಿಸಿದ ವಿರಾಟ್‌ ಕೊಹ್ಲಿ ಹೇಳಿದ್ದೇನು?

ಪಂದ್ಯಾವಳಿಯ ಅಂತಿಮ ಪಂದ್ಯವು ಫೆಬ್ರವರಿ 26ರಿಂದ ಮಾರ್ಚ್ 2ರ ನಡುವೆ ನಡೆಯಲಿದೆ. ಈ ವೇಳೆ ಟೀಂ ಇಂಡಿಯಾ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಲಿದೆ. ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಅಕ್ಟೋಬರ್ 16ರಿಂದ ನಡೆಯಲಿದೆ. ಅದೇ ರೀತಿ ಆಸ್ಟ್ರೇಲಿಯಾ ಪ್ರವಾಸವು ನವೆಂಬರ್ 22ರಿಂದ ಪ್ರಾರಂಭವಾಗಲಿದೆ. ಆದಾಗ್ಯೂ ಈ ಎರಡು ಸರಣಿಗಳ ನಡುವೆ T20I ಸರಣಿಯೂ ನಡೆಯಲಿದ್ದು, ಆದ್ದರಿಂದ ಕೊಹ್ಲಿ ರಣಜಿ ಟ್ರೋಫಿಯಲ್ಲಿ ಆಡುವ ಅವಕಾಶವನ್ನು ಹೊಂದಿರುತ್ತಾರೆ. 

ರಣಜಿ ಟ್ರೋಫಿ 2024-25ಕ್ಕೆ ದೆಹಲಿಯ 84 ಮಂದಿ ಸಂಭಾವ್ಯ ಪಟ್ಟಿ

ವಿರಾಟ್ ಕೊಹ್ಲಿ, ರಿಷಭ್ ಪಂತ್, ಹಿಮ್ಮತ್ ಸಿಂಗ್, ಪ್ರಾಂಶು ವಿಜಯನ್, ಅನಿರುದ್ಧ್ ಚೌಧರಿ, ಕ್ಷಿತಿಜ್ ಶರ್ಮಾ, ವೈಭವ್ ಕಂಡ್ಪಾಲ್, ಸಿದ್ಧಾಂತ್ ಬನ್ಸಾಲ್, ಸಮರ್ಥ್ ಸೇಠ್, ಜಾಂಟಿ ಸಿಧು, ಸಿದ್ಧಾಂತ್ ಶರ್ಮಾ, ಟಿಶಾಂತ್ ಶರ್ಮಾ ಸೈನಿ, ಹರ್ಷ್ ತ್ಯಾಗಿ, ಲಕ್ಷ್ಯ ತರೇಜಾ (WK), ಸುಮಿತ್ ಮಾಥುರ್, ಶಿವಾಂಕ್ ವಶಿಷ್ಠ, ಸಲಿಲ್ ಮಲ್ಹೋತ್ರಾ, ಆಯುಷ್ ಬಡೋನಿ, ಗಗನ್ ವಾಟ್ಸ್, ರಾಹುಲ್ ಎಸ್.ಡಾಗರ್, ಹೃತಿಕ್ ಶೌಕೀನ್, ಮಯಾಂಕ್ ರಾವತ್, ಅನುಜ್ ರಾವತ್(wk), ಸಿಮರ್ಜೀತ್ ಸಿಂಗ್, ಶಿವಂ ಕುಮಾರ್ ತ್ರಿಪಾಠಿ, ಕುಲ್ದೀಪ್ ತ್ರಿಪಾಠಿ ಯಾದವ್, ಲಲಿತ್ ಯಾದವ್, ಪ್ರಿನ್ಸ್ ಚೌಧರಿ, ಶಿವಂ ಕಿಶೋರ್ ಕುಮಾರ್, ಶಿವಂ ಗುಪ್ತಾ(wk), ವೈಭವ್ ಶರ್ಮಾ, ಜಿತೇಶ್ ಸಿಂಗ್, ರೋಹಿತ್ ಯಾದವ್, ಸುಮಿತ್ ಕುಮಾರ್, ಅನ್ಮೋಲ್ ಶರ್ಮಾ, ಕೇಶವ್ ದಾಬಾ, ಸನತ್ ಸಾಂಗ್ವಾನ್, ಶುಭಂ ಶರ್ಮಾ(wk), ಆರ್ಯನ್ ಚೌಧರಿ, ಆರ್ಯನ್ ರಾಣಾ , ಭಗವಾನ್ ಸಿಂಗ್, ಪ್ರಣವ್ ರಾಜವಂಶಿ(wk), ಸೌರವ್ ದಾಗರ್, ಮಣಿ ಗ್ರೆವಾಲ್, ಕುನ್ವರ್ ಬಿಧುರಿ, ನಿಖಿಲ್ ಸಂಗ್ವಾನ್, ಪುನೀತ್ ಚಹಾಲ್, ಪ್ರಿಯಾಂಶ್ ಆರ್ಯ, ಯಶ್ ಧುಲ್, ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ, ಮಯಾಂಕ್ ಯಾದವ್, ಸುಯ್ಯಶ್ ಶರ್ಮಾ, ಅರ್ಪಿತ್ ರಾಣಾ, ದಿವಿಲ್ ಮೆಹ್ರಾ, ದಿವಿಜ್ ಮೆಹ್ರಾ ಸಿಂಗ್, ಹಾರ್ದಿಕ್ ಶರ್ಮಾ, ಹಿಮಾಂಶು ಚೌಹಾಣ್, ಆಯುಷ್ ದೋಸೇಜಾ, ಅಂಕಿತ್ ರಾಜೇಶ್ ಕುಮಾರ್, ಧ್ರುವ ಕೌಶಿಕ್, ಅಂಕುರ್ ಕೌಶಿಕ್, ಕ್ರಿಶ್ ಯಾದವ್, ವಂಶ್ ಬೇಡಿ, ಯಶ್ ಸೆಹ್ರಾವತ್, ವಿಕಾಸ್ ಸೋಲಂಕಿ, ರಾಜೇಶ್ ಶರ್ಮಾ, ತೇಜಸ್ವಿ ದಹಿಯಾ (wk), ರೌನಕ್ ಸಿಂಗ್ ವಘೇಲಾ, ಮನ್‌ಪ್ರೇತ್ ಸಿಂಗ್ ವಘೇಲಾ, , ಆರ್ಯನ್ ಸೆಹ್ರಾವತ್, ಶಿವಂ ಶರ್ಮಾ, ಸಿದ್ಧಾರ್ಥ್ ಶರ್ಮಾ, ಪರ್ವ್ ಸಿಂಗ್ಲಾ, ಯೋಗೇಶ್ ಸಿಂಗ್, ದೀಪೇಶ್ ಬಲ್ಯಾನ್, ಸಾಗರ್ ತನ್ವರ್, ರಿಷಭ್ ರಾಣಾ, ಅಖಿಲ್ ಚೌಧರಿ, ದಿಗ್ವೇಶ್ ರಾಠಿ, ಸಾರ್ಥಕ್ ರಂಜನ್, ಅಜಯ್ ಗುಲಿಯಾ.

ಇದನ್ನೂ ಓದಿ: W,W,W,W,W,W,W... ಒಂದೇ ಪಂದ್ಯದಲ್ಲಿ 10ಕ್ಕೆ 10 ವಿಕೆಟ್‌!‌ ಯುವ ಸ್ಪಿನ್ನರ್‌ ಆಟಕ್ಕೆ ಮನಸೋತ ಕ್ರಿಕೆಟ್‌ ಲೋಕ... ಟೀಂ ಇಂಡಿಯಾಗೆ ಸಿಕ್ಕಾಯ್ತು ಭವಿಷ್ಯದ ಅನಿಲ್‌ ಕುಂಬ್ಳೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News