ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ಇವರ ಆಟದ ವೈಖರಿಗೆ ಜನರು ಫಿದಾ ಆಗಿದ್ದಾರೆ. ಇತ್ತೀಚೆಗೆ ಕೊನೆಗೊಂಡ ಆಸ್ಟ್ರೇಲಿಯಾ ವಿರುದ್ಧದ ಮೂರು ದಿನಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಭಾರತ 2-1 ಅಂತರದಿಂದ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲದೆ, ಕೊನೆಯ ಪಂದ್ಯದಲ್ಲಿ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಅವರ ಆಟ ಪಂದ್ಯದ ವೈಖರಿಯನ್ನೇ ಬದಲಾಯಿಸಿದೆ.
ಇದನ್ನೂ ಓದಿ: IND vs SA: ಟೀಂ ಇಂಡಿಯಾಗೆ ಭಾರೀ ಆಘಾತ: ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಬಿದ್ದ ಆಲ್ ರೌಂಡರ್!
ಈ ಪಂದ್ಯದ ಕೊನೆಯಲ್ಲಿ ಎನರ್ಜಿ ಪ್ಲೇಯರ್ ಆಫ್ ದಿ ಸಿರೀಸ್ ಅಂತ ಪ್ರಶಸ್ತಿಯನ್ನು ನೀಡಲಾಗಿತ್ತು. ಅದು ವಿರಾಟ್ ಕೊಹ್ಲಿ ತೆಕ್ಕೆಗೆ ಬಂದಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಸಂದರ್ಭದಲ್ಲಿ ಕೊಹ್ಲಿಯ ನಡವಳಿಕೆ ಎಂತವರನ್ನೂ ನಗಿಸದೆ ಇರದು.
ಹೌದು ಪ್ರಶಸ್ತಿ ಪಡೆದ ಬಳಿಕ ಅಲ್ಲಿಂದ ಪುಟ್ಟ ಮಕ್ಕಳಂತೆ ಓಡಿ ಬಂದ ಕೊಹ್ಲಿ ಒಂದು ಬಾರಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ತನ್ನ ಸಹ ಆಟಗಾರನಾಗಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಕಡೆಗೆ ನೋಡಿ ಕಣ್ಸನ್ನೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
🤣🤣❤️ pic.twitter.com/Ojb4enBYLb
— + (@Sobuujj) September 26, 2022
ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಕೊನೆಯ T20I ನಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ 48 ಎಸೆತಗಳಲ್ಲಿ 63 ರನ್ ಬಾರಿಸಿದ್ದರು.
ಇದಕ್ಕೂ ಮೊದಲು, ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನ ಡ್ರೆಸ್ಸಿಂಗ್ ರೂಮ್‌ನ ಬಳಿಯಿರುವ ಮೆಟ್ಟಿಲ ಮೇಲೆ ಕುಳಿತಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾ ಗೆದ್ದಾಗ ಮಾಡಿದ ವಿಜಯೋತ್ಸವ ಸಖತ್ ವೈರಲ್ ಆಗಿದೆ. ಇದರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು.
ಇದನ್ನೂ ಓದಿ: ಅಯ್ಯಯ್ಯೋ…ಇಂಗ್ಲೆಂಡ್ ನಲ್ಲಿ ಕಳ್ಳತನವಾಯ್ತು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಬ್ಯಾಗ್, ನಗದು!
ಏಷ್ಯಾಕಪ್ ನಲ್ಲಿ ಅನುಭವಿಸಿದ್ದ ಹಿನ್ನಡೆಯನ್ನು ಟೀಂ ಇಂಡಿಯಾ ಇದೀಗ ಫಾರ್ಮ್ ಗೆ ಮರಳುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಟೀಮ್ ಇಂಡಿಯಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಹಾಲಿ ವಿಶ್ವ ಚಾಂಪಿಯನ್ ವಿರುದ್ಧದ ಸರಣಿ ಗೆದ್ದು, ಉತ್ತಮ ಪುನರಾಗಮನವನ್ನು ಮಾಡಿದೆ. ಮೂರು ಪಂದ್ಯಗಳ ಸರಣಿಯನ್ನು ಭಾರತ 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತ 2013ರ ನಂತರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಸರಣಿ ಗೆಲುವನ್ನು ತನ್ನದಾಗಿಸಿಕೊಂಡಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.