Viral Video: ಗೆಲುವಿನ ರೂವಾರಿ ಆರ್.ಅಶ್ವಿನ್‌ಗೆ ʼTake a Bowʼ ಎಂದ ವಿರಾಟ್‌ ಕೊಹ್ಲಿ!

IND vs BAN: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 280 ರನ್‌ಗಳಿಂದ ಗೆದ್ದಿದೆ. ಟೀಂ ಇಂಡಿಯಾ ಗೆಲುವಿನಲ್ಲಿ ಆರ್.ಅಶ್ವಿನ್ ಪಾತ್ರ ಪ್ರಮುಖವಾಗಿತ್ತು. ಈ ಪಂದ್ಯದಲ್ಲಿ ಶತಕ ಸಿಡಿಸಿದ್ದಲ್ಲದೆ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮಿಂಚಿದರು. 

Written by - Puttaraj K Alur | Last Updated : Sep 23, 2024, 11:02 AM IST
  • ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು
  • ಗೆಲುವಿನ ರೂವಾರಿ ಆರ್.ಅಶ್ವಿನ್‌ಗೆ ವಿಶೇಷ ಗೌರವ ಸಲ್ಲಿಸಿದ ವಿರಾಟ್‌ ಕೊಹ್ಲಿ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ಕೊಹ್ಲಿ ವಿಡಿಯೋ
Viral Video: ಗೆಲುವಿನ ರೂವಾರಿ ಆರ್.ಅಶ್ವಿನ್‌ಗೆ ʼTake a Bowʼ ಎಂದ ವಿರಾಟ್‌ ಕೊಹ್ಲಿ! title=
ಅಶ್ವಿನ್‌ಗೆ ಕೊಹ್ಲಿ ಗೌರವ!

IND vs BAN: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ತಂಡ 280 ರನ್‌ಗಳ ಜಯ ಸಾಧಿಸಿತ್ತು. ಟೀಂ ಇಂಡಿಯಾ ಗೆಲುವಿನಲ್ಲಿ ಸ್ಟಾರ್ ಆಟಗಾರ ಆರ್.ಅಶ್ವಿನ್ ಪಾತ್ರ ಪ್ರಮುಖವಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅದ್ಭುತ ಶತಕ ಬಾರಿಸಿದ್ದರು. ಬಳಿಕ ಅವರು 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಮಿಂಚಿದರು. 5 ವಿಕೆಟ್ ಪಡೆದ ನಂತರ ಅವರು ಮೈದಾನದಲ್ಲಿ ಖುಷಿಯಲ್ಲಿ ತೇಲಾಡುತ್ತಿದ್ದರು. ಇದು ಅವರ ವೃತ್ತಿಜೀವನದ 37ನೇ 5 ವಿಕೆಟ್ ಗೊಂಚಲಾಗಿದ್ದು, ಆಸ್ಟ್ರೇಲಿಯಾದ ದಂತಕಥೆ ಸ್ಪಿನ್ನರ್ ಶೇನ್ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 5 ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಅಶ್ವಿನ್ ಇದೀಗ 2ನೇ ಸ್ಥಾನದಲ್ಲಿದ್ದಾರೆ.

ಅಶ್ವಿನ್‌ಗೆ ವಿಶೇಷ ಗೌರವ ಸಲ್ಲಿಸಿದ ಕೊಹ್ಲಿ 

ಬಾಂಗ್ಲಾದೇಶದ ವಿರುದ್ಧ ಅಶ್ವಿನ್ ಈ ವಿಶೇಷ 5 ವಿಕೆಟ್ ಸಾಧನೆಯನ್ನು ಮಾಡಿದರು. ಮೆಹದಿ ಹಸನ್ ಮೀರಜ್ ಅವರನ್ನು ಔಟ್‌ ಮಾಡಿ ಸಂಭ್ರಮಿಸುತ್ತಿರುವಾಗ ಅಶ್ವಿನ್ ಅವರಿಗೆ ಕೊಹ್ಲಿ ವಿಶೇಷವಾಗಿ ಗೌರವ ಸಲ್ಲಿಸಿದರು. ತಲೆ ಬಾಗುವ ಮೂಲಕ ಕೊಹ್ಲಿ ʼTake a Bowʼ ಎಂದು ಅಶ್ವಿನ್‌ಗೆ ನಮಿಸಿದರು. ಕೊಹ್ಲಿಯವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೊಹ್ಲಿ ಅವರು ಗೆಲುವಿನ ರೂವಾರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಆಯ್ಕೆಗಾರರು ಕಾನ್ಪುರದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನು ಸಹ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಇದನ್ನೂ ಓದಿ: 2ನೇ ಟೆಸ್ಟ್‌ಗೆ ತಂಡ ಪ್ರಕಟಿಸಿ ಈ ಮೂರು ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ.. ನಿವೃತ್ತಿ ಖಚಿತ?!

ಮೊದಲ ಟೆಸ್ಟ್ ಪಂದ್ಯವನ್ನು 4ನೇ ದಿನದಾಟದಲ್ಲಿ ಭಾರತ ತಂಡವು ಗೆಲುವು ಸಾಧಿಸಿತು. ಈ ಅವಧಿಯಲ್ಲಿ ಅಶ್ವಿನ್ 113 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಏತನ್ಮಧ್ಯೆ 2ನೇ ಟೆಸ್ಟ್ ಪಂದ್ಯದ ಸಮಯದಲ್ಲಿ ಆಟಗಾರರ ಕೆಲಸದ ಹೊರೆ ನಿರ್ವಹಣೆಯ ದೃಷ್ಟಿಯಿಂದ, ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬಹುದು ಎಂಬ ಸುದ್ದಿಯೂ ಬಂದಿದೆ. ಇದರಲ್ಲಿ ಮೊದಲ ಹೆಸರು ಜಸ್ಪ್ರೀತ್ ಬುಮ್ರಾ. 2ನೇ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ಸೆಪ್ಟೆಂಬರ್ 27ರಿಂದ ನಡೆಯಲಿದೆ. ಈ ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾ ಈಗಾಗಲೇ ಪ್ಲ್ಯಾನ್‌ ಮಾಡಿದೆ. ಇದರಿಂದ ಈ ಸರಣಿಯಲ್ಲಿ ಬಾಂಗ್ಲಾದೇಶವನ್ನು ಕ್ಲೀನ್ ಸ್ವೀಪ್ ಮಾಡಬಹುದಾಗಿದೆ.

ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ , ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್. 

ಇದನ್ನೂ ಓದಿ: ಹೊರಬಿತ್ತು CSK ರಿಟೈನ್‌ ಲಿಸ್ಟ್‌: ಧೋನಿಗೋಸ್ಕರ ತಂಡದ ಪ್ರಮುಖ ಆಟಗಾರನನ್ನೇ ಹೊರಗಿಟ್ಟ ಫ್ರಾಂಚೈಸಿ! ಆತ ಬೇರಾರು ಅಲ್ಲ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News