Rishabh Pant Century: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಸುದೀರ್ಘ ಸಮಯದ ನಂತರ ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದಾರೆ. ಭಾರತೀಯ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಸಿಕ್ಕಿದೆ, ಏಕೆಂದರೆ ತಂಡದ ಅತಿದೊಡ್ಡ ಮ್ಯಾಚ್ ವಿನ್ನರ್ ಪಂತ್ ತಮ್ಮ ಹಳೆಯ ಉಗ್ರ ಸ್ವರೂಪ ತೋರಿಸಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನ ಬಾಂಗ್ಲಾದೇಶದ ಬೌಲರ್‌ಗಳನ್ನು ನಾಶಪಡಿಸುವ ಭರದಲ್ಲಿ ಪಂತ್ ತಮ್ಮ ಬ್ಯಾಟ್‌ನಿಂದ ಅಕ್ಷರಶಃ ಬೆಂಕಿ ಉಗುಳಿದ್ದಾರೆ.
ರಿಷಬ್ ಪಂತ್ ಬಿರುಸಿನ ಶತಕ!
HUNDRED FOR RISHABH PANT ON HIS COMEBACK...!!!!! 🌟
He made his return in Test Cricket after 21 months and he smashed a marvelous hundred from just 124 balls against Bangladesh in first Test Match - What an Incredible Return by Pant. 🫡 pic.twitter.com/W9x9RFB19R
— Tanuj Singh (@ImTanujSingh) September 21, 2024
ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನವಾದ ಶನಿವಾರ ಟೀಂ ಇಂಡಿಯಾದ ಬಲಿಷ್ಠ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. 26 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ 128 ಎಸೆತಗಳಲ್ಲಿ 109 ರನ್ ಗಳಿಸಿದರು. ಈ ಅವಧಿಯಲ್ಲಿ, ಪಂತ್ 85.16 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಈ ಶತಕದಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್‌ಗಳಿದ್ದವು.
ಇದನ್ನೂ ಓದಿ: ಧೋನಿ ಶಿಷ್ಯನ ಡೈನಾಮೈಟ್ ಇನ್ನಿಂಗ್ಸ್! 22 ವರ್ಷದ ಯುವಕನ ಬ್ಯಾಟಿಂಗ್‌ಗೆ ಕೊಹ್ಲಿ ದಾಖಲೆ ಉಡೀಸ್!
ಚೆನ್ನೈನಲ್ಲಿ ರನ್‌ಗಳ ಪಟಾಕಿ!
Most Test hundreds by an Indian Wicketkeeper:
Rishabh Pant - 6* (58 innings).
MS Dhoni - 6 (144 innings). pic.twitter.com/x7EVmtIjyY
— Mufaddal Vohra (@mufaddal_vohra) September 21, 2024
ಚೆನ್ನೈ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ರಿಷಬ್ ಪಂತ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಪಂತ್ ತಮ್ಮ ಟೆಸ್ಟ್ ವೃತ್ತಿಜೀವನದ 6ನೇ ಶತಕವನ್ನು ಗಳಿಸಿದರು. ಪಂತ್ 124 ಎಸೆತಗಳಲ್ಲಿ ಶತಕ ಪೂರೈಸಿದರು. ಪಂತ್ ಅಬ್ಬರದ ಬ್ಯಾಟಿಂಗ್‌ಗೆ ಬಾಂಗ್ಲಾ ಬೌಲರ್‌ಗಳಿಗೆ ಬೇವರಿಳಿಸಿದರು.
ಧೋನಿ ದಾಖಲೆ ಸರಿಗಟ್ಟಿದ ರಿಷಬ್ ಪಂತ್!
159* at Sydney
146 at Edgbaston
114 at Oval
109 at Chepauk
101 at Ahmedabad
100* at Newlands
89* at Gabba
93 at Mirpur
97 at Sydney
96 at Chinaswamy
92 at Rajkot
92 at Hyderabad
91 at ChepaukTHIS IS RISHABH PANT - A Great in Tests. 🫡 pic.twitter.com/5LydsD80F7
— Johns. (@CricCrazyJohns) September 21, 2024
ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎಂ.ಎಸ್.ಧೋನಿಯವರ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಆಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಪಂತ್ ಈಗ ಧೋನಿಗೆ ಸರಿಸಮಾನವಾಗಿದ್ದಾರೆ. ಧೋನಿ 144 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 6 ಶತಕ ಸಿಡಿಸಿದ್ದಾರೆ. ಅದೇ ರೀತಿ ಪಂತ್ 58 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 6 ಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.
ಭಾರತ ಪರ ಅತಿಹೆಚ್ಚು ಟೆಸ್ಟ್ ಶತಕ ಗಳಿಸಿದ ವಿಕೆಟ್ ಕೀಪರ್
1. ರಿಷಬ್ ಪಂತ್ (58 ಇನ್ನಿಂಗ್ಸ್) - 6 ಶತಕ
2. ಮಹೇಂದ್ರ ಸಿಂಗ್ ಧೋನಿ (144 ಇನ್ನಿಂಗ್ಸ್) - 6 ಶತಕಗಳು
3. ವೃದ್ಧಿಮಾನ್ ಸಹಾ (54 ಇನ್ನಿಂಗ್ಸ್) - 3 ಶತಕಗಳು
2022ರ ಡಿಸೆಂಬರ್‌ನಲ್ಲಿ ಅಪಘಾತ!
ರಿಷಬ್ ಪಂತ್ ಡಿಸೆಂಬರ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ನಂತರ ಡಿಸೆಂಬರ್ 2022ರ ಕೊನೆಯಲ್ಲಿ ಪಂತ್ ಭೀಕರ ಕಾರು ಅಪಘಾತಕ್ಕೀಡಾಗಿದ್ದರು. ಅಪಘಾತದ ನಂತರ ಪಂತ್ ಜೂನ್ 2024ರಲ್ಲಿ T20 ವಿಶ್ವಕಪ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರು. ನಂತರ ಪಂತ್ ಇತ್ತೀಚಿನ ಶ್ರೀಲಂಕಾ ಪ್ರವಾಸದ ವೇಳೆ ಏಕದಿನ ತಂಡವನ್ನು ಪ್ರವೇಶಿಸಿದ್ದರು. ಇದೀಗ 634 ದಿನಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿರುವ ಪಂತ್, ಬಾಂಗ್ಲಾದೇಶದ ವಿರುದ್ಧ ಅಮೋಘ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ್ದಾರೆ. ಪಂತ್ ಇದುವರೆಗೆ ಭಾರತ ಪರ 34 ಟೆಸ್ಟ್ ಪಂದ್ಯಗಳಲ್ಲಿ 2,419 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ರಿಷಬ್ ಪಂತ್ 6 ಶತಕ ಹಾಗೂ 11 ಅರ್ಧ ಶತಕ ಸಿಡಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ರಿಷಬ್ ಪಂತ್ ಅವರ ಅತ್ಯುತ್ತಮ ಸ್ಕೋರ್ 159 ರನ್ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.