ಹೊಲದಲ್ಲಿ ರೈತನಂತೆ ನಾಟಿ ಮಾಡಿ ಬೆಳೆ ಕೊಯ್ಲು ತೆಗೆಯುವ ರೋಬೋಟ್..‌ ವಿಡಿಯೋ ನೋಡಿ ಅಚ್ಚರಿ ಪಡುವಿರಿ !

Agricultural robot viral video : ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್‌ ಆಗಿದ್ದು, ಇಲ್ಲೊಂದು ರೋಬೋಟ್ ರೈತನನ್ನೇ ಮೀರಿಸುತ್ತಿದೆ. 

Written by - Chetana Devarmani | Last Updated : Sep 22, 2024, 01:11 PM IST
    • ಹೊಲದಲ್ಲಿ ರೈತನಂತೆ ನಾಟಿ ಮಾಡುವ ರೋಬೋಟ್‌
    • ಬೆಳೆ ಕೊಯ್ಲು ತೆಗೆಯುವ ರೋಬೋಟ್ ವಿಡಿಯೋ ವೈರಲ್‌
    • ಈ ರೋಬೋಟ್‌ ರೈತನ ಕೆಲಸಕ್ಕೆ ನೆಟ್ಟಿಗರು ಫಿದಾ
ಹೊಲದಲ್ಲಿ ರೈತನಂತೆ ನಾಟಿ ಮಾಡಿ ಬೆಳೆ ಕೊಯ್ಲು ತೆಗೆಯುವ ರೋಬೋಟ್..‌ ವಿಡಿಯೋ ನೋಡಿ ಅಚ್ಚರಿ ಪಡುವಿರಿ !  title=

Trending Video:  ತಂತ್ರಜ್ಞಾನ ಮುಂದುವರೆದಂತೆ ಹೊಸ ಹೊಸ ಆವಿಷ್ಕಾರಗಳು ಹುಟ್ಟಿಕೊಳ್ಳುತ್ತದೆ. ಮೊದಲಲ್ಲೇ ಚಿಕ್ಕ ಪುಟ್ಟ ಕೆಲಸಗಳಲ್ಲಿ ಮಾನವನಿಗೆ ಸಹಾಯ ಮಾಡುತ್ತಿದ್ದ ರೋಬೋಟ್ ಗಳು, ಈಗ ಮಾನವನನ್ನೇ ಮೀರಿಸುವಂತೆ ಕೆಲಸ ಮಾಡುತ್ತಿವೆ. ಅನೇಕ ಕೆಲಸಗಳಲ್ಲಿ ಮಾನವರನ್ನು ರೋಬೋಟ್ ರಿಪ್ಲೇಸ್‌ ಮಾಡಿವೆ. 

ಹೊಲದಲ್ಲಿ ಕೆಲವು ಕೆಲಸಗಳನ್ನು ಸುಲಭವಾಗಿಸಲು ರೈತರು ರೋಬೋಟ್ ಗಳನ್ನು ಬಳಸುತ್ತಿದ್ದರು. ಆದರೆ ಇವೆಲ್ಲವೂ ಚಿಕ್ಕ ಪುಟ್ಟ ರೋಬೋಟ್ ಗಳು ಆಗಿದ್ದವು. ಹೊಲದ ಬಹುಪಾಲು ಕೆಲಸವನ್ನು ರೈತರು ಮಾಡುತ್ತಿದ್ದರು. ಇವರ ಕೆಲಸಕ್ಕೆ ನೆರವಾಗಲು ರೋಬೋಟ್ ಬಳಸಲಾಗುತ್ತಿತ್ತು.

ಇದನ್ನೂ ಓದಿ: Tiger Video: ಬೆಕ್ಕಿನೊಂದಿಗೆ ಆಡುವಂತೆ "ಹುಲಿ"ಯೊಂದಿಗೆ ಯುವಕನ ಆಟ, ಸ್ವಲ್ಪ ಯಾಮಾರಿದ್ರೆ...! ವಾಚ್ ವಿಡಿಯೋ

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್‌ ಆಗಿದ್ದು, ಇಲ್ಲೊಂದು ರೋಬೋಟ್ ರೈತನನ್ನೇ ಮೀರಿಸುತ್ತಿದೆ. ಈ ರೋಬೋಟ್‌ರೈತನಂತೆ ಹೊಲದಲ್ಲಿ ಎಲ್ಲ ಕೆಲಸಗಳನ್ನು ಮಾಡುತ್ತಿದೆ. ಬೆಳೆಯನ್ನು ನಾಟಿ ಮಾಡುವುದು, ಸಸಿಗಳಿಗೆ ನೀರುಣಿಸುವುದು, ಬೆಳೆ ಕೊಯ್ಲು ಮಾಡುವುದು, ರಾಶಿ ಮಾಡುವುದು ಹೀಗೆ ಒಬ್ಬ ರೈತ ಹೊಲದಲ್ಲಿ ಏನೆಲ್ಲ ಕೆಲಸ ಮಾಡಬಲ್ಲನೋ ಅದೆಲ್ಲವನ್ನೂ ಈ ರೋಬೋಟ್‌ ಮಾಡುತ್ತಿದೆ.

 

 

ಈ ವಿಡಿಯೋದಲ್ಲಿ ಕಂಡ ರೋಬೋಟ್‌ಅನ್ನು ಚೀನಾದ ಹಳ್ಳಿಯೊಂದರಲ್ಲಿ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಇದು AI ಜನರೇಟೆಡ್‌ ರೋಬೋಟ್‌ ಆಗಿದೆ. ಇದು ರೈತನಂತೆಯೇ ಜೀವನ ನಡೆಸುತ್ತಿದೆ.

ರೋಬೋಟ್‌ ರೈತನ ವಿಡಿಯೋ ವೈರಲ್‌ ಆಗಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಕೆಲವರು ಇದಕ್ಕೆ ಕಮೆಂಟ್‌ ಮಾಡುತ್ತಿದ್ದಾರೆ. ಇದು ವಿಜ್ಞಾನದ ಚಮತ್ಕಾರ ಎಂದು ಕೆಲವರು ಹೇಳಿದರೆ, ಮತ್ತೆ ಒಂದಷ್ಟು ಜನ ಇದು ಭವಿಷ್ಯದ ಆವಿಷ್ಕಾರ ಎನ್ನುತ್ತಿದ್ದಾರೆ. 

ಇದನ್ನೂ ಓದಿ: ಗಾಂಭೀರ್ಯವಾಗಿ ನಡು ರಸ್ತೆಯಲ್ಲಿ ಕಾಡಾನೆ ವಾಕ್, ಹಿಂದಿರುಗುವಾಗ ಆನೆ ನಡೆ ಕಂಡು ಹೌಹಾರಿದ ಜನ: ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News