IPL 2022: ಐಪಿಎಲ್‌ನಲ್ಲಿ ಈ ಬ್ಯಾಟ್ಸ್‌ಮನ್‌ನ ಒಂದು ಸಿಕ್ಸರ್‌ನ ಬೆಲೆ 5 ಲಕ್ಷ ರೂ.! ಕಾರಣ ಏನ್ ಗೊತ್ತಾ!

IPL 2022: ಐಪಿಎಲ್ 2022 ರ 5 ನೇ ಪಂದ್ಯವು ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಒಬ್ಬ ಬ್ಯಾಟ್ಸ್‌ಮನ್‌ನ ಒಂದು ಸಿಕ್ಸರ್‌ಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.

Written by - Yashaswini V | Last Updated : Mar 30, 2022, 07:44 AM IST
  • ಒನ್ ಸಿಕ್ಸ್ ಬೆಲೆ 5 ಲಕ್ಷ ರೂ.
  • ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಈ ಸಾಧನೆ ಮಾಡಿದ್ದಾರೆ
  • ರಾಜಸ್ಥಾನ 61 ರನ್‌ಗಳಿಂದ SRH ಅನ್ನು ಸೋಲಿಸಿತು
IPL 2022: ಐಪಿಎಲ್‌ನಲ್ಲಿ ಈ ಬ್ಯಾಟ್ಸ್‌ಮನ್‌ನ ಒಂದು ಸಿಕ್ಸರ್‌ನ ಬೆಲೆ 5 ಲಕ್ಷ ರೂ.! ಕಾರಣ ಏನ್ ಗೊತ್ತಾ! title=
IPL 2002: TATA Group 5 lakhs for one six

IPL 2022: ಐಪಿಎಲ್ 2022 ರ 5 ನೇ ಪಂದ್ಯವು ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಬಹಳ ರೋಚಕವಾಗಿತ್ತು. ಉಭಯ ತಂಡಗಳಿಗೆ ಇದು ಈ ಋತುವಿನ ಮೊದಲ ಪಂದ್ಯವಾಗಿದ್ದು, ಅಭಿಮಾನಿಗಳು ಸಾಕಷ್ಟು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ನೋಡಿದರು. ಈ ಇಡೀ ಪಂದ್ಯದಲ್ಲಿ 27 ಬೌಂಡರಿ ಹಾಗೂ 20 ಸಿಕ್ಸರ್‌ಗಳು ಸಿಡಿದಿದ್ದು, ಅದರಲ್ಲಿ ಒಂದು ಸಿಕ್ಸರ್‌ಗೆ 5 ಲಕ್ಷ ರೂಪಾಯಿ ಬಹುಮಾನವನ್ನೂ ನೀಡಲಾಗಿದೆ. ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಸಿಕ್ಸರ್ ಬಾರಿಸಿದರು. ಆದರೆ, ಬಹುಮಾನದ ಹಣವನ್ನು ಬೇರೆಯವರಿಗೆ ನೀಡಲಾಯಿತು. 

ಒನ್ ಸಿಕ್ಸ್ ಬೆಲೆ 5 ಲಕ್ಷ ರೂ.:
ಐಪಿಎಲ್ ಸೀಸನ್ 15 ರ ಅಧಿಕೃತ ಪ್ರಾಯೋಜಕರಾದ ಟಾಟಾ ಗ್ರೂಪ್ (TATA Group), ಋತುವಿನ ಆರಂಭಕ್ಕೂ ಮುನ್ನ ದೊಡ್ಡ ಘೋಷಣೆ ಮಾಡಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಟಾಟಾ ಪಂಚ್ ಬೋರ್ಡ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಹೊಡೆತ ಬಿದ್ದರೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ (Kaziranga National Park) 5 ಲಕ್ಷ ರೂಪಾಯಿ ನೀಡುವುದಾಗಿ ಟಾಟಾ ಗ್ರೂಪ್ ಹೇಳಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (Devdutt Padikkal) ಟಾಟಾ ಪಂಚ್ ಬೋರ್ಡ್‌ನಲ್ಲಿ ಸಿಕ್ಸರ್ ಬಾರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ನ ಇನ್ನಿಂಗ್ಸ್‌ನಲ್ಲಿ ಟಿ ನಟರಾಜನ್ 12 ನೇ ಓವರ್ ಆಡುತ್ತಿದ್ದಾಗ, ಪಡಿಕ್ಕಲ್ ಬ್ಯಾಟ್‌ನಲ್ಲಿದ್ದರು. ಓವರ್‌ನ ಮೊದಲ ಬಾಲ್‌ನ ಆವೇಗದ ಲಾಭವನ್ನು ಪಡೆದರು. ಪಡಿಕ್ಕಲ್ ಬ್ಯಾಕ್ ಫುಟ್‌ನಲ್ಲಿ ಹೋಗಿ ಪುಲ್ ಶಾಟ್ ಆಡಿದರು ಮತ್ತು ದೊಡ್ಡ ಸಿಕ್ಸರ್ ಬಾರಿಸಿದರು. ಈ ಶಾಟ್ ನೇರವಾಗಿ ಟಾಟಾ ಪಂಚ್ ಬೋರ್ಡ್ ಗೆ ಬಿದ್ದಿದೆ. ಈಗ ಟಾಟಾ ಗ್ರೂಪ್ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ 5 ಲಕ್ಷ ರೂಪಾಯಿಗಳನ್ನು ನೀಡಲಿದೆ. ಈ ಸಿಕ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

ಪಡಿಕ್ಕಲ್‌ನ ಈ ಶಾಟ್ ಅನ್ನು ಇಲ್ಲಿ ನೋಡಿ...

ಇದನ್ನೂ ಓದಿ- Hyderabad vs Rajasthan: ರಾಜಸ್ಥಾನ ರಾಯಲ್ಸ್ ತಂಡದ ಆಲ್ರೌಂಡ್ ಆಟಕ್ಕೆ ಮಂಕಾದ ಸನ್ ರೈಸರ್ಸ್

ಮೊದಲ ಪಂದ್ಯದಲ್ಲೇ ಬಿಗ್ ಇನ್ನಿಂಗ್ಸ್ :
ದೇವದತ್ ಪಡಿಕ್ಕಲ್ (Devdutt Padikkal) ಮೊದಲ ಬಾರಿಗೆ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಈ ಋತುವಿನ ಮೊದಲು ಪಡಿಕ್ಕಲ್ RCB ಯ ಭಾಗವಾಗಿತದ್ದರು.  ಈ ಪಂದ್ಯದಲ್ಲಿ ಪಡಿಕ್ಕಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು. ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಿ 29 ಎಸೆತಗಳಲ್ಲಿ 41 ರನ್ ಗಳಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳು ಬಂದವು. ಆದರೆ, ಅವರು ಅರ್ಧಶತಕದಿಂದ ವಂಚಿತರಾದರು. ಪಡಿಕ್ಕಲ್ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದರು, ಅದಕ್ಕೂ ಮೊದಲು ಪಡಿಕ್ಕಲ್ ಎಲ್ಲಾ ಪಂದ್ಯಗಳನ್ನು ಆರಂಭಿಕರಾಗಿ ಆಡಿದ್ದಾರೆ.

ಇದನ್ನೂ ಓದಿ- ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಫಿಟ್ನೆಸ್ ಕೋಚ್..!

ದೇವದತ್ ಪಡಿಕ್ಕಲ್ 2020 ರಲ್ಲಿ ಮೊದಲ ಬಾರಿಗೆ ಐಪಿಎಲ್‌ನ ಭಾಗವಾದರು. ಮೊದಲ ಋತುವಿನಲ್ಲಿ ವಿರಾಟ್ ತಂಡದಲ್ಲಿ ಆಡಿದ ಪಡಿಕ್ಕಲ್ ಈಗಾಗಲೇ ಎಲ್ಲರ ಮನ ಗೆದ್ದಿದ್ದರು, ಪಡಿಕ್ಕಲ್ ಈ ಋತುವಿನಲ್ಲಿ 15 ಪಂದ್ಯಗಳನ್ನು ಆಡಿದರು ಮತ್ತು 31.53 ಸರಾಸರಿಯಲ್ಲಿ 473 ರನ್ ಗಳಿಸಿದರು. IPL 2021 ರಲ್ಲಿ ಪಡಿಕ್ಕಲ್ ಸಹ RCB ಭಾಗವಾಗಿದ್ದರು ಆದರೆ ತಂಡವು ಮೆಗಾ ಹರಾಜಿನ ಮೊದಲು ಪಡಿಕ್ಕಲ್ ಅನ್ನು ಉಳಿಸಿಕೊಳ್ಳಲಿಲ್ಲ. ಪಡಿಕ್ಕಲ್ ಹರಾಜಿನಲ್ಲಿ ಬಂದರು ಮತ್ತು ರಾಜಸ್ಥಾನ್ ರಾಯಲ್ಸ್ ಈ ಆಟಗಾರನನ್ನು 7.75 ಕೋಟಿ ರೂಪಾಯಿ ಪಾವತಿಸಿ ತಮ್ಮ ತಂಡಕ್ಕೆ ಸೇರಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News