6,6,6,6,6,6,6... 18 ಸಿಕ್ಸರ್, 38 ಬೌಂಡರಿ! ಟಿ20 ಕ್ರಿಕೆಟ್‌ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಕಾವ್ಯಾ ಮಾರನ್‌ ನೆಚ್ಚಿನ ಕ್ರಿಕೆಟಿಗ! ಯಾರವರು?

Major League Cricket 2024: ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡ ಅಬ್ಬರಿಸಿತ್ತು. ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ 7 ವಿಕೆಟ್‌ʼಗಳ ಜಯ ಸಾಧಿಸಿತು. 

Written by - Bhavishya Shetty | Last Updated : Jul 27, 2024, 05:12 PM IST
    • ಮೇಜರ್ ಲೀಗ್ ಕ್ರಿಕೆಟ್ 2024 ರ ಫೈನಲ್‌
    • ಡಲ್ಲಾಸ್‌ʼನಲ್ಲಿ ನಡೆಯಲಿರುವ ಫೈನಲ್‌ ಫೈಟ್‌ʼನಲ್ಲಿ ಈ ತಂಡಗಳು ಸೆಣಸಾಡಲಿವೆ.
    • ರಚಿನ್ ರವೀಂದ್ರ ಮತ್ತು ಟ್ರಾವಿಸ್ ಹೆಡ್ ಅತ್ಯುತ್ತಮ ಪ್ರದರ್ಶನ
6,6,6,6,6,6,6... 18 ಸಿಕ್ಸರ್, 38 ಬೌಂಡರಿ! ಟಿ20 ಕ್ರಿಕೆಟ್‌ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಕಾವ್ಯಾ ಮಾರನ್‌ ನೆಚ್ಚಿನ ಕ್ರಿಕೆಟಿಗ!  ಯಾರವರು? title=
File Photo

Major League Cricket 2024:  ಮೇಜರ್ ಲೀಗ್ ಕ್ರಿಕೆಟ್ 2024 ರ ಫೈನಲ್‌ ಹಂತಕ್ಕೆ ವಾಷಿಂಗ್ಟನ್ ಫ್ರೀಡಂ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಗಳು ಎಂಟ್ರಿ ಪಡೆದಿವೆ. ಇನ್ನು ಸೋಮವಾರ ಡಲ್ಲಾಸ್‌ʼನಲ್ಲಿ ನಡೆಯಲಿರುವ ಫೈನಲ್‌ ಫೈಟ್‌ʼನಲ್ಲಿ ಈ ತಂಡಗಳು ಸೆಣಸಾಡಲಿವೆ. 

ಇದೇ ವೇಳೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡ ಅಬ್ಬರಿಸಿತ್ತು. ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ 7 ವಿಕೆಟ್‌ʼಗಳ ಜಯ ಸಾಧಿಸಿತು. ಆ ತಂಡದ ಆಟಗಾರರಾದ ರಚಿನ್ ರವೀಂದ್ರ ಮತ್ತು ಟ್ರಾವಿಸ್ ಹೆಡ್ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಹೆಚ್ಚು ಗಮನ ಸೆಳೆದಿದ್ದರು. 

ಇದನ್ನೂ ಓದಿ:  ಚೊಚ್ಚಲ ತಾಯ್ತನದ ಮಧ್ಯೆ ಮಹತ್ವದ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ..!

ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ತಂಡ 19 ಓವರ್ ಗಳಲ್ಲಿ 145 ರನ್ ಗಳಿಗೆ ಸೀಮಿತವಾಯಿತು. ಈ ಗುರಿಯನ್ನು ವಾಷಿಂಗ್ಟನ್ ಫ್ರೀಡಂ 15.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಸಾಧಿಸಿತು. ಈ ವೇಳೆ ಟ್ರಾವಿಸ್ ಹೆಡ್ 44 ಎಸೆತಗಳಲ್ಲಿ 77 ರನ್ ಗಳಿಸಿ ಅಜೇಯರಾಗುಳಿದರು. ಈ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ 10 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದು,  ಸ್ಟ್ರೈಕ್ ರೇಟ್‌ 175 ಆಗಿದೆ. 

ಮೇಜರ್ ಲೀಗ್ ಕ್ರಿಕೆಟ್‌ʼನ ಈ ಋತುವಿನಲ್ಲಿ ಟ್ರಾವಿಸ್ ಹೆಡ್ ಇಲ್ಲಿಯವರೆಗೆ ಅದ್ಭುತವಾಗಿ ಆಡಿದ್ದಾರೆ.  ಸತತ 5 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿದ್ದು, ಟಿ20 ಕ್ರಿಕೆಟ್‌ʼನಲ್ಲಿ ಸತತ 5 ಅರ್ಧಶತಕ ಬಾರಿಸಿದ 9ನೇ ಆಟಗಾರ ಎನಿಸಿಕೊಂಡಿದ್ದಾರೆ. ಟ್ರಾವಿಸ್ ಹೆಡ್ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಎರಡನೇ ಆಟಗಾರ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್‌ʼನಲ್ಲಿ ಸತತ 5 ಅರ್ಧಶತಕ ಗಳಿಸಿದ್ದರು. ಈ ಮಧ್ಯೆ, ರಿಯಾನ್ ಪರಾಗ್ ಸತತ 7 ಅರ್ಧಶತಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: 2 ವಿವಾಹವಾದ ನಟನೊಂದಿಗೆ ಸಂಬಂಧ, ಮದುವೆಯಾಗದೆ 2 ಮಕ್ಕಳ ತಾಯಿಯಾದ ಖ್ಯಾತ ನಟಿ! ಈಕೆಯ ಮಗಳು 100 ಕೋಟಿ ಸಂಭಾವನೆ ಪಡೆದ ಮೊದಲ ನಾಯಕನಟಿ!!

ಟ್ರಾವಿಸ್ ಹೆಡ್ ಐಪಿಎಲ್‌ʼನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. 2024 ರ ಸೀಸನ್‌ʼನಲ್ಲಿ ಪ್ರಬಲ ಪ್ರದರ್ಶನ ನೀಡಿದ್ದ ಅವರು, ತಂಡವನ್ನು ಫೈನಲ್‌ʼಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟ್ರಾವಿಸ್ ಹೆಡ್ ಈ ಬಾರಿಯ ಐಪಿಎಲ್ ಋತುವಿನಲ್ಲಿ 64 ಬೌಂಡರಿ ಹಾಗೂ 32 ಸಿಕ್ಸರ್ ಬಾರಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News