Tokyo Olympics: ಟೋಕಿಯೋ ಒಲಂಪಿಕ್ಸ್ ನಿಂದ ಹಿಂದಕ್ಕೆ ಸರಿದ ರೋಜರ್ ಫೆಡರರ್

ಮೊಣಕಾಲು ನೋವಿನಿಂದಾಗಿ ರೋಜರ್ ಫೆಡರರ್ ಅವರು ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.ಜುಲೈ 23 ರಂದು ಪ್ರಾರಂಭವಾಗಲಿರುವ ಟೋಕಿಯೋ ಒಲಂಪಿಕ್ಸ್ ನಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ರೋಜರ್ ಫೆಡರರ್ ಅವರು ಮಂಗಳವಾರ ಪ್ರಕಟಿಸಿದ್ದಾರೆ.

Written by - Zee Kannada News Desk | Last Updated : Jul 14, 2021, 04:24 PM IST
  • ಮೊಣಕಾಲು ನೋವಿನಿಂದಾಗಿ ರೋಜರ್ ಫೆಡರರ್ ಅವರು ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
  • ಜುಲೈ 23 ರಂದು ಪ್ರಾರಂಭವಾಗಲಿರುವ ಟೋಕಿಯೋ ಒಲಂಪಿಕ್ಸ್ ನಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ರೋಜರ್ ಫೆಡರರ್ ಅವರು ಮಂಗಳವಾರ ಪ್ರಕಟಿಸಿದ್ದಾರೆ.
Tokyo Olympics: ಟೋಕಿಯೋ ಒಲಂಪಿಕ್ಸ್ ನಿಂದ ಹಿಂದಕ್ಕೆ ಸರಿದ ರೋಜರ್ ಫೆಡರರ್ title=
ಸಂಗ್ರಹ ಚಿತ್ರ

ನವದೆಹಲಿ: ಮೊಣಕಾಲು ನೋವಿನಿಂದಾಗಿ ರೋಜರ್ ಫೆಡರರ್ ಅವರು ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.ಜುಲೈ 23 ರಂದು ಪ್ರಾರಂಭವಾಗಲಿರುವ ಟೋಕಿಯೋ ಒಲಂಪಿಕ್ಸ್ ನಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ರೋಜರ್ ಫೆಡರರ್ ಅವರು ಮಂಗಳವಾರ ಪ್ರಕಟಿಸಿದ್ದಾರೆ.

ಈ ಕುರಿತಾಗಿ ಹೇಳಿಕೆ ನೀಡಿರುವ ಫೆಡರರ್ (Roger Federer) 'ಹುಲ್ಲಿನ ಕೋರ್ಟ್ ನಲ್ಲಿ ದುರದೃಷ್ಟವಶಾತ್ ನನ್ನ ಮೊಣಕಾಲಿಗೆ ನೋವಾಗಿದೆ, ಮತ್ತು ನಾನು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಿಂದ ಹಿಂದೆ ಸರಿಯಬೇಕೆಂದು ನಿರ್ಧರಿಸಿದ್ದೇನೆ ಎಂದು ಫೆಡರರ್ ಬರೆದುಕೊಂಡಿದ್ದಾರೆ. "ನಾನು ತುಂಬಾ ನಿರಾಶೆಗೊಂಡಿದ್ದೇನೆ, ಏಕೆಂದರೆ ನಾನು ಪ್ರತಿ ಬಾರಿ ಸ್ವಿಟ್ಜರ್ಲೆಂಡ್ ಅನ್ನು ಪ್ರತಿನಿಧಿಸಿದಾಗ ಇದು ನನ್ನ ವೃತ್ತಿಜೀವನದ ಗೌರವ ಮತ್ತು ಪ್ರಮುಖ ಅಂಶವಾಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಫ್ರೆಂಚ್ ಓಪನ್ ನಿಂದ ಹಿಂದೆ ಸರಿದ ರೋಜರ್ ಫೆಡೆರರ್

'ಈ ಬೇಸಿಗೆಯ ನಂತರ ಪ್ರವಾಸಕ್ಕೆ ಮರಳುವ ಭರವಸೆಯಲ್ಲಿ ನಾನು ಈಗಾಗಲೇ ಪುನರ್ವಸತಿ ಪ್ರಾರಂಭಿಸಿದ್ದೇನೆ" ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. 20 ಬಾರಿಯ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ಆಗಿರುವ ಫೆಡರರ್ ಸ್ವಲ್ಪ ಸಮಯದವರೆಗೆ ಮೊಣಕಾಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಅವರು  2020 ರಲ್ಲಿ ಎರಡು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ವಿಂಬಲ್ಡನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಅವರು ಈ ವರ್ಷ ಪ್ರೆಂಚ್ ಓಪನ್ ಟೂರ್ನಿಯಿಂದ ಹೊರಬಂದರು.

ಇದನ್ನೂ ಓದಿ: ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ರೋಜರ್ ಫೆಡರರ್

ಫೆಡರರ್ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪುರುಷರ ಸಿಂಗಲ್ಸ್ ಪಂದ್ಯಾವಳಿಯನ್ನು ಗೆದ್ದಿದ್ದರೆ, 2008 ರ ಬೀಜಿಂಗ್ ಕ್ರೀಡಾಕೂಟದಲ್ಲಿ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.ಈಗ ಕ್ರೀಡಾಕೂಟವನ್ನು ತಪ್ಪಿಸಿಕೊಂಡಿರುವ ಫೆಡರರ್ ಈಗ ರಾಫೆಲ್ ನಡಾಲ್ ಜೊತೆ ಸೇರಿಕೊಂಡಿದ್ದು, ಟೋಕಿಯೊದಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಗಾಗಿ ನೊವಾಕ್ ಜೊಕೊವಿಕ್ ಅಚ್ಚುಮೆಚ್ಚಿನವರಾಗಿದ್ದಾರೆ.

ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗೆದ್ದ ನಂತರ, ಜೊಕೊವಿಕ್ ಗೋಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಹಾದಿಯಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News