Tokyo Olympics 2020: ಅಬ್ಬರದಿಂದ ಸೆಮಿಫೈನಲ್ ಪ್ರವೇಶಿಸಿದ PV Sindhu, ಪದಕದಿಂದ ಒಂದೇ ಗೆಲುವು ದೂರ

Tokyo Olympics 2020 - ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ (Star Badminton Player PV Sindhu) ಪಿವಿ ಸಿಂಧು (PV Sindhu) ಟೋಕಿಯೊ ಒಲಿಂಪಿಕ್ಸ್‌ನಲ್ಲಿ (Tokyo Olympics 2020) ತನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ (Quarter Final Match) ಜಬರ್ದಸ್ತ್ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ.

Written by - Nitin Tabib | Last Updated : Jul 30, 2021, 04:43 PM IST
  • ಟೋಕಿಯೋ ಒಲಿಂಪಿಕ್ಸ್ ನ ಮಹಿಳೆಯರ ಬಾಡ್ಮಿಂಟನ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಪಿವಿ ಸಿಂಧು.
  • ಜಪಾನ್ ನ ಅಕಾನೆ ಯಮಗುಚಿಯನ್ನು ಸೋಲಿಸುವ ಮೂಲಕ ಸೆಮಿಸ್ ಗೆ ಎಂಟ್ರಿ.
  • 21-13, 22-20 ನೇರ ಸೆಟ್ ಗಳಅಂತರದಲ್ಲಿ ಜಪಾನ್‌ನ ಅಕಾನೆ ಯಮಗುಚಿಯನ್ನು ಸೋಲಿಸಿದ ಸಿಂಧು.
Tokyo Olympics 2020: ಅಬ್ಬರದಿಂದ ಸೆಮಿಫೈನಲ್ ಪ್ರವೇಶಿಸಿದ PV Sindhu, ಪದಕದಿಂದ ಒಂದೇ ಗೆಲುವು ದೂರ title=
Tokyo Olympics 2020 (File Photo)

Tokyo Olympics 2020 - ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ (Star Badminton Player PV Sindhu) ಪಿವಿ ಸಿಂಧು (PV Sindhu) ಟೋಕಿಯೊ ಒಲಿಂಪಿಕ್ಸ್‌ನಲ್ಲಿ (Tokyo Olympics 2020) ತನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ (Quarter Final Match) ಜಬರ್ದಸ್ತ್ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಸಿಂಧು 21-13, 22-20 ಅಂತರದಲ್ಲಿ  ಜಪಾನ್‌ನ ಅಕಾನೆ ಯಮಗುಚಿ (Akane Yamaguchi) ವಿರುದ್ಧ ಗೆಲುವು ಸಾಧಿಸಿ ಒಲಿಂಪಿಕ್ಸ್ ನಲ್ಲಿ (Tokyo Olympics) ತನ್ನ ಅದ್ಭುತ ಪ್ರಯಾಣವನ್ನು ಮುಂದುವರೆಸಿದ್ದಾರೆ. 56 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು ತಮ್ಮ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ ಮತ್ತು ಯಮಗುಚಿಗೆ ತಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾವುದೇ ಅವಕಾಶವನ್ನು ಬಿಟ್ಟಿಲ್ಲ. ರಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು, ಆದರೆ ಅವರು ಚಿನ್ನ ಪಡೆಯುವುದರಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಕೋಟ್ಯಂತರ ಭಾರತೀಯ ಅಭಿಮಾನಿಗಳ ಕಣ್ಣು ಈ ಬಾರಿ ಮತ್ತೆ ಸಿಂಧುವಿನ ಮೇಲೆ ನೆಟ್ಟಿದೆ.

ಇದನ್ನೂ ಓದಿ-Tokyo Olympics 2020 Updates: ಗರಿಗೆದರಿದ ಮತ್ತೊಂದು ಪದಕದ ಆಸೆ, ಮೂರನೇ ಸುತ್ತಿಗೆ ದೀಪಿಕಾ ಕುಮಾರಿ ಪ್ರವೇಶ

ಇದಕ್ಕೂ ಮೊದಲು ಸಿಂಧು (PV Sindhu Enter Semifinals) ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಚ್ಫೆಲ್ಟ್ ಅವರನ್ನು 21-15 ಹಾಗೂ 21-13 ನೇರ ಸೆಟ್ ಗಳಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು.  ಮೊದಲ ಸೆಟ್‌ನ ಆರಂಭದಲ್ಲಿ ಸಿಂಧು ಅಕಾನೆ ಯಮಗುಚಿಯ ಎದುರು 5-6ರ ಹಿನ್ನಡೆಯಲ್ಲಿದ್ದರು, ಆದರೆ ನಂತರದ ಆಟದಲ್ಲಿ ಸೆಟ್‌ನ್ನು 21-13 ರಿಂದ ಗೆಲ್ಲುವ ಮೂಲಕ ಸಿಂಧು ಜಬರ್ದಸ್ತ್ ಕಂಬ್ಯಾಕ್ ಮಾಡಿದ್ದಾರೆ. ಎರಡನೇ ಸೆಟ್ ನಲ್ಲೂ ಈ ಇಬ್ಬರು ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂತು, ಆದರೆ ಪಂದ್ಯದ ಕೊನೆಯಲ್ಲಿ ಸಿಂಧು 2 ಅಂಕಗಳಿಂದ ಯಮಗುಚಿ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧು ಅವರ ಈ ವಿಜಯದೊಂದಿಗೆ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಪದಕ ಸಿಗುವ ಸಾಧ್ಯತೆಯೂ ಹೆಚ್ಚಾಗಿದೆ. ಇಂದು ಬೆಳಗ್ಗೆ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ತನ್ನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಸೆಮಿಫೈನಲ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿ ಭಾರತದ ಎರಡನೇ ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ.  ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್ ಪಂದ್ಯಾವಳಿಯ ಎರಡನೇ ದಿನವೇ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಕೆದ್ದುಕೊಂಡಿದ್ದಾರೆ. 

ಇದನ್ನೂ ಓದಿ-Tokyo Olympics 2020: ಮ್ಯಾಚ್ ಗೂ ಮುನ್ನ ಜುಡೋ ಅಥ್ಲೀಟ್ ಗೆ ಕೋಚ್ ನಿಂದ ಕಪಾಳಮೋಕ್ಷ, ಆಶ್ಚರ್ಯಕ್ಕೊಳಗಾದ ಪ್ರೇಕ್ಷಕರು

ಸೆಮಿಫೈನಲ್‌ನಲ್ಲಿ ಸಿಂಧು ಥೈಲ್ಯಾಂಡ್‌ನ ರತ್ಚನೋಕ್ ಇಂಟನಾನ್ ಮತ್ತು ಚೈನೀಸ್ ತೈಪೆಯ ತೈ ತ್ಸು ಯಿಂಗ್ ನಡುವಿನ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ವಿಶ್ವ ಚಾಂಪಿಯನ್ ಸಿಂಧು ವಿಶ್ವ ಐದನೇ ಕ್ರಮಾಂಕದ ಯಮಗುಚಿ ವಿರುದ್ಧ 11-7 ಗೆಲುವಿನ ದಾಖಲೆಯ ಲಾಭವನ್ನು ಪಡೆದುಕೊಂಡು ಆರಂಭಿಕ ಪಂದ್ಯವನ್ನು ಕೇವಲ 23 ನಿಮಿಷಗಳಲ್ಲಿ 21-13 ರಿಂದ ಗೆದ್ದುಕೊಂಡಿದ್ದಾರೆ. ಎರಡನೇ ಗೇಮ್‌ನಲ್ಲಿ ಯಮಗುಚಿ ಕಂ ಬ್ಯಾಕ್ ಮಾಡಲು ತುಂಬಾ ಪ್ರಯತ್ನಿಸಿದರೂ ಕೂಡ ಸಿಂಧು ಆಕೆಗೆ ಆ ಅವಕಾಶವೇ ನೀಡಲಿಲ್ಲ ಮತ್ತು ಕೇವಲ 33 ನಿಮಿಷಗಳಲ್ಲಿ ಗಲುವು ದಾಖಲಿಸುವ ಮೂಲಕ ಕೊನೆಯ ನಾಲ್ಕು ಆಟಗಾರರ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸುವಲ್ಲಿ ಸಿಂಧು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ-Viral Video: ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಸಿಕ್ಕಿತು ಚಿನ್ನದಂತಹ ಸ್ವಾಗತ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News