Tokyo 2020 Paralympics: 19 ಪದಕಗಳೊಂದಿಗೆ ಇತಿಹಾಸ ಬರೆದ ಭಾರತ

ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟ 2020 ರಲ್ಲಿ ಭಾರತೀಯ ತಂಡವು ತಮ್ಮ ಅಭಿಯಾನವನ್ನು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ 5 ಚಿನ್ನ,8 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಒಳಗೊಂಡಂತೆ 19 ಪದಕಗಳನ್ನು ಪಡೆದುಕೊಂಡಿದೆ.

Written by - Zee Kannada News Desk | Last Updated : Sep 5, 2021, 05:00 PM IST
  • ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟ 2020 ರಲ್ಲಿ ಭಾರತೀಯ ತಂಡವು ತಮ್ಮ ಅಭಿಯಾನವನ್ನು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ 5 ಚಿನ್ನ,8 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಒಳಗೊಂಡಂತೆ 19 ಪದಕಗಳನ್ನು ಪಡೆದುಕೊಂಡಿದೆ.
Tokyo 2020 Paralympics: 19 ಪದಕಗಳೊಂದಿಗೆ ಇತಿಹಾಸ ಬರೆದ ಭಾರತ title=
file photo

ನವದೆಹಲಿ: ಭಾರತೀಯ ತಂಡವು ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟ 2020 ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ 5 ಚಿನ್ನ,8 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಒಳಗೊಂಡಂತೆ 19 ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ.

ಕ್ರೀಡಾಕೂಟದಲ್ಲಿ ಭಾರತವು ತನ್ನ ಅತಿದೊಡ್ಡ ತಂಡವನ್ನು 54 ಪ್ಯಾರಾ-ಅಥ್ಲೀಟ್‌ಗಳನ್ನು 9 ಕ್ರೀಡಾ ವಿಭಾಗಗಳಲ್ಲಿ ಕಳುಹಿಸಿದೆ.ಟೋಕಿಯೊದಲ್ಲಿ ಬ್ಯಾಡ್ಮಿಂಟನ್ ಮತ್ತು ಟೇಕ್ವಾಂಡೊ ಪಾದಾರ್ಪಣೆ ಮಾಡಿದವು, ಇವೆರಡನ್ನೂ ಭಾರತ ಪ್ರತಿನಿಧಿಸುತ್ತದೆ.

ಇದನ್ನೂ ಓದಿ: Good News: ಮಕ್ಕಳಿಗಾಗಿ Nasal Spray Covid-19 Vaccine ಪರೀಕ್ಷೆ ಕೈಗೊಂಡ ರಷ್ಯಾ

1968 ರಲ್ಲಿ ಪ್ಯಾರಾಲಿಂಪಿಕ್ಸ್‌ (Tokyo 2020 Paralympics) ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಂತರ, ಭಾರತವು 2016 ರಿಯೋ ಆವೃತ್ತಿಯವರೆಗೆ ಒಟ್ಟು 12 ಪದಕಗಳನ್ನು ಗೆದ್ದಿತ್ತು. ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಮಾತ್ರ  7 ಪದಕಗಳಿಂದ ಸುಧಾರಿಸಿದೆ.ಒಟ್ಟು 162 ರಾಷ್ಟ್ರಗಳ ಪೈಕಿ, ಭಾರತವು ಒಟ್ಟಾರೆ ಪದಕ ಪಟ್ಟಿಯಲ್ಲಿ 24 ನೇ ಸ್ಥಾನವನ್ನು ಪಡೆದಿದೆ, ಆದರೆ 19 ಪದಕಗಳ ಸಾಧನೆಯು ಪದಕಗಳ ಸಂಖ್ಯೆಯನ್ನು ಆಧರಿಸಿ 20 ನೇ ಸ್ಥಾನದಲ್ಲಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ವಿಜೇತರು: ಮಹಿಳಾ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ರಲ್ಲಿ ಅವನಿ ಲೇಖರಾ, ಪುರುಷರ ಸಿಂಗಲ್ಸ್ ಎಸ್‌ಎಲ್ 3 ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್, ಪುರುಷರ ಸಿಂಗಲ್ಸ್‌ನಲ್ಲಿ ಕೃಷ್ಣ ನಗರ ಎಸ್‌ಎಚ್ 6 ಬ್ಯಾಡ್ಮಿಂಟನ್, ಪುರುಷರ ಜಾವೆಲಿನ್ ಥ್ರೋ ಎಫ್ 64 ರಲ್ಲಿ ಸುಮಿತ್ ಆಂಟಿಲ್ ಮತ್ತು ಮನೀಶ್ ನರ್ವಾಲ್ ಮಿಶ್ರ 50m ಪಿಸ್ತೂಲ್ SH1.ನಲ್ಲಿ ಪದಕವನ್ನು ಗೆದ್ದಿದ್ದಾರೆ.

ಇದನ್ನೂ ಓದಿ: Good News: ಮಕ್ಕಳಿಗಾಗಿ Nasal Spray Covid-19 Vaccine ಪರೀಕ್ಷೆ ಕೈಗೊಂಡ ರಷ್ಯಾ

ಬೆಳ್ಳಿ ಪದಕ ವಿಜೇತರು: ಮಹಿಳಾ ಸಿಂಗಲ್ಸ್ ಕ್ಲಾಸ್ 4 ಟೇಬಲ್ ಟೆನಿಸ್‌ನಲ್ಲಿ ಭಾವಿನಾಬೆನ್ ಪಟೇಲ್, ಮಿಶ್ರ 50 ಮೀ ಪಿಸ್ತೂಲ್ ಎಸ್‌ಎಚ್ 1 ರಲ್ಲಿ ಸಿಂಗರಾಜ್ ಅಧಾನ, ಪುರುಷರ ಡಿಸ್ಕಸ್ ಎಫ್ 56 ರಲ್ಲಿ ಯೋಗೀಶ್ ಕಠುನಿಯಾ, ಪುರುಷರ ಹೈ ಜಂಪ್ ಟಿ 47 ರಲ್ಲಿ ನಿಶಾದ್ ಕುಮಾರ್, ಪುರುಷರ ಹೈ ಜಂಪ್ ಟಿ 63 ರಲ್ಲಿ ಮರಿಯಪ್ಪನ್ ತಂಗವೇಲು ಜಂಪ್ ಟಿ 64, ಪುರುಷರ ಜಾವೆಲಿನ್ ಎಫ್ 46 ರಲ್ಲಿ ದೇವೇಂದ್ರ ಜಜಾರಿಯಾ, ಮತ್ತು ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್ ಎಲ್ 4 ನಲ್ಲಿ ಸುಹಾಸ್ ಯತಿರಾಜ್ ಪದಕವನ್ನು ಗೆದ್ದಿದ್ದಾರೆ.

ಕಂಚಿನ ಪದಕ ವಿಜೇತರು: ಮಹಿಳೆಯರ 50 ಮೀಟರ್ ರೈಫಲ್ ನಲ್ಲಿ ಅವನಿ ಲೇಖರ, ಪುರುಷರ ಬಿಲ್ಲುಗಾರಿಕೆಯಲ್ಲಿ ಹರ್ವಿಂದರ್ ಸಿಂಗ್, ಪುರುಷರ ಹೈ ಜಂಪ್ ಟಿ 63 ರಲ್ಲಿ ಶರದ್ ಕುಮಾರ್, ಪುರುಷರ ಜಾವೆಲಿನ್ ಥ್ರೋ ಎಫ್ 46 ರಲ್ಲಿ ಸುಂದರ್ ಸಿಂಗ್ ಗುರ್ಜಾರ್, ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್ಎಲ್ 3 ಮತ್ತು ಸಿಂಗರಾಜ್ ಅದ್ನಾ ಪುರುಷರ 10 ಮೀ ಏರ್ ಪಿಸ್ತೂಲ್ SH1 ನಲ್ಲಿ.ಪದಕವನ್ನು ಗಳಿಸಿದ್ದಾರೆ.

ಇದನ್ನೂ ಓದಿ: Corona Vaccine: ಲಸಿಕೆ ಹಾಕಿಸಿಕೊಂಡ ಬಳಿಕ ಮೂರು ದಿನಗಳ ಕಾಲ ಸಂಗಾತಿಯ ಜೊತೆಗೆ ಸಂಬಂಧ ಬೆಳೆಸಬೇಡಿ-ತಜ್ಞರು 

ಕೆಲವು ಭಾರತೀಯ ಪ್ಯಾರಾ-ಅಥ್ಲೀಟ್‌ಗಳು ಪದಕಗಳನ್ನು ಕಳೆದುಕೊಂಡರು: ಸ್ವರೂಪ್ ಉನ್ಹಲ್ಕರ್ (ಪ್ಯಾರಾ ಶೂಟಿಂಗ್, ಸಂದೀಪ್ ಚೌಧರಿ, ಸೋಮನ್ ರಾಣಾ, ನವದೀಪ್ (ಪ್ಯಾರಾ ಅಥ್ಲೆಟಿಕ್ಸ್) ಮತ್ತು ತರುಣ್ ಧಿಲ್ಲೋನ್ (ಪ್ಯಾರಾ ಬ್ಯಾಡ್ಮಿಂಟನ್) ತಮ್ಮ ಸ್ಪರ್ಧೆಗಳಲ್ಲಿ ನಾಲ್ಕನೇ ಸ್ಥಾನ ಪಡೆದರೆ, ಸಕಿನಾ ಖತುನ್ (ಪ್ಯಾರಾ ಪವರ್ ಲಿಫ್ಟಿಂಗ್), ರಾಮ್ ಪಾಲ್, ಅಮಿತ್ ಸರೋಹ (ಪ್ಯಾರಾ ಅಥ್ಲೆಟಿಕ್ಸ್) ಮತ್ತು ರಾಹುಲ್ ಜಖರ್ (ಪ್ಯಾರಾ ಶೂಟಿಂಗ್) ಐದನೇ ಸ್ಥಾನ ಪಡೆದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

 

 

 

 

 

 

 

Trending News