Tokyo 2020: ಓಲಂಪಿಕ್ಸ್ ಕ್ರೀಡಾಪಟುಗಳ ಗ್ರಾಮದಲ್ಲಿ ಮೊದಲ ಕೋವಿಡ್ -19 ಪ್ರಕರಣ ಪತ್ತೆ

ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳ ಗ್ರಾಮದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ ಎಂದು ಸಂಘಟಕರು ಶನಿವಾರ ತಿಳಿಸಿದ್ದಾರೆ.ಮುಂದಿನ ವಾರದಿಂದ ಪ್ರಾರಂಭವಾಗುವ ಕ್ರೀಡಾಕೂಟದಲ್ಲಿ ಈಗ ಕೊರೊನಾ ಪ್ರಕರಣ ಕಂಡು ಬಂದಿರುವುದು ಈಗ ಆತಂಕವನ್ನು ತರಿಸಿದೆ.

Written by - Zee Kannada News Desk | Last Updated : Jul 17, 2021, 05:54 PM IST
  • ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳ ಗ್ರಾಮದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ ಎಂದು ಸಂಘಟಕರು ಶನಿವಾರ ತಿಳಿಸಿದ್ದಾರೆ.
  • ಮುಂದಿನ ವಾರದಿಂದ ಪ್ರಾರಂಭವಾಗುವ ಕ್ರೀಡಾಕೂಟದಲ್ಲಿ ಈಗ ಕೊರೊನಾ ಪ್ರಕರಣ ಕಂಡು ಬಂದಿರುವುದು ಈಗ ಆತಂಕವನ್ನು ತರಿಸಿದೆ.
Tokyo 2020: ಓಲಂಪಿಕ್ಸ್ ಕ್ರೀಡಾಪಟುಗಳ ಗ್ರಾಮದಲ್ಲಿ ಮೊದಲ ಕೋವಿಡ್ -19 ಪ್ರಕರಣ ಪತ್ತೆ title=
Photo Courtesy: Reuters

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳ ಗ್ರಾಮದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ ಎಂದು ಸಂಘಟಕರು ಶನಿವಾರ ತಿಳಿಸಿದ್ದಾರೆ.ಮುಂದಿನ ವಾರದಿಂದ ಪ್ರಾರಂಭವಾಗುವ ಕ್ರೀಡಾಕೂಟದಲ್ಲಿ ಈಗ ಕೊರೊನಾ ಪ್ರಕರಣ ಕಂಡು ಬಂದಿರುವುದು ಈಗ ಆತಂಕವನ್ನು ತರಿಸಿದೆ.

ಇದನ್ನೂ ಓದಿ: ಫ್ರೆಂಚ್ ಓಪನ್ ನಿಂದ ಹಿಂದೆ ಸರಿದ ರೋಜರ್ ಫೆಡೆರರ್

'ಆ ವ್ಯಕ್ತಿ ಈ ಗ್ರಾಮದಲ್ಲಿ ಅವರು ಉಳಿದುಕೊಂಡಿದ್ದರು.ಸ್ಕ್ರೀನಿಂಗ್ ಪರೀಕ್ಷೆಯ ಸಮಯದಲ್ಲಿ ವರದಿಯಾದ ಮೊದಲ ಪ್ರಕರಣವಾಗಿದೆ"ಎಂದು ಟೋಕಿಯೊ ಸಂಘಟನಾ ಸಮಿತಿಯ ವಕ್ತಾರ ಮಾಸಾ ಟಕಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಆದಾಗ್ಯೂ, ಗೌಪ್ಯತೆ ಕಾಳಜಿಯನ್ನು ಉಲ್ಲೇಖಿಸಿ ಟಕಯಾ ಅವರು ಯಾವ ದೇಶದವರೆಂದು ಬಹಿರಂಗಪಡಿಸಿಲ್ಲ ಎನ್ನಲಾಗಿದೆ.

ಶುಕ್ರವಾರ, ನರಿಟಾ ವಿಮಾನ ನಿಲ್ದಾಣದಲ್ಲಿ ಕರೋನವೈರಸ್ ಗೆ ಒಳಗಾದ ನೈಜೀರಿಯನ್ ಒಲಿಂಪಿಕ್ಸ್ ನಿಯೋಗದ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದು ಒಲಿಂಪಿಕ್ಸ್ (Tokyo Olympics) ಸಂಬಂಧಿತ ಸಂದರ್ಶಕರ ಮೊದಲ ಕೋವಿಡ್ -19 ಪ್ರಕರಣವಾಗಿದೆ.

ಇದನ್ನೂ ಓದಿ: ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ರೋಜರ್ ಫೆಡರರ್

ಟೋಕಿಯೊದಲ್ಲಿ ಸೋಂಕುಗಳು ಹರಡಿಕೊಂಡಿವೆ ಮತ್ತು ತಜ್ಞರು ಎಚ್ಚರಿಕೆ ನೀಡುತ್ತಿದ್ದರೂ ಸಹ ಜುಲೈ 23 ರಿಂದ ಪ್ರಾರಂಭವಾಗುವ ಕ್ರೀಡಾಕೂಟದಲ್ಲಿ ಭಾಗಿಯಾಗಿರುವ ಹಲವರಿಗೆ ಈಗ ಕೊರೊನಾ ಭೀತಿ ಎದುರಾಗಿದೆ.ಟೋಕಿಯೊ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿದೆ, ಆದರೆ ಅದರ ಹರಡುವಿಕೆಯನ್ನು ತಡೆಯುವ ಹೆಚ್ಚಿನ ಕ್ರಮಗಳು ಸ್ವಯಂಪ್ರೇರಿತವಾಗಿವೆ ಮತ್ತು ಅನೇಕ ಜನರು ಅದನ್ನು ಅನುಸರಿಸುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ರೋಜರ್ ಫೆಡರರ್

ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್‌ನಲ್ಲಿ ಮಾಧ್ಯಮಗಳು, ಪ್ರಸಾರಕರು, ಅಧಿಕಾರಿಗಳು ಮತ್ತು ನ್ಯಾಯಾಧೀಶರು ಮತ್ತು ಇತರರು ಸೇರಿದಂತೆ 15,400 ಕ್ರೀಡಾಪಟುಗಳು ಮತ್ತು ಸಾವಿರಾರು ಜನರು ಜಪಾನ್‌ಗೆ ಪ್ರವೇಶಿಸುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನ ಅಧಿಕೃತ ವೆಚ್ಚ 15.4 ಬಿಲಿಯನ್ ಡಾಲರ್ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News