Ranji Trophy 2022-23: ಬಾಂಗ್ಲಾ ಪ್ರವಾಸದಲ್ಲಿ ಅವಕಾಶ ವಂಚಿತನಾದ ಈ ಆಟಗಾರ ರಣಜಿ ಟ್ರೋಫಿಯಲ್ಲಿ ಶತಕ ಸಿಡಿಸಿಯೇ ಬಿಟ್ಟ!!

Ranji Trophy 2022-23: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕೆಎಲ್ ರಾಹುಲ್ ಸಾರಥ್ಯ ವಹಿಸಿದ್ದರು. ಅವರ ನಾಯಕತ್ವದಲ್ಲಿ, ಯುವ ಆಟಗಾರ ಅಭಿಮನ್ಯು ಈಶ್ವರನ್ ಇಡೀ ಸರಣಿಯಲ್ಲಿ ಬೆಂಚ್ ಮೇಲೆ ಕುಳಿತಿರುವುದು ಕಂಡುಬಂದಿತ್ತು ಅಭಿಮನ್ಯು ಈಶ್ವರನ್ ಇನ್ನೂ ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಪಂದ್ಯವನ್ನು ಆಡಿಲ್ಲ. ಇದೀಗ ಬಂಗಾಳ ಪರ ಆಡುತ್ತಿರುವ ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ್ದಾರೆ.

Written by - Bhavishya Shetty | Last Updated : Dec 29, 2022, 11:17 AM IST
    • ಅಭಿಮನ್ಯು ಈಶ್ವರನ್ ಇನ್ನೂ ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಪಂದ್ಯವನ್ನು ಆಡಿಲ್ಲ
    • ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಭಿಮನ್ಯು ಈಶ್ವರನ್ ಅವರ ಅತ್ಯುತ್ತಮ ಫಾರ್ಮ್ ಮುಂದುವರಿದಿದೆ
    • ಮೊದಲ ಇನ್ನಿಂಗ್ಸ್‌ನಲ್ಲಿ 218 ಎಸೆತಗಳನ್ನು ಎದುರಿಸಿ 170 ರನ್ ಗಳಿಸಿದ್ದಾರೆ
Ranji Trophy 2022-23: ಬಾಂಗ್ಲಾ ಪ್ರವಾಸದಲ್ಲಿ ಅವಕಾಶ ವಂಚಿತನಾದ ಈ ಆಟಗಾರ ರಣಜಿ ಟ್ರೋಫಿಯಲ್ಲಿ ಶತಕ ಸಿಡಿಸಿಯೇ ಬಿಟ್ಟ!! title=
Abhimanyu Iswaran

Ranji Trophy 2022-23: ಟೀಂ ಇಂಡಿಯಾ ಇತ್ತೀಚೆಗೆ ಬಾಂಗ್ಲಾದೇಶ ಪ್ರವಾಸದಿಂದ ಮರಳಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ ಮೂರು ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳು ನಡೆದಿವೆ. ಈ ಟೆಸ್ಟ್ ಸರಣಿಯಲ್ಲಿ, ಯುವ ಬ್ಯಾಟ್ಸ್‌ಮನ್‌ನನ್ನು ತಂಡದಲ್ಲಿ ಸೇರಿಸಲಾಯಿತು. ಆದರೆ ಈ ಆಟಗಾರನಿಗೆ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಪ್ಲೇಯಿಂಗ್ 11 ಗೆ ಎಂಟ್ರಿ ಕೊಡಲು ಸಾಧ್ಯವಾಗಲಿಲ್ಲ. ಈ ಆಟಗಾರ ಈಗ ಭಾರತಕ್ಕೆ ಮರಳಿದ ಬೆನ್ನಲ್ಲೇ ರಣಜಿ ಟ್ರೋಫಿಯಲ್ಲಿ ಬಿರುಸಿನ ಇನ್ನಿಂಗ್ಸ್ ಆಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: IPL Auction 2023 : ತುಂಬಾ ಅಗ್ಗದ ಬೆಲೆಗೆ ಸೆಲ್ ಆದ ಟೀಂ ಇಂಡಿಯಾ ಈ ಸ್ಟಾರ್ ಬ್ಯಾಟ್ಸಮನ್!

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕೆಎಲ್ ರಾಹುಲ್ ಸಾರಥ್ಯ ವಹಿಸಿದ್ದರು. ಅವರ ನಾಯಕತ್ವದಲ್ಲಿ, ಯುವ ಆಟಗಾರ ಅಭಿಮನ್ಯು ಈಶ್ವರನ್ ಇಡೀ ಸರಣಿಯಲ್ಲಿ ಬೆಂಚ್ ಮೇಲೆ ಕುಳಿತಿರುವುದು ಕಂಡುಬಂದಿತ್ತು ಅಭಿಮನ್ಯು ಈಶ್ವರನ್ ಇನ್ನೂ ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಪಂದ್ಯವನ್ನು ಆಡಿಲ್ಲ. ಇದೀಗ ಬಂಗಾಳ ಪರ ಆಡುತ್ತಿರುವ ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಭಿಮನ್ಯು ಈಶ್ವರನ್ ಅವರ ಅತ್ಯುತ್ತಮ ಫಾರ್ಮ್ ಮುಂದುವರಿದಿದೆ. 2022-23ರ ರಣಜಿ ಟ್ರೋಫಿಯಲ್ಲಿ ನಾಗಾಲ್ಯಾಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 218 ಎಸೆತಗಳನ್ನು ಎದುರಿಸಿ 170 ರನ್ ಗಳಿಸಿದ್ದಾರೆ. ಈ ವೇಳೆ ಅಭಿಮನ್ಯು ಈಶ್ವರನ್ ಬ್ಯಾಟ್‌ನಿಂದ ಒಟ್ಟು 16 ಬೌಂಡರಿಗಳು ಸಿಡಿದಿವೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಭಿಮನ್ಯು ಈಶ್ವರನ್ ಅವರ ಸತತ ನಾಲ್ಕನೇ ಶತಕವಾಗಿದೆ. ಈ ಅದ್ಭುತ ಆಟದ ನಂತರವೂ ಅವರು ಟೀಮ್ ಇಂಡಿಯಾದಲ್ಲಿ ಮೊದಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ:  IPL Auction 2023 : ಐಪಿಎಲ್‌ನಲ್ಲೆ ಅತೀ ಹೆಚ್ಚು ಮೊತ್ತಕ್ಕೆ ಸೆಲ್ ಆದ ಸ್ಯಾಮ್ ಕರ್ರಾನ್!

ಟೀಂ ಇಂಡಿಯಾದಲ್ಲಿ ಅಭಿಮನ್ಯು ಈಶ್ವರನ್ ತಂಡದ ಭಾಗವಾಗುತ್ತಿರುವುದು ಇದೇ ಮೊದಲಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021 ರ ಅಂತಿಮ ಪಂದ್ಯದ ಸಮಯದಲ್ಲಿ ಅವರು ಟೀಮ್ ಇಂಡಿಯಾದೊಂದಿಗೆ ಇಂಗ್ಲೆಂಡ್‌ಗೆ ಹೋಗಿದ್ದರು. ಆಗ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದರು. ಇನ್ನೊಂದೆಡೆ ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ಭಾರತ ಎ ತಂಡದ ನಾಯಕತ್ವದ ಅವಕಾಶವನ್ನು ಪಡೆದರು ಮತ್ತು ಅಲ್ಲಿಯೂ ಸಹ ಬ್ಯಾಟ್ಸ್ಮನ್ ಆಗಿಯೂ ಉತ್ತಮ ಪ್ರದರ್ಶನ ನೀಡಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News