ಜಿಂಬಾಬ್ವೆ ಟೂರ್ ಬಳಿಕ ಈ ಆಟಗಾರನಿಗೆ ನಾಯಕತ್ವ ಪಟ್ಟ: ಶೀಘ್ರದಲ್ಲೇ ಮಹಾ ಘೋಷಣೆ!

ನ್ಯೂಜಿಲೆಂಡ್‌ನ ಎ ತಂಡವು ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಮಾಡಲಿದೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾದ ನಾಯಕತ್ವ ಆಟಗಾರನ ಹೆಗಲೇರುವಚ ಸಾಧ್ಯತೆ ಕಂಡುಬರುತ್ತಿದೆ.  

Written by - Bhavishya Shetty | Last Updated : Aug 21, 2022, 01:00 PM IST
    • ನ್ಯೂಜಿಲೆಂಡ್‌ನ ಎ ತಂಡವು ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಮಾಡಲಿದೆ
    • ನಾಯಕತ್ವದ ಜವಾಬ್ದಾರಿ ಶುಭಮನ್ ಗಿಲ್ ಗೆ ಸಿಗುವ ಸಾಧ್ಯತೆ
    • ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಭಾರತ ಎ ತಂಡದ ನಾಯಕನಾಗುವ ಸಾಧ್ಯತೆ
ಜಿಂಬಾಬ್ವೆ ಟೂರ್ ಬಳಿಕ ಈ ಆಟಗಾರನಿಗೆ ನಾಯಕತ್ವ ಪಟ್ಟ: ಶೀಘ್ರದಲ್ಲೇ ಮಹಾ ಘೋಷಣೆ!  title=
Team India

ಸದ್ಯ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸದಲ್ಲಿದ್ದು,  ಈ ಪ್ರವಾಸದಲ್ಲಿರುವ ಆಟಗಾರನೋರ್ವನಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಆಟಗಾರನಿಗೆ ಶೀಘ್ರದಲ್ಲೇ ನಾಯಕತ್ವದ ಜವಾಬ್ದಾರಿ ಸಿಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಈ ಆಟಗಾರನ ಇತ್ತೀಚಿನ ಆಟದ ವೈಖರಿಯು ತುಂಬಾ ಉತ್ತಮವಾಗಿದೆ. ಈ ದೃಷ್ಟಿಯಿಂದ ಆಯ್ಕೆದಾರರು ಶೀಘ್ರದಲ್ಲೇ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸೂಚನೆಯಿದೆ. 

ಇದನ್ನೂ ಓದಿ: Beetroot Benefits: ಬೀಟ್‌ರೂಟ್‌ನಿಂದ ಸಿಗುವ ಆರೋಗ್ಯದ ಪ್ರಯೋಜನಗಳು ಏನು?

ನ್ಯೂಜಿಲೆಂಡ್‌ನ ಎ ತಂಡವು ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಮಾಡಲಿದೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾದ ನಾಯಕತ್ವ ಆಟಗಾರನ ಹೆಗಲೇರುವಚ ಸಾಧ್ಯತೆ ಕಂಡುಬರುತ್ತಿದೆ.  

ಸೆಪ್ಟೆಂಬರ್‌ನಲ್ಲಿ, ನ್ಯೂಜಿಲೆಂಡ್‌ A ತಂಡ ಭಾರತ ಪ್ರವಾಸದಲ್ಲಿ ಮೂರು ನಾಲ್ಕು ದಿನಗಳ ಪಂದ್ಯಗಳು ಮತ್ತು ಮೂರು ODI ಪಂದ್ಯಗಳನ್ನು ಆಡಲಿದೆ. ಈ ಪ್ರವಾಸಕ್ಕಾಗಿ ನ್ಯೂಜಿಲೆಂಡ್ ತನ್ನ ತಂಡವನ್ನು ಪ್ರಕಟಿಸಿದೆ. ನ್ಯೂಜಿಲೆಂಡ್ ಎ ವಿರುದ್ಧದ ಈ ಪಂದ್ಯಗಳಿಗೆ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಭಾರತ ಎ ತಂಡದ ನಾಯಕನಾಗುವ ಸಾಧ್ಯತೆಯಿದೆ. ಶುಭಮನ್ ಗಿಲ್ ಪ್ರಸ್ತುತ ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ ಮತ್ತು ತಂಡಕ್ಕೆ ದೊಡ್ಡ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸುತ್ತಿದ್ದಾರೆ.

ನ್ಯೂಜಿಲೆಂಡ್ ಎ ಮತ್ತು ಭಾರತ ಎ ನಡುವಿನ ಪ್ರವಾಸ ಸೆಪ್ಟೆಂಬರ್ 1 ರಿಂದ ಆರಂಭವಾಗಲಿದೆ. ಮೊದಲ ನಾಲ್ಕು ದಿನಗಳ ಪಂದ್ಯ ಉಭಯ ತಂಡಗಳ ನಡುವೆ ನಡೆಯಲಿದೆ. ಮೊದಲ ನಾಲ್ಕು ದಿನಗಳ ಪಂದ್ಯ ಸೆಪ್ಟೆಂಬರ್ 1 ರಿಂದ 4 ರವರೆಗೆ ನಡೆಯಲಿದ್ದು, ಎರಡನೇ ನಾಲ್ಕು ದಿನಗಳ ಪಂದ್ಯ ಸೆಪ್ಟೆಂಬರ್ 8-11 ರವರೆಗೆ ನಡೆಯಲಿದೆ. ಈ ಎರಡೂ ನಾಲ್ಕು ದಿನಗಳ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಇದಾದ ಬಳಿಕ ಏಕದಿನ ಪಂದ್ಯಗಳು ಆರಂಭವಾಗಲಿವೆ. ಈ ಏಕದಿನ ಪಂದ್ಯಗಳು ಸೆಪ್ಟೆಂಬರ್ 22, ಸೆಪ್ಟೆಂಬರ್ 25 ಮತ್ತು ಸೆಪ್ಟೆಂಬರ್ 27 ರಂದು ಚೆನ್ನೈನಲ್ಲಿ ನಡೆಯಲಿವೆ.

ಇದನ್ನೂ ಓದಿ: ATM Cash Withdrawal New Charges: ATM ನಿಂದ ಹಣ ಹಿಂಪಡೆಯುಲು ಎಷ್ಟು ಶುಲ್ಕ ಮತ್ತು ತೆರಿಗೆ ಪಾವತಿಸಬೇಕು?

ನಾಲ್ಕು ದಿನಗಳ ಪಂದ್ಯಗಳಿಗೆ ಭಾರತ ಎ ಸಂಭಾವ್ಯ ತಂಡ: ಶುಭಮನ್ ಗಿಲ್ (ನಾಯಕ), ಯಶ್ ದುಬೆ, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಹನುಮ ವಿಹಾರಿ, ವಾಷಿಂಗ್ಟನ್ ಸುಂದರ್, ಅಕ್ಷಯ್ ವಾಡ್ಕರ್ (ವಿ.ಕೀ), ಕೆಎಸ್ ಭರತ್ (ವಿ.ಕೀ), ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ಜಲಜ್ ಸಕ್ಸೇನಾ, ಮೊಹಮ್ಮದ್ ಸಿರಾಜ್, 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News