ನವದೆಹಲಿ: ಪ್ರಸ್ತುತ ಐಪಿಎಲ್ 2021 ರ ದ್ವಿತೀಯಾರ್ಧವು ಯುಎಇಯಲ್ಲಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು, ಎರಡನೇ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಆದರೆ ಈ ತಂಡವು ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಅನ್ನು ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಉತ್ತಮ ವಿಜಯವನ್ನು ದಾಖಲಿಸಿತು. ಈ ವಿಶೇಷ ವಿಜಯದ ನಂತರ, ವಿರಾಟ್ ಕೊಹ್ಲಿ ತಂಡದ ಎಲ್ಲ ಆಟಗಾರರು ಮೋಜು ಮಾಡುತ್ತಿರುವುದು ಕಂಡು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋಸ್:
ವಾಸ್ತವವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಆರ್‌ಸಿಬಿ ಆಟಗಾರರ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದೆ. ಈ ಫೋಟೋಗಳು ಬಳಕೆದಾರರಲ್ಲಿ ಸಂವೇದನೆಯನ್ನು ಹರಡಿದೆ. ವಾಸ್ತವವಾಗಿ, ಆರ್‌ಸಿಬಿ ತನ್ನ ಕೆಲವು ಆಟಗಾರರು ಈಜು ಕೊಳದಲ್ಲಿ ಸ್ನಾನ ಮಾಡುವ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಇತರ ಆಟಗಾರರನ್ನು ಈ ಫೋಟೋಗಳಲ್ಲಿ ಕಾಣಬಹುದು. ವಿರಾಟ್ ಹೊರತುಪಡಿಸಿ, ದೇವದತ್ ಪಡ್ಕಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನೂ ಈ ಫೋಟೋಗಳಲ್ಲಿ ಕಾಣಬಹುದು.
Our boys definitely deserve to cool off after a couple of days of intense #IPL action. 🧊🏊♂️ #PlayBold #WeAreChallengers #IPL2021 pic.twitter.com/SNNMwIvxtJ
— Royal Challengers Bangalore (@RCBTweets) September 27, 2021
ಇದನ್ನೂ ಓದಿ- Bangalore vs Mumbai: ಹರ್ಷಾಲ್ ಪಟೇಲ್, ಚಹಾಲ್ ಬೌಲಿಂಗ್ ದಾಳಿಗೆ ಮುಂಬೈ ಧೂಳಿಪಟ
ಬಳಕೆದಾರರು ಇಂತಹ ಕಾಮೆಂಟ್‌ಗಳನ್ನು ಮಾಡಿದ್ದಾರೆ :
ಆರ್‌ಸಿಬಿ ಪ್ಲೇಯರ್‌ಗಳ (RCB Players) ಈ ಫೋಟೋಗಳನ್ನು ನೆಟ್ಟಿಗರು ಬಹಳ ಇಷ್ಟಪಡುತ್ತಿದ್ದಾರೆ. ಈ ಫೋಟೋಗಳಿಗೆ ಜನರು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ವಿಶ್ವದ ಎಲ್ಲಾ ಹಾಟ್ ಪ್ಲೇಯರ್‌ಗಳು ಆರ್‌ಸಿಬಿಯಲ್ಲಿದ್ದಾರೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ವಾಸ್ತವವಾಗಿ ಆರ್‌ಸಿಬಿ ಆಟಗಾರರ ಈ ಶರ್ಟ್‌ಲೆಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿವೆ. ವಿರಾಟ್ ಕೊಹ್ಲಿ (Virat Kohli) ಅವರನ್ನು ವಿಶ್ವದ ಫಿಟ್ ಆಟಗಾರ ಎಂದು ಪರಿಗಣಿಸಲಾಗಿದೆ ಮತ್ತು ಅವರ ಫಿಟ್ನೆಸ್ ಈ ಫೋಟೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
Our boys definitely deserve to cool off after a couple of days of intense #IPL action. 🧊🏊♂️ #PlayBold #WeAreChallengers #IPL2021 pic.twitter.com/SNNMwIvxtJ
— Royal Challengers Bangalore (@RCBTweets) September 27, 2021
THAT NOOR ON HIS FACE 🤩.@imVkohli love u 🌍❣️ pic.twitter.com/sa1PO5uQMl
— Arman Khan (@CHEEKUTHEGOAT) September 27, 2021
Saari hotness ek hi team mai not fair
— zeel 🔆 (@iheartsebchris) September 27, 2021
ಇದನ್ನೂ ಓದಿ- Suresh Raina Retire : ಈ ಋತುವಿನ ನಂತರ ಐಪಿಎಲ್‌ನಿಂದ ನಿವೃತ್ತರಾಗುತ್ತಾರೆಯೇ ಸುರೇಶ್ ರೈನಾ ?
ಇದುವರೆಗೂ ಆರ್‌ಸಿಬಿ ಒಂದು ಬಾರಿಯೂ ಗೆದ್ದಿಲ್ಲ:
ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಇಲ್ಲಿಯವರೆಗೆ ಒಂದು ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಈ ತಂಡವು ಮೂರು ಬಾರಿ ಐಪಿಎಲ್ ಫೈನಲ್ ತಲುಪಿದೆ. ಆದರೆ ಇಲ್ಲಿಯವರೆಗೆ ಈ ತಂಡವು ಟ್ರೋಫಿಯನ್ನು ಗೆದ್ದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.