Virat Kohli ನಾಯಕತ್ವದಲ್ಲಿ ತಂಡದಿಂದ ಹೊರಗಿದ್ದ ಈ ಆಟಗಾರನಿಗೆ Rohit Sharma ನೀಡಲಿದ್ದಾರೆ ಅವಕಾಶ

ಹೊಸ ನಾಯಕನನ್ನು ಆಯ್ಕೆ ಮಾಡಿದಾಗ, ತಂಡದಲ್ಲಿ ದೊಡ್ಡ ಬದಲಾವಣೆಗಲಾಗುವುದು ಸಹಜ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹಲವು ಆಟಗಾರರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ.

Written by - Ranjitha R K | Last Updated : Dec 13, 2021, 08:57 AM IST
  • ರೋಹಿತ್ ಹೊಸ ODI ನಾಯಕ
  • ಇಶಾನ್ ಗೆ ತಂಡದಲ್ಲಿ ಅವಕಾಶ ಸಿಗಬಹುದು
  • ಸೂರ್ಯಕುಮಾರ್ ಬಲಿಷ್ಠ ಬ್ಯಾಟ್ಸ್‌ಮನ್
Virat Kohli ನಾಯಕತ್ವದಲ್ಲಿ ತಂಡದಿಂದ ಹೊರಗಿದ್ದ ಈ ಆಟಗಾರನಿಗೆ  Rohit Sharma ನೀಡಲಿದ್ದಾರೆ ಅವಕಾಶ title=
ರೋಹಿತ್ ಹೊಸ ODI ನಾಯಕ (file photo)

ನವದೆಹಲಿ : ಮಹತ್ವದ ನಿರ್ಧಾರ ಕೈಗೊಂಡಿರುವ ಬಿಸಿಸಿಐ (BCCI) ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು (Virat Kohli) ವಜಾಗೊಳಿಸಿ, ರೋಹಿತ್ ಶರ್ಮಾಗೆ (Rohit Sharma) ನಾಯಕತ್ವವನ್ನು ವಹಿಸಿದೆ. ಹೊಸ ನಾಯಕನನ್ನು ಆಯ್ಕೆ ಮಾಡಿದಾಗ, ತಂಡದಲ್ಲಿ ದೊಡ್ಡ ಬದಲಾವಣೆಗಲಾಗುವುದು ಸಹಜ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹಲವು ಆಟಗಾರರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಆಟಗಾರರು ಐಪಿಎಲ್‌ನಲ್ಲಿ (IPL) ತಮ್ಮ ಆಟದಿಂದ ಎಲ್ಲರ ಮನ ಗೆದ್ದಿದ್ದಾರೆ. ಇದೀಗ ರೋಹಿತ್ ಶರ್ಮಾ ತಮ್ಮ  ನಾಯಕತ್ವದಲ್ಲಿ ಈ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಬಹುದು.  

1. ರಾಹುಲ್ ಚಹಾರ್ :


ರಾಹುಲ್ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ. ಈ ತಂಡ ನಾಯಕ ರೋಹಿತ್ ಶರ್ಮಾ (Rohit Sharma). ಇದೀಗ ರೋಹಿತ್ ನಾಯಕರಾದ ತಕ್ಷಣ, ಯುಜುವೇಂದ್ರ ಚಹಾಲ್ (Yuzuvendra Chahal) ಬದಲಿಗೆ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ರಾಹುಲ್ ಬೌಲಿಂಗ್ ಎದುರಿಸುವುದು ಬ್ಯಾಟ್ಸ್‌ಮನ್‌ಗೆ ಅಷ್ಟು ಸುಲಭವಲ್ಲ. ಇನ್ನು ರಾಹುಲ್ ಚಹಾರ್ 42 ಐಪಿಎಲ್ (IPL) ಪಂದ್ಯಗಳಲ್ಲಿ 43 ವಿಕೆಟ್ ಪಡೆದಿದ್ದಾರೆ. ನಿಧಾನಗತಿಯ ಎಸೆತಗಳಲ್ಲಿ ವಿಕೆಟ್ ಪಡೆಯುವ ಕಲೆ ರಾಹುಲ್ ಅವರಿಗೆ ಇತ್ತು.  ಈ ಹಿನ್ನೆಲೆಯಲ್ಲಿ  ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. 

ಇದನ್ನೂ ಓದಿ : Rohit Sharma: ODI ನಾಯಕನಾದ ನಂತರ ರೋಹಿತ್ ಮೊದಲ ಪ್ರತಿಕ್ರಿಯೆ, ಟೀಕಾಕಾರರಿಗೆ ಪ್ರತ್ಯುತ್ತರ

2. ಇಶಾನ್ ಕಿಶನ್ :


ವಿರಾಟ್ ಕೊಹ್ಲಿ (Virat Kohli) ನಾಯಕತ್ವದಲ್ಲಿ ಇಶಾನ್ ಕಿಶನ್ ಗೆ ರಿಷಬ್ ಪಂತ್ ಗೆ ಸಿಕ್ಕಷ್ಟು ಅವಕಾಶಗಳು ಸಿಗಲಿಲ್ಲ. ಇಶಾನ್ ಅವರನ್ನು ಯಾವಾಗಲೂ ಕಡೆಗಣಿಸಲಾಗುತ್ತಿತ್ತು. ಆದರೆ, ಇಶಾನ್ ಕಿಶನ್ ಉತ್ತಮ ಬ್ಯಾಟ್ಸ್‌ಮನ್. ರೋಹಿತ್ ಶರ್ಮಾ  ನಾಯಕತ್ವದಲ್ಲಿ ಇಶಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಇಶಾನ್ ಆರಂಭಿಕರಿಂದ ಮಧ್ಯಮ ಕ್ರಮಾಂಕದವರೆಗೆ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲರು. ಇಶಾನ್ ಅವರ ವಿಕೆಟ್ ಕೀಪಿಂಗ್ ಕೌಶಲ್ಯವೂ ಅದ್ಭುತವಾಗಿದೆ.  ಇಶಾನ್ 61 ಐಪಿಎಲ್ (IPL) ಪಂದ್ಯಗಳಲ್ಲಿ ಆಡಿ 1461 ರನ್ ಗಳಿಸಿದ್ದಾರೆ. 

3. ಸೂರ್ಯಕುಮಾರ್ ಯಾದವ್ :


ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮಧ್ಯಮ ಕ್ರಮಾಂಕಕ್ಕೆ ಖಾಯಂ ಬ್ಯಾಟ್ಸ್‌ಮನ್ ಸಿಗಲಿಲ್ಲ. ಸೂರ್ಯಕುಮಾರ್ ಯಾದವ್ ಆ ಬ್ಯಾಟ್ಸ್‌ಮನ್‌ನ ಕೊರತೆಯನ್ನು ತುಂಬಬಲ್ಲರು. ರೋಹಿತ್ ನಾಯಕತ್ವದಲ್ಲಿ, ನ್ಯೂಜಿಲೆಂಡ್ ವಿರುದ್ಧ ಸೂರ್ಯಕುಮಾರ್ ಅವರಿಗೆ ಅವಕಾಶ ಸಿಕ್ಕಿತು ಮತ್ತು ಅವರು ಉತ್ತಮ ಪ್ರದರ್ಶನ ಕೂಡಾ ನೀಡಿದ್ದರು.  ಸೂರ್ಯಕುಮಾರ್ ಕೂಡಾ, ರೋಹಿತ್ ಶರ್ಮಾ ಅವರ ನೆಚ್ಚಿನ ಆಟಗಾರರಲ್ಲಿ ಒಬ್ಬರು. ಸೂರ್ಯಕುಮಾರ್ ಯಾದವ್ (Suryakumr Yadav) 115 ಐಪಿಎಲ್ ಪಂದ್ಯಗಳಲ್ಲಿ 2341 ರನ್ ಗಳಿಸಿದ್ದಾರೆ.  

ಇದನ್ನೂ ಓದಿ :IPL 2022 Mega Auction : ಕೆಎಲ್ ರಾಹುಲ್, ರಶೀದ್ ಖಾನ್ ಗೆ ಸಹಿ ಮಾಡಿಲ್ಲ ಲಕ್ನೋ, ಅಹಮದಾಬಾದ್ ಫ್ರಾಂಚೈಸಿಗಳು : ಯಾಕೆ? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News