ನವದೆಹಲಿ: ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಂತರ ಭಾರತದ ಟಿ 20 ಐ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗುರುವಾರ ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್‌ನಲ್ಲಿ, ಕೊಹ್ಲಿ ಅವರು ತಮ್ಮ ಅತಿಯಾದ ಕೆಲಸದ ಹೊರೆ ಕಡಿಮೆ ಮಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು ಆದರೆ ಅವರು ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿನ ನಾಯಕತ್ವ ಮುಂದುವರೆಸುವುದಾಗಿ ಹೇಳಿದರು.
ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಕೊಹ್ಲಿ (Virat Kohli) ತಮ್ಮ ಬ್ಯಾಟಿಂಗ್ ಪ್ರದರ್ಶನದಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಇರುವುದಕ್ಕೆ ಮತ್ತು ನಾಯಕನಾಗಿ ಐಸಿಸಿ ಟ್ರೋಫಿಯನ್ನು ಗೆಲ್ಲದ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವ ಒತ್ತಡದಲ್ಲಿದ್ದಾರೆಯೇ ಎನ್ನುವ ಸಂಶಯ ಅಭಿಮಾನಿಗಳಿಗೆ ಕಾಡುತ್ತಿದೆ.
ಇದನ್ನೂ ಓದಿ : T20I World Cup: ವಿಶ್ವಕಪ್ ನಂತರ ಟಿ 20 ತಂಡದ ನಾಯಕತ್ವದಿಂದ ಕೆಳಗಿಳಿಯಲಿರುವ ವಿರಾಟ್ ಕೊಹ್ಲಿ
ಇನ್ನೊಂದೆಡೆಗೆ ಈಗ ಕೊಹ್ಲಿ ನಿರ್ಧಾರದ ವಿಚಾರವಾಗಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಆಲ್‌ರೌಂಡರ್ ಮದನ್ ಲಾಲ್ "ಅವರ ಮೇಲೆ ಯಾವುದೇ ಒತ್ತಡವಿರಲಿಲ್ಲ ಮತ್ತು ಅವರ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ. ಇಂದು ಕ್ರಿಕೆಟಿಗರು ಎಲ್ಲಾ ಮೂರು ಆಟಗಳನ್ನು ಆಡುತ್ತಿದ್ದಾರೆ ಮತ್ತು ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕರೂ ಆಗಿದ್ದಾರೆ ಮತ್ತು ಅವರು ಪ್ರಸ್ತುತ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಇದು ತನಗೆ ಮತ್ತು ತಂಡಕ್ಕೆ ಒಳ್ಳೆಯದು "ಎಂದು ಮದನ್ ಲಾಲ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಒತ್ತಡದಲ್ಲಿ ನಾಯಕತ್ವ ತ್ಯಜಿಸಿದ ಬಗ್ಗೆ ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಮದನ್ ಲಾಲ್, "ಕೊಹ್ಲಿ ನಾಯಕತ್ವ ತ್ಯಜಿಸಿಲ್ಲ, ಏಕೆಂದರೆ ಅವರು ತಂಡವನ್ನು ಕಟ್ಟಿದ್ದಾರೆ ಮತ್ತು ಭಾರತೀಯ ತಂಡವನ್ನು ನಂಬರ್ ಒನ್ ಟೆಸ್ಟ್ ರ್ಯಾಂಕಿಂಗ್ ತಂಡಕ್ಕೆ ಕರೆದೊಯ್ದಿದ್ದಾರೆ, ಆದ್ದರಿಂದ ಇದು ಬಿಟ್ಟುಹೋಗುವ ವಿಚಾರ ಅಲ್ಲ.ಇದು ಕೆಲಸದ ಹೊರೆ ಮತ್ತು ಅಲ್ಲಿ ಎಲ್ಲರ ಮೇಲೆ ಒತ್ತಡವಿದೆ ಮತ್ತು ನೀವು ಅದನ್ನು ನಿಭಾಯಿಸಬೇಕು "ಎಂದು ಅವರು ಹೇಳಿದರು.
ಇದನ್ನೂ ಓದಿ : IPL 2021 : ಮೊದಲ ಐಪಿಎಲ್ ಗೆಲ್ಲುವಿನತ್ತ ದಾಪುಗಾಲಿಡುತ್ತಿದೆ RCB
ಟಿ 20 ವಿಶ್ವಕಪ್ ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿದೆ. ಈ ಬಾರಿ, ಟೂರ್ನಮೆಂಟ್ ಯುಎಇ ಮತ್ತು ಒಮಾನ್‌ನ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ.ಅಕ್ಟೋಬರ್ 17 ರಿಂದ ಅರ್ಹತಾ ಸುತ್ತಿನೊಂದಿಗೆ ಟಿ 20 ವಿಶ್ವಕಪ್ ಆರಂಭವಾಗಲಿದೆ. ಭಾರತವು ಅಕ್ಟೋಬರ್ 24 ರಂದು ಪಾಕಿಸ್ತಾನ ವಿರುದ್ಧ ಟಿ 20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.