RCB: ಮೈದಾನದಲ್ಲಿಯೇ ಕಣ್ಣೀರು ಹಾಕಿದ RCBಯ ಸ್ಟಾರ್ ಆಟಗಾರ್ತಿ! ಕಾರಣವೇನು ಗೊತ್ತಾ?

RCB Player Ellis Perry: ಮಹಿಳಾ ಪ್ರೀಮಿಯರ್ ಲೀಗ್‌’ನಲ್ಲಿ ನಿನ್ನೆಯವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಫಲವಾಗಿತ್ತು. ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದ ಆರ್ ಸಿ ಬಿ ಸದ್ಯ ಕೊಂಚ ಚೇತರಿಸಿಕೊಂಡಿದ್ದು, ಕಳೆದ ದಿನ ಒಂದು ಪಂದ್ಯದಲ್ಲಿ ಗೆಲುವು ಕಂಡಿದೆ.

Written by - Bhavishya Shetty | Last Updated : Mar 16, 2023, 02:24 PM IST
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿ ಬಿ ಜಯ ಗಳಿಸಿದೆ.
    • ಕಳೆದ ಕೆಲವು ದಿನಗಳಿಂದ ಸತತ ಸೋಲು ಕಂಡಿದ್ದ ಆರ್ ಸಿ ಬಿಗೆ ಇದು ಮೊದಲ ಗೆಲುವಾಗಿದೆ,
    • ಈ ಪಂದ್ಯವು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿತ್ತು.
RCB: ಮೈದಾನದಲ್ಲಿಯೇ ಕಣ್ಣೀರು ಹಾಕಿದ RCBಯ ಸ್ಟಾರ್ ಆಟಗಾರ್ತಿ! ಕಾರಣವೇನು ಗೊತ್ತಾ? title=
Ellis Perry Cry

RCB Player Ellis Perry: ಕಳೆದ ದಿನ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2023ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿ ಬಿ ಜಯ ಗಳಿಸಿದೆ. ಕಳೆದ ಕೆಲವು ದಿನಗಳಿಂದ ಸತತ ಸೋಲು ಕಂಡಿದ್ದ ಆರ್ ಸಿ ಬಿಗೆ ಇದು ಮೊದಲ ಗೆಲುವಾಗಿದೆ, ಈ ಪಂದ್ಯವು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿತ್ತು. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಸತತ ಸೋಲಿನ ಬಳಿಕ ಯುಪಿ ವಾರಿಯರ್ಸ್ ವಿರುದ್ಧ ಗೆದ್ದುಬೀಗಿದ RCB: ಪ್ಲೇ ಆಫ್ ಕನಸು ಜೀವಂತ!

ಮಹಿಳಾ ಪ್ರೀಮಿಯರ್ ಲೀಗ್‌’ನಲ್ಲಿ ನಿನ್ನೆಯವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಫಲವಾಗಿತ್ತು. ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದ ಆರ್ ಸಿ ಬಿ ಸದ್ಯ ಕೊಂಚ ಚೇತರಿಸಿಕೊಂಡಿದ್ದು, ಕಳೆದ ದಿನ ಒಂದು ಪಂದ್ಯದಲ್ಲಿ ಗೆಲುವು ಕಂಡಿದೆ.

 

ನಾಯಕಿ ಸ್ಮೃತಿ ಮಂಧಾನ ಬ್ಯಾಟಿಂಗ್ ಅಥವಾ ನಾಯಕತ್ವದಲ್ಲಿ ಸಂಪೂರ್ಣ ವಿಫಲವಾದಂತೆ ತೋರುತ್ತಿದೆ. ಇನ್ನು ಕಳೆದ ಬಾರಿ ದೆಹಲಿ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಆರ್ ಸಿ ಬಿ ಭಾರೀ ನೋವನ್ನು ಅನುಭವಿಸಿತ್ತು. ಇದೇ ಸಂದರ್ಭದಲ್ಲಿ ಆಲ್ ರೌಂಡರ್ ಎಲ್ಲಿಸ್ ಪೆರ್ರಿ ಮೈದಾನದಲ್ಲಿ ಕಣ್ಣೀರು ಹಾಕಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿಯ ಕಣ್ಣೀರಿಗೆ ಅಭಿಮಾನಿಗಳು ಸಹ ಮರುಗಿದ್ದಾರೆ.

ಇದನ್ನೂ ಓದಿ:  10 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಈ ಮಾರಕ ಬೌಲರ್! ಈತನ ಬೌಲಿಂಗ್ ಸ್ಪೀಡ್ ಗಂಟೆಗೆ 140 ಕಿ.ಮೀ!

ಇನ್ನು ಕಳೆದ ದಿನ ಟಾಸ್ ಗೆದ್ದ ಆರ್ ಸಿ ಬಿ ನಾಯಕಿ ಸ್ಮೃತಿ ಮಂಧಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 19.3 ಪಂದ್ಯಗಳಲ್ಲಿ 135 ರನ್‌ಗಳಿಗೆ ಕಟ್ಟಿಹಾಕಿತು. ಗುರಿ ಮುಟ್ಟಿದ್ದ ಆರ್‌ಸಿಬಿ 18 ರನ್‌ಗಳಲ್ಲಿ ಐದು ಬೆನ್ನ ಹಿಂದೆ ನಷ್ಟಕ್ಕೆ 136 ರನ್ ಗಳಿಸಿ ಗೆಲುವು ಸಾಧಿಸಿತು. ಈ ವಿಭಾಗದಲ್ಲಿ ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಗೆಲುವು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News