Mayank Agarwal, Captain Rest of India Team: ಟೀಂ ಇಂಡಿಯಾದಿಂದ ಹೊರಗುಳಿಯುತ್ತಿರುವ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್‌ಗೆ ದೊಡ್ಡ ಜವಾಬ್ದಾರಿಯನ್ನು ವಹಿಸಲಾಗಿದೆ. 2020 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ ಈ ಆಟಗಾರ, ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕತ್ವವನ್ನು ಪಡೆದಿದ್ದಾರೆ. ಇರಾನಿ ಕಪ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸಲಿದ್ದಾರೆ.
ಮಾರ್ಚ್ 1 ರಿಂದ ಗ್ವಾಲಿಯರ್‌ನಲ್ಲಿ ಪ್ರಾರಂಭವಾಗುವ ಇರಾನಿ ಕಪ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಮಯಾಂಕ್ ಅಗರ್ವಾಲ್ ಇತ್ತೀಚೆಗೆ ರಣಜಿ ಟ್ರೋಫಿ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದರು.
ಇದನ್ನೂ ಓದಿ: W,1,W,W,W,W,W...6 ಬಾಲ್’ಗೆ 5 ವಿಕೆಟ್ ಕಳೆದುಕೊಂಡ ಆಸೀಸ್: ಎಂದಾದರೂ ಕಂಡಿದ್ದೀರಾ ಇಂಥಾ ಪಂದ್ಯ!
ಟೆಸ್ಟ್ ತಂಡದಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸುತ್ತಿರುವ ಅಗರ್ವಾಲ್, ಅಭಿಮನ್ಯು ಈಶ್ವರನ್ ಅವರೊಂದಿಗೆ ಇನ್ನಿಂಗ್ಸ್ ತೆರೆಯುವ ನಿರೀಕ್ಷೆಯಿದೆ. ಪಂದ್ಯವು ಆರಂಭದಲ್ಲಿ ಇಂದೋರ್‌ನಲ್ಲಿ ನಡೆಯಬೇಕಿತ್ತು. ಆದರೆ ಹೋಲ್ಕರ್ ಕ್ರೀಡಾಂಗಣವು ಮಾರ್ಚ್ 1 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಅನ್ನು ಆಯೋಜಿಸುವ ಹಕ್ಕನ್ನು ಪಡೆದ ನಂತರ ಅದನ್ನು ಗ್ವಾಲಿಯರ್‌ಗೆ ವರ್ಗಾಯಿಸಲಾಯಿತು.
ಮಯಾಂಕ್ ಅಗರ್ವಾಲ್ ಮತ್ತು ಈಶ್ವರನ್ ಹೊರತುಪಡಿಸಿ, ಸುದೀಪ್ ಕುಮಾರ್ ಘರಾಮಿ, ಯಶಸ್ವಿ ಜೈಸ್ವಾಲ್, ಬಿ ಇಂದ್ರಜಿತ್ ಮತ್ತು ಯಶ್ ಧುಲ್ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿರಲಿದ್ದಾರೆ. ಪ್ರಸ್ತುತ ರಣಜಿ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ತಂಡದ ವಿಕೆಟ್‌ಕೀಪರ್-ಓಪನರ್ ಹಾರ್ವಿಕ್ ದೇಸಾಯಿ ಮತ್ತು ಎಡಗೈ ವೇಗಿ ಚೇತನ್ ಸಕಾರಿಯಾ ಅವರು ಸಹ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರೆಸ್ಟ್ ಆಫ್ ಇಂಡಿಯಾ ವೇಗಿಗಳಾಗಿ ಬಂಗಾಳದ ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್ ಮುನ್ನಡೆಸಲಿದ್ದಾರೆ. ಅವರಿಗೆ ದೆಹಲಿಯ ಸಕರಿಯಾ ಮತ್ತು ನವದೀಪ್ ಸೈನಿ ಬೆಂಬಲ ನೀಡಲಿದ್ದಾರೆ.
ಎಸ್‌ಎಸ್ ದಾಸ್, ಎಸ್ ಶರತ್, ಸಲೀಲ್ ಅಂಕೋಲಾ ಮತ್ತು ಸುಬ್ರತಾ ಬ್ಯಾನರ್ಜಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಉತ್ತರ ಪ್ರದೇಶದ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಮತ್ತು ಪಂಜಾಬ್ ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೇಯವರನ್ನು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಹೆಸರಿಸಿದೆ.
ನಿಯಮಿತ ನಾಯಕ ಆದಿತ್ಯ ಶ್ರೀವಾಸ್ತವ ಅನುಪಸ್ಥಿತಿಯಲ್ಲಿ ಮಧ್ಯಪ್ರದೇಶ ತಂಡವನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹಿಮಾಂಶು ಮೈತ್ರಿ ಮುನ್ನಡೆಸಲಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ರಣಜಿ ಟ್ರೋಫಿ ಗೆದ್ದ ತಂಡದಲ್ಲಿ ಮಧ್ಯಪ್ರದೇಶ ರಜತ್ ಪಾಟಿದಾರ್, ವೆಂಕಟೇಶ್ ಅಯ್ಯರ್, ಅವೇಶ್ ಖಾನ್, ಶುಭಂ ಶರ್ಮಾ ಮತ್ತು ಯಶ್ ದುಬೆ ಅವರನ್ನು ಸೇರಿಸಿದೆ.
ರೆಸ್ಟ್ ಆಫ್ ಇಂಡಿಯಾ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಸುದೀಪ್ ಕುಮಾರ್ ಘರಾಮಿ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಹಾರ್ವಿಕ್ ದೇಸಾಯಿ, ಮುಖೇಶ್ ಕುಮಾರ್, ಅತಿತ್ ಸೇಠ್, ಚೇತನ್ ಸಕಾರಿಯಾ, ನವದೀಪ್ ಸೈನಿ, ಉಪೇಂದ್ರ ಯಾದವ್, ಮಯಾಂಕ್ ಮಾರ್ಕಂಡೇಯ, ಸೌರಭ್ ಕುಮಾರ್, ಆಕಾಶ್ ದೀಪ್, ಬಿ ಇಂದರ್‌ಜೀತ್, ಬಿ. , ಪುಲ್ಕಿತ್ ನಾರಂಗ್ ಮತ್ತು ಯಶ್ ಧುಲ್.
ಇದನ್ನೂ ಓದಿ: ಏಷ್ಯನ್ ಗೇಮ್ಸ್ ಮ್ಯಾರಥಾನ್’ಗೆ ಕರ್ನಾಟಕದ ಬೆಳ್ಳಿಯಪ್ಪ ಸೇರಿ ಭಾರತದ ಮೂವರು ಓಟಗಾರರು ಎಂಟ್ರಿ
ಮಧ್ಯಪ್ರದೇಶ ತಂಡ: ಹಿಮಾಂಶು ಮಂತ್ರಿ (ನಾಯಕ), ರಜತ್ ಪಾಟಿದಾರ್, ಯಶ್ ದುಬೆ, ಹರ್ಷ್ ಗಾವ್ಲಿ, ಶುಭಂ ಶರ್ಮಾ, ವೆಂಕಟೇಶ್ ಅಯ್ಯರ್, ಅಕ್ಷತ್ ರಘುವಂಶಿ, ಅಮನ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸರಾಂಶ್ ಜೈನ್, ಅವೇಶ್ ಖಾನ್, ಅಂಕಿತ್ ಕುಶ್ವಾಹ, ಗೌರವ್ ಅಗರ್ವಾಲ್, ಅನುಭವ್ ಅಗರ್ವಾಲ್, ಹಿರ್ವಾನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ