IND vs AUS: ಕೇವಲ 4 ದಿನಗಳಲ್ಲಿ ಕೊನೆಯಾಗಲಿದೆ ಈ ಸ್ಟಾರ್ ಕ್ರಿಕೆಟಿಗನ ವೃತ್ತಿ ಜೀವನ!

IND vs AUS 3rd Test, KL Rahul Stats: ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಸಂಕಷ್ಟದ ಹಾದಿಯಲ್ಲಿ ಸಾಗುತ್ತಿದ್ದಾರೆ. ಪ್ರಸಕ್ತ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಅವರು ಇಲ್ಲಿಯವರೆಗೆ ಫ್ಲಾಪ್ ಎಂದು ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಕೆಲವು ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರಿಂದ ತೀವ್ರ ಟೀಕೆಗೂ ಗುರಿಯಾಗುತ್ತಿದ್ದಾರೆ. ಕೆಲ ಸಮಯದಿಂದ ರಾಹುಲ್ ಬ್ಯಾಟ್ ಮೌನವಾಗಿದ್ದು, ರನ್ ಗಳಿಸಲು ಪರದಾಡುತ್ತಿರುವಂತೆ ಕಾಣುತ್ತಿದೆ. ಕಳೆದ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ, ರಾಹುಲ್ ಸರಾಸರಿ ಕೇವಲ 12.5 ಆಗಿತ್ತು.

Written by - Bhavishya Shetty | Last Updated : Feb 24, 2023, 11:08 PM IST
    • ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಸಂಕಷ್ಟದ ಹಾದಿಯಲ್ಲಿ ಸಾಗುತ್ತಿದ್ದಾರೆ.
    • ಪ್ರಸಕ್ತ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಅವರು ಇಲ್ಲಿಯವರೆಗೆ ಫ್ಲಾಪ್ ಎಂದು ಸಾಬೀತುಪಡಿಸಿದ್ದಾರೆ.
    • ಇದಕ್ಕಾಗಿ ಕೆಲವು ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರಿಂದ ತೀವ್ರ ಟೀಕೆಗೂ ಗುರಿಯಾಗುತ್ತಿದ್ದಾರೆ.
IND vs AUS: ಕೇವಲ 4 ದಿನಗಳಲ್ಲಿ ಕೊನೆಯಾಗಲಿದೆ ಈ ಸ್ಟಾರ್ ಕ್ರಿಕೆಟಿಗನ ವೃತ್ತಿ ಜೀವನ! title=
KL Rahul

IND vs AUS 3rd Test, KL Rahul Stats: ಆರಂಭಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಕಾಯ್ದುಕೊಂಡಿದೆ. ಸರಣಿಯ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಇಂದೋರ್‌ನಲ್ಲಿ ಆರಂಭವಾಗಲಿದೆ. ಉಭಯ ತಂಡಗಳು ಮುಖಾಮುಖಿಯಾಗಲು ಇನ್ನು 4 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಪಂದ್ಯದ ಮೊದಲು, ನಾಯಕ ರೋಹಿತ್ ಶರ್ಮಾ ಅವರು ಟೆಸ್ಟ್ ಮಾದರಿಯಲ್ಲಿ ತಂಡದ ಆಟಗಾರನ ಭವಿಷ್ಯದ ಬಗ್ಗೆ ನಿರ್ಧರಿಸಲಿದ್ದಾರೆ.

ಇದನ್ನೂ ಓದಿ:  Virat Kohli Bungalow: ಐಷಾರಾಮಿ ಬಂಗಲೆ ಖರೀದಿಸಿದ ವಿರಾಟ್ ಕೊಹ್ಲಿ: ಈ ಮನೆಯ ಬೆಲೆಗೆ ಬರುತ್ತೆ 100 ಕಾರುಗಳು!

ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಸಂಕಷ್ಟದ ಹಾದಿಯಲ್ಲಿ ಸಾಗುತ್ತಿದ್ದಾರೆ. ಪ್ರಸಕ್ತ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಅವರು ಇಲ್ಲಿಯವರೆಗೆ ಫ್ಲಾಪ್ ಎಂದು ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಕೆಲವು ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರಿಂದ ತೀವ್ರ ಟೀಕೆಗೂ ಗುರಿಯಾಗುತ್ತಿದ್ದಾರೆ. ಕೆಲ ಸಮಯದಿಂದ ರಾಹುಲ್ ಬ್ಯಾಟ್ ಮೌನವಾಗಿದ್ದು, ರನ್ ಗಳಿಸಲು ಪರದಾಡುತ್ತಿರುವಂತೆ ಕಾಣುತ್ತಿದೆ. ಕಳೆದ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ, ರಾಹುಲ್ ಸರಾಸರಿ ಕೇವಲ 12.5 ಆಗಿತ್ತು.

ರೋಹಿತ್ ಮತ್ತು ದ್ರಾವಿಡ್ ಮಹತ್ವದ ನಿರ್ಧಾರ:

ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಇಬ್ಬರೂ ಈಗ ಕೆಎಲ್ ರಾಹುಲ್ ಅವರ ಟೆಸ್ಟ್ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಒಂದು ವೇಳೆ ಅವರು ಹೊರಗೆ ಹೋದರೆ ಶುಭಮನ್ ಗಿಲ್‌ಗೆ ಪ್ಲೇ-11ರಲ್ಲಿ ಅವಕಾಶ ಸಿಗಬಹುದು. ಹೀಗಿರುವಾಗ ಇಂದೋರ್ ಟೆಸ್ಟ್ ನಲ್ಲಿ ಗಿಲ್ ಭರ್ಜರಿ ಇನ್ನಿಂಗ್ಸ್ ಆಡಿದರೆ ನಾಲ್ಕನೇ ಟೆಸ್ಟ್ ನಲ್ಲೂ ಆಡುವುದು ಖಚಿತವಾಗಲಿದೆ. ಅಷ್ಟೇ ಅಲ್ಲ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ (ಡಬ್ಲ್ಯುಟಿಸಿ ಫೈನಲ್) ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.

ಕೆಎಲ್ ರಾಹುಲ್ ಕಳೆದ 10 ಇನ್ನಿಂಗ್ಸ್‌ಗಳಲ್ಲಿ 8, 10, 12, 22, 23, 10, 2, 20, 17 ಮತ್ತು 1 ರನ್ ಗಳಿಸಿದ್ದಾರೆ. ಇದರಿಂದಾಗಿ ಪ್ಲೇಯಿಂಗ್-11ರಲ್ಲಿ ಅವರ ಸ್ಥಾನದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಶುಭಮನ್ ಗಿಲ್ ಅವರನ್ನು ಇಲೆವೆನ್‌ಗೆ ಸೇರಿಸಿಕೊಳ್ಳಬೇಕೆಂಬ ನಿರಂತರ ಬೇಡಿಕೆಯಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟಿಕೆಟ್ ಪಡೆಯಲು, ಇಂದೋರ್‌ನಲ್ಲಿ ನಡೆಯಲಿರುವ ಪಂದ್ಯವನ್ನು ಭಾರತ ಗೆಲ್ಲುವುದು ಅವಶ್ಯಕ.

ಇದನ್ನೂ ಓದಿ: IND vs AUS: ಇಂದೋರ್ ಟೆಸ್ಟ್’ನಿಂದ ಆಸೀಸ್ ನಾಯಕ ಕಮಿನ್ಸ್ ಔಟ್: ಆದ್ರೆ ವಿಶ್ವದ ಈ ಮಾರಕ ಬೌಲರ್ ಪಾದಾರ್ಪಣೆ!

ದೆಹಲಿ ಟೆಸ್ಟ್ ನಂತರ ಸರಣಿಯ ಉಳಿದ 2 ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಗ್ಗೆ ದೊಡ್ಡ ಸೂಚನೆ ನೀಡಿದೆ. ಬಿಸಿಸಿಐ ಸರಣಿಯ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದಾಗ ಕೆಎಲ್ ರಾಹುಲ್ ಹೆಸರಿನ ಮುಂದೆ ಉಪನಾಯಕ ಎಂದು ಬರೆದಿರಲಿಲ್ಲ. ಇದರ ಜೊತೆಗೆ ಪ್ಲೇಯಿಂಗ್-11 ರಲ್ಲಿ ಉಳಿಸಿಕೊಳ್ಳುವ ನಿರ್ಧಾರವನ್ನು ಇಂದೋರ್ ಟೆಸ್ಟ್‌ಗೆ ಮೊದಲು ತೆಗೆದುಕೊಳ್ಳಬೇಕಾಗಿದೆ ಎಂಬುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ಕಣ್ಣು ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಮೇಲೆ ನೆಟ್ಟಿದ್ದು, ಅವರು ರಾಹುಲ್ ವೃತ್ತಿಜೀವನದ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News