ಶಿವಂ ದುಬೆ ಎಂಟ್ರಿಯಾಗುತ್ತಿದ್ದಂತೆ ಅಂತ್ಯವಾಯ್ತು ಈ 3 ಆಟಗಾರರ ವೃತ್ತಿಜೀವನ! T20 ವಿಶ್ವಕಪ್’ನಲ್ಲಿಲ್ಲ ಇವರಿಗೆ ಸ್ಥಾನ

Shivam Dubey Become Problem For 3 Players: ಶಿವಂ ದುಬೆ ಅವರ ಪ್ರದರ್ಶನದಿಂದ ಭಾರತ ತಂಡದ ಆಯ್ಕೆಗಾರರು ಭಾರೀ ಖುಷಿ ವ್ಯಕ್ತಪಡಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಶ್ರೇಷ್ಠ ಆಲ್‌ರೌಂಡರ್ ಸಿಕ್ಕಿದ್ದಾರೆ ಎಂದು ಕೋಟ್ಯಂತರ ಭಾರತೀಯ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. 

Written by - Bhavishya Shetty | Last Updated : Apr 6, 2024, 03:18 PM IST
    • ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಶಿವಂ ದುಬೆ ಅತ್ಯುತ್ತಮ ಫಾರ್ಮ್‌’ನಲ್ಲಿದ್ದಾರೆ
    • ದುಬೆ ಅವರ ಪ್ರದರ್ಶನದಿಂದ ಭಾರತ ತಂಡದ ಆಯ್ಕೆಗಾರರು ಭಾರೀ ಖುಷಿ ವ್ಯಕ್ತಪಡಿಸಿದ್ದಾರೆ
    • ಶಿವಂ ಅವರ ಪ್ರದರ್ಶನವು ಭಾರತದ ಮೂವರು ಆಟಗಾರರ ಒತ್ತಡವನ್ನು ಹೆಚ್ಚಿಸಿದೆ.
ಶಿವಂ ದುಬೆ ಎಂಟ್ರಿಯಾಗುತ್ತಿದ್ದಂತೆ ಅಂತ್ಯವಾಯ್ತು ಈ 3 ಆಟಗಾರರ ವೃತ್ತಿಜೀವನ! T20 ವಿಶ್ವಕಪ್’ನಲ್ಲಿಲ್ಲ ಇವರಿಗೆ ಸ್ಥಾನ  title=
Shivam Dube

Shivam Dubey Become Problem For 3 Players: ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಶಿವಂ ದುಬೆ ಅತ್ಯುತ್ತಮ ಫಾರ್ಮ್‌’ನಲ್ಲಿದ್ದಾರೆ. ಶಿವಂ ತಮ್ಮ ಸ್ಥಿರ ಬ್ಯಾಟಿಂಗ್ ಮೂಲಕ ತಂಡಕ್ಕೆ ಪ್ರಮುಖ ಕೊಡುಗೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಆರ್‌ ಸಿ ಬಿ ತಂಡದಲ್ಲಿದ್ದ ದುಬೆ ಉತ್ತಮ ಪ್ರದರ್ಶನ ನೀಡಲಿ ಸಾಧ್ಯವಾಗಲಿಲ್ಲ. ಆದರೆ ಈಗ ಅದೇ ಆಟಗಾರ ಸಿ ಎಸ್ ಕೆ ತಂಡದಲ್ಲಿ ಅಬ್ಬರಿಸುತ್ತಿದ್ದಾರೆ.

ಶಿವಂ ದುಬೆ ಅವರ ಪ್ರದರ್ಶನದಿಂದ ಭಾರತ ತಂಡದ ಆಯ್ಕೆಗಾರರು ಭಾರೀ ಖುಷಿ ವ್ಯಕ್ತಪಡಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಶ್ರೇಷ್ಠ ಆಲ್‌ರೌಂಡರ್ ಸಿಕ್ಕಿದ್ದಾರೆ ಎಂದು ಕೋಟ್ಯಂತರ ಭಾರತೀಯ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಶಿವಂ ಅವರ ಪ್ರದರ್ಶನವು ಭಾರತದ ಮೂವರು ಆಟಗಾರರ ಒತ್ತಡವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಮುರಿದುಬಿತ್ತು 14 ವರ್ಷಗಳ ಒಡನಾಟ! ಮುಂಬೈ ಇಂಡಿಯನ್ಸ್ ತೊರೆದು ಈ ತಂಡ ಸೇರಲು ರೋಹಿತ್ ಶರ್ಮಾ ನಿರ್ಧಾರ!

ಈ ಐಪಿಎಲ್ ಋತುವಿನಲ್ಲಿ ಶಿವಂ ದುಬೆ ಚೆನ್ನೈ ಸೂಪರ್ ಕಿಂಗ್ಸ್ ಪರ 4 ಪಂದ್ಯಗಳನ್ನು ಆಡಿದ್ದಾರೆ. ಈ 4 ಪಂದ್ಯಗಳಲ್ಲಿ 49.33 ಸರಾಸರಿಯಲ್ಲಿ 148 ರನ್ ಗಳಿಸಿದ್ದಾರೆ ಮತ್ತು 160 ರ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಅವಧಿಯಲ್ಲಿ, ಅರ್ಧಶತಕ ಇನ್ನಿಂಗ್ಸ್‌ ಆಡಿರುವ ದುಬೆ, 9 ಬೌಂಡರಿ ಮತ್ತು 10 ಸಿಕ್ಸರ್‌ ಕೂಡ ಸಿಡಿಸಿದ್ದಾರೆ.

ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲೂ ಶಿವಂ ಕೇವಲ 24 ಎಸೆತಗಳಲ್ಲಿ 45 ರನ್‌’ಗಳ ಇನಿಂಗ್ಸ್‌ ಆಡಿದ್ದರು. ಇದು ಭಾರತದ ಮೂವರು ಆಟಗಾರರ ಟೆನ್ಷನ್ ಹೆಚ್ಚಿಸಿದೆ. ಶಿವಂ ಐಸಿಸಿ ಟಿ20 ವಿಶ್ವಕಪ್‌’ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದರೆ ಈ 3 ಆಟಗಾರರು ತಮ್ಮ ವೃತ್ತಿ ಜೀವನವನ್ನು ಕೊನೆಗೊಳಿಸುವುದು ಖಚಿತ.

ದುಬೆ ಪ್ರದರ್ಶನ ನೀಡುತ್ತಿರುವ ರೀತಿ, ವಿಶ್ವಕಪ್‌’ನಲ್ಲಿ ಅವರ ಆಯ್ಕೆ ಖಚಿತ ಎಂದು ಪರಿಗಣಿಸಲಾಗಿದೆ. ಭಾರತ ತಂಡದಲ್ಲಿ ಶಿವಂ ದುಬೆ ಅವರನ್ನು ಸೇರಿಸಿಕೊಂಡರೆ 3 ಆಟಗಾರರ ನಿರೀಕ್ಷೆ ಹುಸಿಯಾಗಲಿದೆ. ಈ ಪಟ್ಟಿಯಲ್ಲಿ ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಹೆಸರುಗಳಿವೆ.

ಇದನ್ನೂ ಓದಿ: White Hair Remedy: ಅಪ್ಪಿತಪ್ಪಿಯೂ ಬಿಳಿ ಕೂದಲನ್ನು ಕೀಳಬೇಡಿ.. ಈ ಸುಲಭ ಮನೆಮದ್ದನ್ನು ಟ್ರೈ ಮಾಡಿ ಶಾಶ್ವತವಾಗಿ ಕಪ್ಪಾಗುತ್ತೆ!!

ಶಾರ್ದೂಲ್ ಠಾಕೂರ್ ಅವರನ್ನು ಐಸಿಸಿ ವಿಶ್ವಕಪ್ 2023 ಗಾಗಿ ಭಾರತೀಯ ತಂಡದಲ್ಲಿ ಸೇರಿಸಲಾಯಿತು, ಆದರೆ ಅವರ ಪ್ರದರ್ಶನ ವಿಶೇಷವಾಗಿರಲಿಲ್ಲ. ಶಿವಂ ದುಬೆ ಕೂಡ ಶಾರ್ದೂಲ್ ಅವರಂತೆ ಆಲ್ ರೌಂಡರ್ ಆಟಗಾರ. ಮತ್ತೊಬ್ಬ ಆಟಗಾರ ಶ್ರೇಯಸ್ ಅಯ್ಯರ್. ಇನ್ನು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮೂರನೇ ಆಟಗಾರ ಕೆಎಲ್ ರಾಹುಲ್. ರಾಹುಲ್ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚು ಫಾರ್ಮ್‌ನಲ್ಲಿರುವಂತೆ ಕಾಣುತ್ತಿಲ್ಲ. ಹೀಗಿರುವಾಗ ವಿಶ್ವಕಪ್ ತಂಡದಲ್ಲಿ ರಾಹುಲ್ ಸ್ಥಾನ ಕೂಡ ಕಷ್ಟಕರ ಎಂದನಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News