ಅಂಧರ ಕ್ರಿಕೆಟ್ ಸಂಸ್ಥೆಗೆ ಮಾನ್ಯತೆ ನೀಡಲು ಬಿಸಿಸಿಐಗೆ ಸಚಿನ್ ಪತ್ರ

    

Last Updated : Feb 8, 2018, 03:57 PM IST
ಅಂಧರ ಕ್ರಿಕೆಟ್ ಸಂಸ್ಥೆಗೆ ಮಾನ್ಯತೆ ನೀಡಲು ಬಿಸಿಸಿಐಗೆ ಸಚಿನ್ ಪತ್ರ  title=

ಮುಂಬೈ: ಭಾರತದ ಅಂಧರ ಕ್ರಿಕೆಟ್ ಸಂಸ್ಥೆಗೆ ಮಾನ್ಯತೆ ನೀಡಿ ಬಿಸಿಸಿಐನ ಪಿಂಚಣಿ ಯೋಜನೆಯಡಿಯಲ್ಲಿ ಅಂದ ಆಟಗಾರರನ್ನು ಸೇರಿಸಿ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮನವಿ ಮಾಡಿದ್ದಾರೆ. 

ಇತ್ತೀಚಿಗೆ ಶಾರ್ಜಾದಲ್ಲಿ ಪಾಕಿಸ್ತಾನ್ ತಂಡವನ್ನು ಸೋಲಿಸಿ ತಮ್ಮ ಅಂಧ  ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿದ ನಂತರ ಅಂಧ ಕ್ರಿಕೆಟ್ ಆಟಗಾರರು ತಮ್ಮ ಕ್ರಿಕೆಟ್ ಸಂಸ್ಥೆಗೆ ಮಾನ್ಯತೆ ನೀಡುವಂತೆ ಆಗ್ರಹಿಸಿದ್ದರು. ಈಗ ಈ ನಿಟ್ಟಿನಲ್ಲಿ ಸಚಿನ ತೆಂಡೂಲ್ಕರ್ ರವರು ನಿರ್ವಾಹಕ ಸಮಿತಿಯ ಅಧ್ಯಕ್ಷ ವಿನೋದ್ ರೈ ಅವರಿಗೆ ಬರೆದ ಪತ್ರದಲ್ಲಿ,  "ಅಂದ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಭಾರತೀಯ ತಂಡವು ಸತತ ನಾಲ್ಕನೆಯ ಬಾರಿಗೆ ವಿಶ್ವಕಪ್ ನ್ನು ಎತ್ತಿ ಹಿಡಿದಿದೆ ಆದ್ದರಿಂದ, ಭಾರತದ ಅಂಧರ ಕ್ರಿಕೆಟ್ ಅಸೋಸಿಯೇಷನ್ ಗೆ ಬಿಸಿಸಿಐನಿಂದ ಮಾನ್ಯತೆ ನೀಡಬೇಕೆಂದು  ಕೇಳಿಕೊಳ್ಳುತ್ತೇನೆ" ಎಂದು ಸಚಿನ್  ಪತ್ರ ಬರೆದಿದ್ದಾರೆ.

ಮಾನ್ಯತೆ ನಿಜವಾಗಿಯೂ ಕ್ರೀಡೆಯಲ್ಲಿ ಅವರ ಉತ್ಸಾಹದ ಅಂಗೀಕಾರವಾಗಿದೆಯೆಂದು ಒತ್ತಾಯಿಸಿ, ಬಿಸಿಸಿಐಯನ್ನು ಬಿಸಿಸಿಐ ಪಿಂಚಣಿ ಯೋಜನೆಯಡಿ ತಮ್ಮ ದೀರ್ಘಕಾಲೀನ ಆರ್ಥಿಕ ಭದ್ರತೆಗಾಗಿ ಬಿ.ಸಿ.ಸಿ.ಐ ಅಂದರ ಕ್ರಿಕೆಟ್ ಗೆ ಮಾನ್ಯತೆ ನೀಡುವುದರಿಂದಾಗಿ ಅವರ ಕ್ರಿಕೆಟ್ ಸ್ಪೂರ್ತಿಯನ್ನು ಅದು ಇನ್ನು ಅಧಿಕಗೊಳಿಸುತ್ತದೆ.ಅಲ್ಲದೆ ಅವರ ಜೀವನಕ್ಕಾಗಿ ಪಿಂಚಣಿಯಂತ ಯೋಜನೆ ಸಹಾಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ. 

Trending News