Watch: ಕೊನೆಯ ಪಂದ್ಯ ಎನ್ನುತ್ತಾ ಬಿಕ್ಕಿಬಿಕ್ಕಿ ಅತ್ತ ಸಾನಿಯಾ: ಮೂಗುತಿ ಸುಂದರಿಯ ಕಣ್ಣೀರಿಗೆ ಕರಗಿತು ಟೆನ್ನಿಸ್ ಲೋಕ

Sania Mirza emotional goodbye: ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಮೊದಲ ಸೆಟ್‌ನಲ್ಲಿ ಕಠಿಣ ಹೋರಾಟ ನೀಡಿದರೂ ಸೋಲನುಭವಿಸಿತು. ಭಾರತದ ಜೋಡಿ ಮೊದಲ ಸೆಟ್‌ನಲ್ಲಿ ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಾಟೋಸ್ ಜೋಡಿ ವಿರುದ್ಧ ಮೊದಲ ಸೆಟ್‌ನಲ್ಲಿ 6-7 ಅಂತರದಿಂದ ಸೋಲನುಭವಿಸಬೇಕಾಯಿತು. ಆ ಬಳಿಕ ನಡೆದ ಎರಡನೇ ಸೆಟ್‌ನಲ್ಲಿ 6-2 ಅಂತರದಿಂದ ಸೋಲು ಕಾಣುವ ಮೂಲಕ ಪಂದ್ಯ ಕೊನೆಗೊಂಡಿತು.

Written by - Bhavishya Shetty | Last Updated : Jan 27, 2023, 01:43 PM IST
    • ಭಾರತದ ಶ್ರೇಷ್ಠ ಟೆನಿಸ್ ಆಟಗಾರ್ತಿಯರಲ್ಲಿ ಸಾನಿಯಾ ಮಿರ್ಜಾ ಕೂಡ ಒಬ್ಬರು ಎಂದು ಪರಿಗಣಿಸಲಾಗಿದೆ
    • ತಮ್ಮ ವೃತ್ತಿಜೀವನದ ಕೊನೆಯ ಗ್ರ್ಯಾನ್‌ಸ್ಲಾಂನಲ್ಲಿ ಸೋತ ನಂತರ ವಿದಾಯ ಹೇಳಿದ್ದಾರೆ
    • ಪ್ರಶಸ್ತಿಯೊಂದಿಗೆ ಗ್ರ್ಯಾನ್ ಸ್ಲಾಮ್ ಕರಿಯರ್ ಅಂತ್ಯಗೊಳಿಸುವ ಸಾನಿಯಾ ಕನಸು ನನಸಾಗಲಿಲ್ಲ
Watch: ಕೊನೆಯ ಪಂದ್ಯ ಎನ್ನುತ್ತಾ ಬಿಕ್ಕಿಬಿಕ್ಕಿ ಅತ್ತ ಸಾನಿಯಾ: ಮೂಗುತಿ ಸುಂದರಿಯ ಕಣ್ಣೀರಿಗೆ ಕರಗಿತು ಟೆನ್ನಿಸ್ ಲೋಕ  title=
Sania Mirza

Sania Mirza emotional goodbye: ಭಾರತದ ಶ್ರೇಷ್ಠ ಟೆನಿಸ್ ಆಟಗಾರ್ತಿಯರಲ್ಲಿ ಸಾನಿಯಾ ಮಿರ್ಜಾ ಕೂಡ ಒಬ್ಬರು ಎಂದು ಪರಿಗಣಿಸಲಾಗಿದೆ, ಆದರೆ ಅವರು ತಮ್ಮ ವೃತ್ತಿಜೀವನದ ಕೊನೆಯ ಗ್ರ್ಯಾನ್‌ಸ್ಲಾಂನಲ್ಲಿ ಸೋತ ನಂತರ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯನ್ ಓಪನ್ 2023 ರ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿಯನ್ನು ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಾಟೋಸ್ 7-6 ಮತ್ತು 6-2 ರಿಂದ ಸೋಲಿಸಿದರು. ಇದು ಸಾನಿಯಾ ಅವರ ಕೊನೆಯ ಗ್ರ್ಯಾನ್ ಸ್ಲಾಮ್ ಆಗಿತ್ತು. ಯುಎಇಯಲ್ಲಿ ಡಬ್ಲ್ಯುಟಿಎ 1000 ಚಾಂಪಿಯನ್‌ಶಿಪ್ ಆಡಿದ ಬಳಿಕ ಟೆನಿಸ್‌ಗೆ ವಿದಾಯ ಹೇಳುವುದಾಗಿ ಸಾನಿಯಾ ಈ ಹಿಂದೆ ಘೋಷಿಸಿದ್ದರು.

ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಮೊದಲ ಸೆಟ್‌ನಲ್ಲಿ ಕಠಿಣ ಹೋರಾಟ ನೀಡಿದರೂ ಸೋಲನುಭವಿಸಿತು. ಭಾರತದ ಜೋಡಿ ಮೊದಲ ಸೆಟ್‌ನಲ್ಲಿ ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಾಟೋಸ್ ಜೋಡಿ ವಿರುದ್ಧ ಮೊದಲ ಸೆಟ್‌ನಲ್ಲಿ 6-7 ಅಂತರದಿಂದ ಸೋಲನುಭವಿಸಬೇಕಾಯಿತು. ಆ ಬಳಿಕ ನಡೆದ ಎರಡನೇ ಸೆಟ್‌ನಲ್ಲಿ 6-2 ಅಂತರದಿಂದ ಸೋಲು ಕಾಣುವ ಮೂಲಕ ಪಂದ್ಯ ಕೊನೆಗೊಂಡಿತು.

ಇದನ್ನೂ ಓದಿ: ಕೆ ಎಲ್ ರಾಹುಲ್ ಮದುವೆಗೆ ವಿರಾಟ್ ಮತ್ತು ಧೋನಿ ನೀಡಿದ ಗಿಫ್ಟ್ ಮೌಲ್ಯ ಎಷ್ಟು ಗೊತ್ತಾ ?

ಸಾನಿಯಾ ಮಿರ್ಜಾ ಕನಸು ಭಗ್ನ:

ಪ್ರಶಸ್ತಿಯೊಂದಿಗೆ ಗ್ರ್ಯಾನ್ ಸ್ಲಾಮ್ ಕರಿಯರ್ ಅಂತ್ಯಗೊಳಿಸುವ ಸಾನಿಯಾ ಕನಸು ನನಸಾಗಲಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಾನಿಯಾ ತಮ್ಮ ವೃತ್ತಿಜೀವನದಲ್ಲಿ ಮೂರು ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದು ಆಸ್ಟ್ರೇಲಿಯನ್ ಓಪನ್ 2009, ಫ್ರೆಂಚ್ ಓಪನ್ 2012 ಮತ್ತು US ಓಪನ್ 2014 ಪ್ರಶಸ್ತಿಗಳನ್ನು ಒಳಗೊಂಡಿದೆ.

ಪಂದ್ಯದ ಬಳಿಕ ಭಾವುಕರಾದ ಸಾನಿಯಾ:

ಪಂದ್ಯದ ನಂತರ ಸಾನಿಯಾ ಭಾವುಕರಾಗಿದ್ದು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. “ಇದು ಸಂತೋಷದ ಕಣ್ಣೀರು. ನಾನು ಇನ್ನೂ ಎರಡು ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕಾಗಿದೆ. ಆದರೆ ನನ್ನ ವೃತ್ತಿಪರ ವೃತ್ತಿಜೀವನವು ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಗಿ, ಇಲ್ಲೇ ಕೊನೆಯಾಗಲಿದೆ” ಎಂದರು.

ಸಾನಿಯಾ ಮಿರ್ಜಾ, “ನಾನು 2005 ರಲ್ಲಿ 18 ನೇ ವಯಸ್ಸಿನಲ್ಲಿ ಇಲ್ಲಿಗೆ ಬಂದೆ. ನಾನು ಸೆರೆನಾ ವಿಲಿಯಮ್ಸ್ ವಿರುದ್ಧ ಆಡಿದ್ದೇನೆ. ನಾನು ಇಲ್ಲಿಗೆ ಬಂದು ಕೆಲವು ಪಂದ್ಯಾವಳಿಗಳನ್ನು ಗೆದ್ದು, ಕೆಲವು ಉತ್ತಮ ಫೈನಲ್‌ಗಳನ್ನು ಆಡುವ ಅದೃಷ್ಟವನ್ನು ಸಹ ಪಡೆದಿದ್ದೆ” ಎಂದು ಹೇಳಿದ್ದಾರೆ.

"ರಾಡ್ ಲೇವರ್ ಅರೆನಾ ಖಂಡಿತವಾಗಿಯೂ ನನ್ನ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನನ್ನ ಗ್ರ್ಯಾಂಡ್ ಸ್ಲಾಮ್ ವೃತ್ತಿಜೀವನವನ್ನು ಕೊನೆಗೊಳಿಸಲು ಇದಕ್ಕಿಂತ ಉತ್ತಮವಾದ ಸ್ಥಳ ಇರಲಿಲ್ಲ" ಎಂದು ಅವರು ಹೇಳಿದರು. ಅವರ ಮಗ ಇಜಾನ್ ಮತ್ತು ಇತರ ಕುಟುಂಬ ಸದಸ್ಯರ ಉಪಸ್ಥಿತಿಯು ಈ ಸಂದರ್ಭವನ್ನು ವಿಶೇಷವಾಗಿಸಿತು.

ಇದನ್ನೂ ಓದಿ: IND vs NZ: ಪಾಂಡ್ಯರಿಂದ ಸಿಗುತ್ತಾ ಈ ಆಟಗಾರನಿಗೆ ಅವಕಾಶ: ಒಂದೇ ಒಂದು ಚಾನ್ಸ್ ಗಾಗಿ ಹಾತೊರೆಯುತ್ತಿದ್ದಾರೆ ಈ ಕ್ರಿಕೆಟರ್!

“ನನ್ನ ಮಗನ ಮುಂದೆ ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಆಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಇದು ನನಗೆ ವಿಶೇಷವಾಗಿದೆ. ನನ್ನ ನಾಲ್ಕು ವರ್ಷದ ಮಗ ಇಲ್ಲಿದ್ದಾನೆ ಮತ್ತು ನನ್ನ ಪೋಷಕರು ಇಲ್ಲಿದ್ದಾರೆ. ರೋಹನ್ ಅವರ ಪತ್ನಿ, ನನ್ನ ತರಬೇತುದಾರ ಮತ್ತು ನನ್ನ ಕುಟುಂಬದ ಸದಸ್ಯರು ಆಸ್ಟ್ರೇಲಿಯಾದಲ್ಲಿದ್ದಾರೆ, ಇದರಿಂದಾಗಿ ನಾನು ಇದನ್ನು ಮನೆಯಂತೆ ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News