Team India: ರೋಹಿತ್ ಬಳಿಕ ಈ ನಾಲ್ವರು ಭಾರತ ತಂಡದ ಮುಂದಿನ ನಾಯಕರಾಗಬಹುದು!

ಭಾರತ ಕ್ರಿಕೆಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಹೆಚ್ಚು ಸಮಯ ಮುಂದುವರಿಯುವುದಿಲ್ಲ. ರೋಹಿತ್ ಬಳಿಕ ಯಾರು ಟೀಂ ಇಂಡಿಯಾ ನಾಯಕರಾಗುತ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿದೆ.

Written by - Puttaraj K Alur | Last Updated : Aug 2, 2022, 05:33 PM IST
  • ರೋಹಿತ್ ಶರ್ಮಾ ಬಳಿ ಯಾರಾಗ್ತಾರೆ ಟೀಂ ಇಂಡಿಯಾದ ನಾಯಕ..?
  • ಟೀಂ ಇಂಡಿಯಾದ ಸಾರಥ್ಯ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ ನಾಲ್ವರು
  • ರಿಷಭ್ ಪಂತ್, ಶುಭಮನ್ ಗಿಲ್, ಕೆ.ಎಲ್.ರಾಹುಲ್ & ಹಾರ್ದಿಕ್ ಪಾಂಡ್ಯಗೆ ಅವಕಾಶ
Team India: ರೋಹಿತ್ ಬಳಿಕ ಈ ನಾಲ್ವರು ಭಾರತ ತಂಡದ ಮುಂದಿನ ನಾಯಕರಾಗಬಹುದು! title=
ಯಾರಾಗ್ತಾರೆ ಟೀಂ ಇಂಡಿಯಾದ ನಾಯಕ?

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಹೆಚ್ಚು ಸಮಯ ಮುಂದುವರಿಯುವುದಿಲ್ಲ. ಮುಂದೊಂದು ದಿನ ರೋಹಿತ್ ತಮ್ಮ ನಾಯಕತ್ವಕ್ಕೆ ಗುಡ್ ಬೈ ಹೇಳಬಹುದು. ಅವರ ಬಳಿಕ ಯಾರು ಟೀಂ ಇಂಡಿಯಾ ನಾಯಕರಾಗುತ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿದೆ. ಭಾರತೀಯ ಕ್ರಿಕೆಟ್ ತಂಡವು ನಾಲ್ವರು ಬಲಿಷ್ಠ ಆಟಗಾರರನ್ನು ಹೊಂದಿದೆ. ರೋಹಿತ್ ಬಳಿಕ ಇವರೇ ಟೀಂ ಇಂಡಿಯಾದ ಸಾರಥ್ಯ ವಹಿಸಿಕೊಳ್ತಾರೆ ಅಂತಾ ಹೇಳಲಾಗುತ್ತಿದೆ.

ಏಕದಿನ, ಟೆಸ್ಟ್ ಮತ್ತು ಟಿ-20 ನಾಯಕತ್ವಕ್ಕೆ ರೋಹಿತ್ ಶರ್ಮಾ ಗುಡ್ ಬೈ ಹೇಳಿದ ನಂತರ ಈ ನಾಲ್ವರು ಆಟಗಾರರು ನಾಯಕನ ಕ್ಯಾಪ್ ತೊಡಲಿದ್ದಾರೆ. ಈ ನಾಲ್ವರು ಬ್ಯಾಟ್ಸ್‌ಮನ್‌ಗಳು ಸಹ ಬಿರುಸಿನ ಬ್ಯಾಟಿಂಗ್‌ನಲ್ಲಿ ಪರಿಣತರು. ರೋಹಿತ್ ಶರ್ಮಾರ ವಯಸ್ಸು ನೋಡಿದರೆ ಭಾರತ ಕ್ರಿಕೆಟ್ ತಂಡದಲ್ಲಿ ಅವರ ಹೆಚ್ಚು ಕಾಲ ಉಳಿಯುವುದಿಲ್ಲ. ರೋಹಿತ್‍ಗೆ ಪ್ರಸ್ತುತ 35 ವರ್ಷವಾಗಿದೆ. ಇವರ ಬಳಿಕ ನಾಯಕತ್ವದ ಸಾಮರ್ಥ್ಯ ಹೊಂದಿರುವ ನಾಲ್ವರು ಆಟಗಾರರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಐಪಿಎಲ್‌ನಲ್ಲಿ 14 ಕೋಟಿಗೆ ಸೇಲ್‌ ಆಗಿದ್ದ ಎಂಎಸ್‌ ಧೋನಿ ಬಲಗೈ ಬಂಟ ಟೀಂ ಇಂಡಿಯಾಗೆ ಎಂಟ್ರಿ

 1. ರಿಷಭ್ ಪಂತ್

ರಿಷಭ್ ಪಂತ್ ಟೀಂ ಇಂಡಿಯಾದ ಮುಂದಿನ ನಾಯಕನಾಗಬಹುದು. ಕಳೆದ ಕೆಲವು ವರ್ಷಗಳಿಂದ ಎಲ್ಲಾ 3 ಮಾದರಿಯಲ್ಲೂ ಪಂತ್ ಅತ್ಯುತ್ತಮ ಆಟ ಪ್ರದರ್ಶಿಸಿದ್ದು, ಟೀಂ ಇಂಡಿಯಾದಲ್ಲಿ ಸ್ಥಾನ ಗಟ್ಟಿಮಾಡಿಕೊಂಡಿದ್ದಾರೆ. ಪಂತ್ ತಮ್ಮ ಚಾಣಾಕ್ಷತೆಯಿಂದ ಆಟವಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗಾಗಿ ಅವರು ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಂಡು ಪಂತ್ ತಂಡವನ್ನು ಉತ್ತಮವಾಗಿ ಮುನ್ನೆಡೆಸಿದ್ದರು.

 2. ಶುಭಮನ್ ಗಿಲ್

2020ರ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ತಮ್ಮ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದರು. ಆ ಪ್ರವಾಸದಲ್ಲಿ ಗಿಲ್ ವಿಶ್ವದ ಅತ್ಯುತ್ತಮ ಬೌಲರ್ ಪ್ಯಾಟ್ ಕಮಿನ್ಸ್ ಅವರನ್ನು ಉತ್ತಮವಾಗಿ ದಂಡಿಸಿದ್ದರು. ಅಲ್ಲದೆ ಭಾರತ ತಂಡದ ಸರಣಿ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 2019ರ ದೇವಧರ್ ಟ್ರೋಫಿಯಲ್ಲಿ ಶುಭಮನ್ ಗಿಲ್ ನಾಯಕರಾಗಿದ್ದರು. ಭಾರತ C ತಂಡದ ನಾಯಕರಾಗಿದ್ದಾಗ ಗಿಲ್ ಮೊದಲ ಪಂದ್ಯದಲ್ಲಿ 143 ರನ್‌ಗಳ ಅದ್ಭುತ ಶತಕ ಗಳಿಸಿದ್ದರು. ಇದಾದ ಬಳಿಕ ಭಾರತ C ತಂಡವು ಗಿಲ್ ನಾಯಕತ್ವದಲ್ಲಿ ಫೈನಲ್‌ ಪ್ರವೇಶಿಸಿತ್ತು. ಹೀಗಾಗಿ ಗಿಲ್ ಭಾರತ ತಂಡದ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: CWG 2022: ಲಾನ್ ಬೌಲ್ಸ್ ಫೈನಲ್‌ ಪ್ರವೇಶಿಸಿದ ಭಾರತ ಮಹಿಳಾ ಫೋರ್ಸ್: ಏಳನೇ ಪದಕ ಪಕ್ಕಾ

3. ಕೆ.ಎಲ್.ರಾಹುಲ್

ಭಾರತಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದರೆ ಕನ್ನಡಿಗ ಕೆ.ಎಲ್.ರಾಹುಲ್ ಉತ್ತಮ ಆಯ್ಕೆಯಾಗಿದೆ. ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಹಾಗೂ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2023ರಲ್ಲಿ ಭಾರತ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತದ ಮುಂದಿನ ನಾಯಕನಾಗುವ ಅವಕಾಶವಿದೆ. ರಾಹುಲ್ ಅದ್ಭುತ ವಿಕೆಟ್ ಕೀಪರ್ ಮತ್ತು ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದಾರೆ.

4. ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮುಂದಿನ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದು, ತಂಡದಲ್ಲಿ ಅವರ ಸ್ಥಾನ ಖಚಿತವಾಗಲು ಇದೇ ಕಾರಣ. ಸ್ಮಾರ್ಟ್ ಮೈಂಡ್ ಹೊಂದಿರುವ ಹಾರ್ದಿಕ್ ಪಾಂಡ್ಯ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಐಪಿಎಲ್ 2022ರಲ್ಲಿ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್‌ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News