ಹಾರ್ದಿಕ್ ಪಾಂಡ್ಯ, ನತಾಶಾ ವಿಚ್ಛೇದನ ಪಡೆಯುವುದಿಲ್ಲ! ಡಿವೋರ್ಸ್‌ ಸುದ್ದಿ ಸುಳ್ಳೇ?

Hardik Pandya Divorce: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಸುಳ್ಳಾಗಿದ್ದು, ದಂಪತಿಗಳು ಸ್ವತಃ ತಾವೇ ಡಿವೋರ್ಸ್‌ ವದಂತಿಯನ್ನು ಹರಡಿದ್ದಾರೆ ಎಂದು ನೆಟಿಜನ್ಸ್‌ ಹೇಳಿಕೊಂಡಿದ್ದಾರೆ..

Written by - Savita M B | Last Updated : May 27, 2024, 09:32 AM IST
  • ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ
  • ಆದರೆ, ಈ ಬಗ್ಗೆ ದಂಪತಿಗಳು ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ
ಹಾರ್ದಿಕ್ ಪಾಂಡ್ಯ, ನತಾಶಾ ವಿಚ್ಛೇದನ ಪಡೆಯುವುದಿಲ್ಲ! ಡಿವೋರ್ಸ್‌ ಸುದ್ದಿ ಸುಳ್ಳೇ?    title=

Natasa Stankovic Hardik Pandya Divorce: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ದಂಪತಿಗಳು ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ ಅಥವಾ ವಿಚ್ಛೇದನವನ್ನು ಖಚಿತಪಡಿಸಿಲ್ಲ. ಇದೆಲ್ಲದರ ಮಧ್ಯೆ ಇದೀಗ ಹಾರ್ದಿಕ್ ಮತ್ತು ನತಾಶಾ ವಿಚ್ಛೇದನದ ಸುಳ್ಳು ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹರಡಿದ್ದಾರೆ ಎಂದು ನೆಟಿಜನ್‌ಗಳು ಕಿಡಿಕಾರಿದ್ದಾರೆ. ಇದು ಹಾರ್ದಿಕ್ ಅವರ PR ತಂತ್ರದ ಭಾಗವಾಗಿದ್ದು, ಅದರ ಮೂಲಕ ಅವರು ಸಹಾನುಭೂತಿ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.. 

'ಅವರ ಮದುವೆಯ ಷರತ್ತುಗಳು ಸ್ಪಷ್ಟವಾಗಿವೆ...'
ರೆಡ್ಡಿಟ್‌ ಬಳಕೆದಾರರ ಪೋಸ್ಟ್‌ನ ಪ್ರಕಾರ 'ಮದುವೆಗೂ ಮುನ್ನವೇ ಗರ್ಭಿಣಿಯಾಗಿ ತಮ್ಮ ಸಂಬಂಧವನ್ನು ಮುಂದುವರೆಸಲು ಬಯಸಿ 2020 ರ ಹೊಸ ವರ್ಷದ ಸಮಯದಲ್ಲಿ ವಿವಾಹವಾದರು.. ಹೀಗೆ ಅವರ ಮದುವೆಯ ಷರತ್ತುಗಳು ಸ್ಪಷ್ಟವಾಗಿದ್ದು, ಇಬ್ಬರೂ ಯಾರೊಂದಿಗೆ ಬೇಕಾದರೂ ಬದುಕಬಹುದು" ಎಂದು ಬರೆಯಲಾಗಿದೆ..

ಇದನ್ನೂ ಓದಿ- IPL 2024: ವಿದಾಯ...ಇದು ಕೆಲವು ಶ್ರೇಷ್ಠರ ಕೊನೆಯ ಸೀಸನ್! ಈ 10 ಸ್ಟಾರ್‌ಗಳು ಮುಂದಿನ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ!?  

ವಿಚ್ಛೇದನದ ವದಂತಿಯನ್ನು ಸ್ವತಃ ಹಾರ್ದಿಕ್ ಮತ್ತು ನತಾಶಾ ಹರಡಿದ್ದಾರಾ?
ವೈರಲ್‌ ಪೋಸ್ಟ್‌ನ ಪ್ರಕಾರ 'ಈ ಹಠಾತ್ ವಿಚ್ಛೇದನದ ವದಂತಿಯು ಪರಸ್ಪರ ಒಪ್ಪಿಗೆಯೊಂದಿಗೆ ಮಾತ್ರ ಹರಡುತ್ತದೆ. ವಿಚ್ಛೇದನ ನಡೆಯುತ್ತಿಲ್ಲ ಆದರೆ ಸಂಪೂರ್ಣ ಐಪಿಎಲ್ ವೈಫಲ್ಯ ಮತ್ತು ಫ್ಲಾಪ್ ಶೋ ನಂತರ ಸಹಾನುಭೂತಿ ಪಡೆಯಲು ಹಾರ್ದಿಕ್ ಅವರೇ ಸ್ವತಃ ಈ ವದಂತಿಯನ್ನು ಹರಡಿದ್ದಾರೆ.. ಇಬ್ಬರೂ ಶೀಘ್ರದಲ್ಲೇ ಜಂಟಿ ಹೇಳಿಕೆಯನ್ನು ನೀಡುವ ಮೂಲಕ ತಾವೇ ಸೃಷ್ಟಿಸಿದ ಸುಳ್ಳು ಸುದ್ದಿಗೆ ತೆರೆ ಎಳೆಯುತ್ತಾರೆ" ಎಂದು ಬರೆಯಲಾಗಿದೆ..  

ಈಗ ಇತರ ಬಳಕೆದಾರರು ಸಹ ರೀ-ಆಟಿಡ್‌ನಲ್ಲಿನ ಈ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಿದ್ದಾರೆ.. ಆದರೆ ಈ ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ ಎಷ್ಟು ಸತ್ಯವಿದೆ ಎನ್ನುವುದನ್ನು ಖಚಿತಪಡಿಸಲಾಗುವುದಿಲ್ಲ..  

ಇದನ್ನೂ ಓದಿ- PL Final 2024 : ಭರ್ಜರಿ ಗೆಲುವಿನ ರಣಕಹಳೆ ಬಾರಿಸಿ ಚಾಂಪಿಯನ್ಸ್ ಆದ ಕೆಕೆಆರ್, ಹೀನಾಯ ಸೋಲಿನ ಹೊಣೆಹೊತ್ತ ಹೈದರಾಬಾದ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News